ಗೋಕಾಕ:ಶ್ರದ್ಧೆಯಿಂದ ಓದಿ ಶಾಲೆಯ ಕೀರ್ತಿಯನ್ನು ಬೆಳಗಿಸಿ – ವಿದ್ಯಾರ್ಥಿಗಳಿಗೆ ಅಶೋಕ ಪರುಶೆಟ್ಟಿ ಕರೆ
ಶ್ರದ್ಧೆಯಿಂದ ಓದಿ ಶಾಲೆಯ ಕೀರ್ತಿಯನ್ನು ಬೆಳಗಿಸಿ – ವಿದ್ಯಾರ್ಥಿಗಳಿಗೆ ಅಶೋಕ ಪರುಶೆಟ್ಟಿ ಕರೆ
ಗೋಕಾಕ ಫೆ 22: ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಹಗಲಿರುಳು ದುಡಿಯಲು ಸಿದ್ಧವಿದೆ. ಸಂಸ್ಥೆಗೆ 70 ವರ್ಷಗಳು ತುಂಬಿದ ಪ್ರಯುಕ್ತ ಹೊಸ ವರ್ಗಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕಾಗಿ ಶಿಕ್ಷಕ ವೃಂದವು ಶ್ರಮಿಸಬೇಕು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಉತ್ತಮ ಫಲಿತಾಂಶದೊಂದಿಗೆ ಊರಿನ-ಶಾಲೆಯ ಕೀರ್ತಿಯನ್ನು ಬೆಳಗಿಸಬೇಕೆಂದು ಮಾದರಿ ಶಿಕ್ಷಣ ಸಂಸ್ಥೆಯ ಚೇರಮನ್ ಅಶೋಕ ಪರುಶೆಟ್ಟಿ ಹೇಳಿದರು.
ಪಟ್ಟಣದ ಎಂ.ಇ. ಸೊಸೈಟಿಯ ಅಂಬರೀಷ ವರ್ಮ ದೇಸಾಯಿ ಪ್ರೌಢ ಶಾಲೆಯ 2017-18ನೇ ಸಾಲಿನ ವಾರ್ಷಿಕ ಸ್ನೇಹ ಸ್ಮಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಅರ್ಬನ್ ಬ್ಯಾಂಕ್ ಚೇರಮನ್ ಡಾ.ರಾಜೇಂದ್ರ ಸಣ್ಣಕ್ಕಿ ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳ ಭೌದ್ಧಿಕ ವಿಕಸನಕ್ಕಾಗಿ ಪಟ್ಟಣದ ಶಿಕ್ಷಣ ಸಂಸ್ಥೆಗಳ ಮಧ್ಯ ಗುಣಾತ್ಮಕವಾದ ಸ್ಪರ್ಧೆಯಿದೆ. ಪ್ರತಿ ಶಿಕ್ಷಣ ಸಂಸ್ಥೆಯು ಉತ್ತಮ ಪ್ರತಿಭೆಗಳನ್ನು ಹುಟ್ಟುಹಾಕುತ್ತಿದೆ. ಪ್ರತಿಭೆಯೆಂಬುದು ಯಾರ ಮನೆಯ ಸ್ವತ್ತಲ್ಲ ಅದು ದೈವದತ್ತವಾಗಿ ಬಂದಂಥದ್ದೆಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಜ್ಞಾನ ಗಂಗೋತ್ರಿ ಶಾಲೆಯ ಚೇರಮನ್ ಶಿವಾನಂದ ಲೋಕನ್ನವರ, ಅರ್ಬನ್ ಬ್ಯಾಂಕ್ ನಿರ್ದೇಶಕ ಸುಭಾಸ ಕೌಜಲಗಿ ಮಾತನಾಡಿದರು. 2017 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕುಮಾರಿ ಲಕ್ಷ್ಮೀ ಬಳೋಲದಾರ, ಬಸವರಾಜ ಕೋರಿ, ಪಾರ್ವತಿ ಗೀಸನಿಂಗವ್ವಗೋಳ ಮತ್ತು ಲಕ್ಷ್ಮೀ ಹೊಸಮನಿ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಗಳಿಂದ ನಗದು ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗೌರವಿಸಲಾಯಿತು. ರಾತ್ರಿ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಭೋವಿ, ಕೌಜಲಗಿ ಜಿ.ಪಂ. ಸದಸ್ಯೆ ಶಕುಂತಲಾ ಪರುಶೆಟ್ಟಿ, ತಾ.ಪಂ. ಸದಸ್ಯ ಶಾಂತಪ್ಪ ಹಿರೇಮೇತ್ರಿ, ಗ್ರಾ.ಪಂ. ಅಧ್ಯಕ್ಷ ರಾಯಪ್ಪ ಬಳೋಲದಾರ, ಸಂಸ್ಥೆಯ ಉಪಾಧ್ಯಕ್ಷ ದುಂಡಪ್ಪ ಗಾಣಿಗೇರ, ಅಶೋಕ ಕೋಟಿನತೋಟ, ಗುರುಪಾದ ಬಳಿಗಾರ, ಜಗದೀಶ ಭೋವಿ, ಇಮಾಮಸಾಬ ಹುನ್ನೂರ, ಗೌರುತಾಯಿ ಭೋವಿ, ಅಕ್ಬರ್ ಮುಲ್ತಾನಿ, ಅರವಿಂದ ಪಾಟೀಲ, ಈರಪ್ಪ ಹುದ್ದಾರ, ಗಂಗಾಧರ ಕತ್ತಿ, ಹಬೀಬ ಮುಲ್ತಾನಿ, ಜಾಕೀರ ಜಮಾದಾರ, ನೀಲಪ್ಪ ಕೇವಟಿ, ಮಹೇಶ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಾನಿಧ್ಯವನ್ನು ಶ್ರೀಕಾಂತ ವಿರಕ್ತಮಠ ಸ್ವಾಮಿಗಳು ವಹಿಸಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥನೆ, ಸ್ವಾಗತಗೀತೆ ಹಾಡಿದರು. ವೈ.ಎಸ್.ಜಗ್ಗಿನವರ ಸ್ವಾಗತಿಸಿದರು. ಶಿಕ್ಷಕಿ ಎಂ.ಎಂ.ಮುರಗೋಡ ಹಾಗೂ ಕರಿಬಸಪ್ಪ ನಿರೂಪಿಸಿದರು. ಎಸ್.ಬಿ.ಗಾಣಿಗೇರ ವಂದಿಸಿದರು.