ಗೋಕಾಕ:ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ : ಶಾಸಕ ಬಾಲಚಂದ್ರ ಕಿವಿಮಾತು
ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ : ಶಾಸಕ ಬಾಲಚಂದ್ರ ಕಿವಿಮಾತು
ಗೋಕಾಕ ಫೆ 25 : ಅಭಿವೃದ್ಧಿ ಕಾರ್ಯಗಳಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಿವಿಮಾತು ಹೇಳಿದರು.
ಶನಿವಾರದಂದು ಕೌಜಲಗಿ ಗ್ರಾಮ ಪಂಚಾಯತಿ ಹೊಸ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನೀಲಪ್ಪ ಕೇವಟಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ದುಡಿಯುವಂತೆ ಸಲಹೆ ಮಾಡಿದರು.
ದೇಶದ ಭೂಪಟದಲ್ಲಿ ಕೌಜಲಗಿ ಗ್ರಾಮ ಪಂಚಾಯತಿಗೆ ಐದನೇ ಸ್ಥಾನ ಹಾಗೂ ರಾಜ್ಯದಲ್ಲಿ ನಂ.1 ಸ್ಥಾನವು ಲಭಿಸಿದೆ. ಪಂಚಾಯತಿಯಿಂದ ಇನ್ನೂ ಹೆಚ್ಚಿನ ಸಾಧನೆ ನಡೆಯಲಿ. ಕೌಜಲಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಿದ್ಧರಿರುವುದಾಗಿ ಹೇಳಿದರು.
ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕೌಜಲಗಿಯಲ್ಲಿ ಸಾಮಾಜಿಕ ನ್ಯಾಯದ ತತ್ವದಡಿ ಕಳೆದ 20 ವರ್ಷಗಳಿಂದ ಎಲ್ಲ ಸಮಾಜಗಳಿಗೆ ಅಧಿಕಾರ ನೀಡಲಾಗಿದೆ. ಕೌಜಲಗಿ ಪಟ್ಟಣವನ್ನು ಮಾದರಿಯನ್ನಾಗಿ ಮಾಡುತ್ತಿರುವುದರಿಂದಲೇ ಕೇಂದ್ರ ಸರ್ಕಾರ ನಮ್ಮ ಪಂಚಾಯತಿಗೆ ಅಭಿವೃದ್ಧಿಗೋಸ್ಕರ ಪುರಸ್ಕಾರ ನೀಡಿದೆ. ಶಾಸಕರ ಮಾರ್ಗದರ್ಶನದಲ್ಲಿ ಕೌಜಲಗಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಯಪ್ಪ ಬಳೋಲದಾರ, ಎಸ್.ಬಿ. ಹಳ್ಳೂರ, ಬಸಪ್ಪ ಕುಂದರಗಿ, ಮುಖಂಡರಾದ ರಮ್ಜಾನ್ ಪೋದಿ, ಹೊಳೆಪ್ಪ ಯಲಿಗಾರ, ಅಶೋಕ ಪೂಜೇರಿ, ಫಕೀರಪ್ಪ ಪೂಜನ್ನವರ, ಗ್ರಾಪಂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.