ಗೋಕಾಕ:ನಾಡಿನ ಗೌರವ ಉಳಿಸಿ ಬೆಳೆಸಲು ಸತೀಶ ಶುರ್ಗಸ ಅರ್ವಾಡ್ಸ ಪೂರಕವಾಗಿದೆ : ಶಾಸಕ ಸತೀಶ
ನಾಡಿನ ಗೌರವ ಉಳಿಸಿ ಬೆಳೆಸಲು ಸತೀಶ ಶುರ್ಗಸ ಅರ್ವಾಡ್ಸ ಪೂರಕವಾಗಿದೆ : ಶಾಸಕ ಸತೀಶ
ಗೋಕಾಕ ಫೆ 25: ನಾಡಿನ ಗೌರವ ಉಳಿಸಿ ಬೆಳೆಸಲು ಕಳೆದ 17 ವರ್ಷಗಳಿಂದ ನಡೆಸಲಾಗುತ್ತಿರುವ ಸತೀಶ ಶುರ್ಗಸ ಅರ್ವಾಡ್ಸ ಸಂಸ್ಕೃತಿ ಕಾರ್ಯಕ್ರಮ ಗ್ರಾಮೀಣ ಪ್ರತಿಭೆಗಳಿಗೆ ಬಹು ದೊಡ್ಡ ವೇದಿಕೆಯಾಗಿದೆ ಮುಂಬರುವ ದಿನಗಳಲ್ಲಿ ಇನ್ನಷ್ಟು ವೈಶಿಷ್ಟ್ಯ ಪೂರ್ಣವಾಗಿ ಈ ಕಾರ್ಯಕ್ರಮ ರೂಪಗೊಳ್ಳಲ್ಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ನಗರದ ಹಿಲ್ ಗಾರ್ಡನ್ ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 17ನೇ ಸತೀಶ ಶುರ್ಗಸ ಅರ್ವಾಡ್ಸ ಅಂತಿಮ ಹಂತದ ಸಂಸ್ಕೃತಿ ಸ್ವರ್ಧೆಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಔತಣಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಪ್ರತಿ ವರ್ಷ ಒಂಬತ್ತು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸಾವಿರಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗಿದೆ ಇದು ನಿರಂತರವಾಗಿ ನಡೆಯಲಿದೆ ಇಂತಹ ಕಾರ್ಯಕ್ರಮ ನಡೆಸುತ್ತಿರುವುದರಿಂದ ಸಮಾಜ ಕಟ್ಟಲು ಸಾಧ್ಯವಾಗಿದೆ ಹಾಗಾಗಿ ನಾವು ಸಮಾಜಸೇವೆಗೆ ಪ್ರತಮ ಪ್ರಾಶಸ್ತ್ಯ ನೀಡುತಿರುವ ಹಿನ್ನೆಲೆಯಲ್ಲಿ ಈ ಪ್ರತಿಭೆಗಳು ಭವಿಷ್ಯತಿನಲ್ಲಿ ಸಮಾಜ ಕಟ್ಟಲು ಸಾಧ್ಯಾವಾಗುತ್ತಿದೆ ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು .
ಮುಂದಿನ ವರ್ಷ ನಡೆಯುವ 18ನೇ ಸತೀಶ ಶುಗರ್ಸ ಅರ್ವಾಡ್ಸ ಸೇರಿದಂತೆ ಒಂಬತ್ತು ಕಾರ್ಯಕ್ರಮಗಳ ನೇತೃತ್ವವನ್ನು ನನ್ನ ಮಕ್ಕಳಾದ ಪ್ರೀಯಾಂಕಾ ಜಾಕಿಹೊಳಿ ಮತ್ತು ರಾಹುಲ ಜಾರಕಿಹೊಳಿ ವಹಿಸಿಕೊಂಡು ಅಧ್ಯಕ್ಷೀಯ ಭಾಷಣ ಮಾಡಲ್ಲಿದಾರೆ ಅವರು ಇಂದಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು .
ಮೌಢ್ಯ ಮುಕ್ತ ಸಮಾಜ , ಸಮ ಸಮಾಜ ಮತ್ತು ಸಮಾಜದಲ್ಲಿ ಪರಿವರ್ತನೆ ತರುವ ನೀಟ್ಟಿನಲ್ಲಿ ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ನಿರಂತರ ಹೊರಾಟ ನಡೆಸಿದ್ದ ಪರಿಣಾಮ ಇಂದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದೆ ಈ ಹೋರಾಟವನ್ನು ಇನ್ನು ಮುಂದೆ ನನ್ನ ಮಕ್ಕಳು ಮುಂದೆವರೆಸುತ್ತಾರೆ ಯಾವ ರೀತಿ ನನ್ನನ್ನು ಸಹಕರಿಸಿದ್ದಿರಿ ಅವರನ್ನು ಸಹ ಸಹಕರಿಸಬೇಕು ಇದರ ಅರ್ಥ ನಾನು ನಿವೃತ್ತಿ ಹೊಂದುತೆನೆಂದು ಭಾವಿಸಬೇಡಿ ನಾನು ಹೆಚ್ಚಿನ ಸಮಯ ಸಾಮಾಜ ಸೇವೆಯಲ್ಲಿ ಕಳೆಯಬೇಕಾಗಿದ್ದರಿಂದ ಈ ಕಾರ್ಯಕ್ರಮಗಳ ಹೊಣೆಯನ್ನು ನನ್ನ ಮಕ್ಕಳಿಗೆ ವಯುಸುತ್ತಿದ್ದೆನೆ ಕಳೆದ ಮೂರು ದಶಕಗಳ ಅವದಿಯಲ್ಲಿ ಐದು ಜನ ಮುಖಂಡರನ್ನು ಬೆಳೆಸುವುದರ ಮೂಲಕ ಇಂದು ಸಾವಿರಾರು ಮುಖಂಡರನ್ನು ಬೆಳೆಸಿದ್ದೆವೆ ಈ ಎಲ್ಲ ಮುಖಂಡರು ಇದರ ಸುದುಉಯೋಗ ಪಡೆಸಿಕೋಳ್ಳಬೇಕು ಎಂದು ಸತೀಶ ಹೇಳಿದರು .
ಸಾಮಾಜಿಕವಾಗಿ ಯಾರು ಯಶ್ವಸಿಯಾಗುತ್ತಾರೊ ಅವರು ಎಲ್ಲ ರಂಗಗಳಲ್ಲಿ ಯಶ್ವಸಿ ಯಾಗುತ್ತಾರೆ ಈ ದೀಸೆಯಲ್ಲಿ ನಮ್ಮ ಮುಖಂಡರು ಸಾಗಬೇಕು ಆರೋಗ್ಯಕರ ಸಮಾಜ ನಿರ್ಮಾಣದತ್ತ ಕೇಂದ್ರಿಕೃತವಾಗಬೇಕೆಂದು ಶಾಸಕರು ಸಲಹೆ ನೀಡಿದರು
ಇದೇ ಸಂದರ್ಭದಲ್ಲಿ 17ನೇ ಸತೀಶ ಶುರ್ಗಸ ಅರ್ವಾಡ್ಸ ಸಂಸ್ಕೃತಿಕ ಸ್ವರ್ಧೆಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು
ಸಮಾರಂಭದ ವೇದಿಕೆಯಲ್ಲಿ ರಾಹುಲ ಸತೀಶ ಜಾರಕಿಹೊಳಿ , ಎಸ್.ಎ.ರಾಮಗಾನಟ್ಟಿ , ರಿಯಾಜ ಚೌಗಲಾ ಉಪಸ್ಥಿತರಿದ್ದರು