ಘಟಪ್ರಭಾ:ಅರಭಾವಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ : ಶಾಸಕ ಬಾಲಚಂದ್ರ
ಅರಭಾವಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ : ಶಾಸಕ ಬಾಲಚಂದ್ರ
ಘಟಪ್ರಭಾ ಫೆ 23 : ಅರಭಾವಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ಶೈಕ್ಷಣಿಕ ಅಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ಮಹಾಕಾಳಿ ಶಿಕ್ಷಣ ಸಂಸ್ಥೆಯ ಸಿದ್ಧರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ 29ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಶಿಂದಿಕುರಬೇಟ ಗ್ರಾಮವು ಅರಭಾವಿ ಮತಕ್ಷೇತ್ರದಲ್ಲಿದ್ದಾಗ ನಾನು ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮಸ್ಥರು ನಮ್ಮ ಕುಟುಂಬದ ಮೇಲೆ ಇಟ್ಟ ಪ್ರೀತಿ ವಿಶ್ವಾಸವೇ ಕಾರಣ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ದಿಗೆ ಸಹಕರಿಸಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಶಾಸಕರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶಿಕ್ಷಣ ಸಂಸ್ಥೆಯಿಂದ ಸತ್ಕರಿಸಲಾಯಿತು.
ಶಿಕ್ಷಕ ಜಿ.ಎನ್.ಸಾಂಗಲಿ ವಿಶೇಷ ಉಪನ್ಯಾಸ ನೀಡಿದರು.
ಕೆಆರ್ ಎಚ್ ಶಿಕ್ಷಣ ಸಂಸ್ಥೆಯ ಚೇರಮನ್ ರಾಮಣ್ಣಾ ಹುಕ್ಕೇರಿ ಮಾತನಾಡಿ ಶಿಕ್ಷಣ ಸಂಸ್ಥೆಗಳ ಅಂತಸ್ತು ನೋಡಿ ಮಕ್ಕಳಿಗೆ ಶಿಕ್ಷಣ ಕೊಡಬೇಡಿ. ಉತ್ತಮ ಶಿಕ್ಷಣ, ಸಂಸ್ಕಾರ ನೀಡುವಂತಹ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಸದಸ್ಯರ ಕರ್ತವ್ಯ ಮುಖ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಳೀಯ ಅಧ್ಯಕ್ಷ ಜ್ಯೋತೆಪ್ಪ ಬಂತಿ ವಹಿಸಿದ್ದರು.
ಸಮಾರಂಭದ ಸಾನಿಧ್ಯವನ್ನು ದೇವಋಷಿ ಮುರೇಪ್ಪ ಪೂಜೇರಿ, ದುಂಡಯ್ಯ ಹಿರೇಮಠ ವಹಿಸಿದ್ದರು.
ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷ ದಾವಲ ದಬಾಡಿ, ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ಜಿ.ಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ಪಿಕೆಪಿಎಸ್ ಅಧ್ಯಕ್ಷ ದಿನೇಶ ಕಡೇಲಿ, ಕೆ.ಎಂ.ಎಫ್ ಅಧ್ಯಕ್ಷ ರವಿ ಕಾಳ್ಯಾಗೋಳ, ಮಾರುತಿ ಜಾಧವ, ಗೋವಿಂದ ಗಾಡಿವಡ್ಡರ, ಕೆ.ಆರ್.ಅಜ್ಜಪ್ಪನವರ, ಮಾರುತಿ ಶಿರಗುರಿ, ಸಾತಪ್ಪ ಜೈನ, ಬಿ.ಎಂ.ಕಳಸನ್ನವರ, ಇಸಾಕ ಅನಸಾರಿ, ರಾಮಪ್ಪ ಜೋತ್ತೇನ್ನವರ, ರಾಮಪ್ಪ ಕಟ್ಟಿಕಾರ, ಎಂ.ಡಿ.ತಟಗಾರ, ಮಾನಿಂಗ ತೆಳಗೇರಿ, ಬಾಳು ದೇವಮಾನೆ, ಬಸವರಾಜ ಪೂಜೇರಿ,ಮಂಜುನಾಥ ಗುಡಕೇತ್ರ, ನಾಗಲಿಂಗ ಪೋತದಾರ, ಅಡಿವೆಪ್ಪ ಹಳ್ಳಿ, ಮಹಾದೇವ ಇಟ್ಯಾಗೋಳ, ಆದಮಸಾಬ ಮಕಾನದಾರ, ಮುತ್ತೇಪ್ಪ ಜೊತ್ತೇನ್ನವರ, ಶಂಕರ ಕಟ್ಟಿಮನಿ, ಪ್ರಧಾನ ಗುರು ಎಂ.ಆರ್.ಕಡಕೋಳ ಸೇರಿದಂತೆ ಇತರರು ಇದ್ದರು.
ಆದರ್ಶ ವಿದ್ಯಾರ್ಥಿಗಳಿಗೆ, ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತಸಲಾಯಿತು. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು.