ಅಥಣಿ:ಪ್ರಧಾನಿ ಮೋದಿ ಬ್ಯಾಂಕಗಳನ್ನು ಲೂಟಿ ಮಾಡುತ್ತಿದ್ದಾರೆ : ಎಐಸಿಸಿ ಕಾರ್ಯದರ್ಶಿ ಸತೀಶ ವಾಗ್ದಾಳಿ
ಪ್ರಧಾನಿ ಮೋದಿ ಬ್ಯಾಂಕಗಳನ್ನು ಲೂಟಿ ಮಾಡುತ್ತಿದ್ದಾರೆ : ಎಐಸಿಸಿ ಕಾರ್ಯದರ್ಶಿ ಸತೀಶ ವಾಗ್ದಾಳಿ
ಅಥಣಿ ಫೆ 24: ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭಾಷಣಗಳಲ್ಲಿ ,ವಿದೇಶಗಳಲ್ಲಿ ಕಾಲ ಕಳೆದು ಬ್ಯಾಂಕಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಜನಾರ್ಶಿವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು
ಕೇಂದ್ರ ಬಿಜೆಪಿ ಸರಕಾರ ಯುವಕರಿಗೆ ಉದ್ಯೋಗ ನೀಡುವ ಸುಳ್ಳು ಭರವಸೆ ನೀಡಿ ಅಧಿಕಾರ ಗೀಟ್ಟಿಸಿದ್ದಾರೆ ಈಗ ಕಾಲ ಕೂಡಿಬಂದಿದೆ ಎಲ್ಲರೂ ಒಟ್ಟಿನಿಂದ ಶ್ರಮಿಸಿ ರಾಜ್ಯದಲ್ಲಿ ಕಾಂಗ್ರೇಸ ಪಕ್ಷಕ್ಕೆ ಅಧಿಕಾರ ನೀಡುವ ಮುಖೇನ ತಕ್ಕ ಪಾಠ ಕಲಿಸಬೇಕಾಗಿದೆ . ಅಥಣಿ ಜನಾರ್ಶಿವಾದ ಯಾತ್ರೆ ಪಕ್ಷದ ಶಕ್ತಿ ಹೆಚ್ಚಿಸಿದ್ದು ಅಥಣಿ ಮತಕ್ಷೇತ್ರ ಈ ಭಾರಿ ಕಾಂಗ್ರೆಸ್ ಪಾಲಾಗುವುದನ್ನು ಖಚಿತ ಪಡಿಸಿದೆ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳಿಸಿ ಪಕ್ಷದ ಶಕ್ತಿ ವೃದ್ದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಆ ದಿಸೆಯಲ್ಲಿ ಎಲ್ಲ ನಾಯಕರು ಶ್ರಮಿಸಬೇಕು . ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಗೀಟ್ಟಿಸಲು ಪ್ರಯತ್ನಿಸುತ್ತಿರುವ ಬಿಜಿಪಿಯನ್ನು ಬೆಂಬಲಿಸದೆ ಜಾತ್ಯತೀತ ಪಕ್ಷ , ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಕರೆ ನೀಡಿದರು