ಮೂಡಲಗಿ:ಪಟಗುಂದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗೊರಬಾಳ ಉಪಾಧ್ಯಕ್ಷರಾಗಿ ತಳವಾರ ಆಯ್ಕೆ
ಪಟಗುಂದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗೊರಬಾಳ ಉಪಾಧ್ಯಕ್ಷರಾಗಿ ತಳವಾರ ಆಯ್ಕೆ
ಮೂಡಲಗಿ ಫೆ 25 : ಸಮೀಪದ ಪಟಗುಂದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಅಕ್ಕವ್ವಾ ಕಲ್ಲೋಳಿ ಗೊರಬಾಳ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಲಕ್ಷ್ಮಣ ತಳವಾರ ಅವರು ಆಯ್ಕೆಯಾಗಿದ್ದಾರೆ.
ಶುಕ್ರವಾರದಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ‘ಅ’ ವರ್ಗ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಅಕ್ಕವ್ವಾ ಗೋರಬಾಳ ಅವರು 9 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಮಾಯವ್ವ ಸಿದ್ರಾಮ ಕರಮಸಿ ಅವರು 3 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಿದ್ದು, ಈ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಗೋಕಾಕ ಸಿಡಿಪಿಓ ಅರುಣ ನಿರಗಟ್ಟಿ ತಿಳಿಸಿದ್ದಾರೆ.
ಅಭಿವೃದ್ಧಿಗೆ ಶ್ರಮಿಸಿ : ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಪಟಗುಂದಿ ಗ್ರಾಮದ ಅಭಿವೃದ್ಧಿಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಸರ್ವ ಸದಸ್ಯರ ಸಹಕಾರ ಪಡೆದು ಶ್ರಮಿಸುವಂತೆ ತಿಳಿಸಿದರು.
ಪಟಗುಂದಿ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು. ಅಭಿವೃದ್ಧಿಯಲ್ಲಿ ತಾರತಮ್ಯ ಎಸಗಬೇಡಿ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವಂತೆ ಗ್ರಾಪಂ ಸದಸ್ಯರಿಗೆ ಕಿವಿಮಾತು ಹೇಳಿದರು.
ಗ್ರಾಪಂ ನೂತನ ಅಧ್ಯಕ್ಷೆ ಅಕ್ಕವ್ವಾ ಗೊರಬಾಳ, ಉಪಾಧ್ಯಕ್ಷ ಬಸವರಾಜ ತಳವಾರ, ಚನಗೌಡ ಪಾಟೀಲ, ರಾಜು ಕಸ್ತೂರಿ, ನಾಯ್ಕಪ್ಪ ಪಾಟೀಲ, ಮಹಾದೇವ ಬಿಜಗುಪ್ಪಿ, ಪರಸಪ್ಪ ಉಪ್ಪಾರ, ಬಾಳೇಶ ಬನಟ್ಟಿ, ಬಾಹುಬಲಿ ಬೋಳಿ, ರಮಜಾನ್ ಮುಲ್ತಾನಿ, ಬಸು ಸರ್ವಿ, ರಮೇಶ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.