RNI NO. KARKAN/2006/27779|Saturday, December 14, 2024
You are here: Home » breaking news » ಘಟಪ್ರಭಾ:ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ಪ.ಪಂ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಘಟಪ್ರಭಾ:ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ಪ.ಪಂ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 

ಮಲ್ಲಾಪೂರ ಪಿ.ಜಿ ಪ.ಪಂ ಕಾರ್ಯಾಲಯದ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿರುವ ನೌಕರರು.

ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ಪ.ಪಂ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಘಟಪ್ರಭಾ ಫೆ 27 : ಗ್ರಾಮ ಪಂಚಾಯತಿಯಿಂದ ಮೇಲ್ದರ್ಜೆಗೆ ಏರಿದ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ದಿನಗೂಲಿ ನೌಕರರನ್ನು ಖಾಯಂಗೊಳಿಸುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯತಿಯ 30 ಕ್ಕೂ ಹೆಚ್ಚು ನೌಕರರು ಹಾಗೂ ಸಿಬ್ಬಂದಿಗಳು ಮಂಗಳವಾರದಂದು ಪ.ಪಂ ಕಾರ್ಯಾಲಯದ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.
ಮಲ್ಲಾಪೂರ ಪಿ.ಜಿ ಗ್ರಾಮ ಪಂಚಾಯತಿಯು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು, 23 ಕ್ಕೂ ಹೆಚ್ಚು ಜನ ಡಿ ಗ್ರೂಫ್ ನೌಕರರು ಹಾಗೂ 7 ಜನ ಗುಮಾಸ್ತ ಹಾಗೂ ಕಂಪ್ಯೂಟರ್ ಆಪರೇಟರ್‍ಗಳು ಪಟ್ಟಣ ಪಂಚಾಯಯತಿಯಲ್ಲಿ ಗ್ರಾಮ ಪಂಚಾಯತಿಯಿಂದ ಮುಂದುವರೆದ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಎಲ್ಲ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ದೊರಕಿಲ್ಲ.
ಪೌರಾಡಳಿತ ನಿರ್ದೇಶನಾಲಯದ ಹೊಸ ಆದೇಶ ಪ್ರಕಾರ ಡಿ ಗ್ರೂಫ್ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಹೊಸದಾಗಿ ನೇಮಕ ಮಾಡಿಕೊಳ್ಳಬೇಕೆಂದು ಆದೇಶಿಸಲಾಗಿದೆ. ಅಲ್ಲದೇ 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರನ್ನು ನೇಮಕ ಮಾಡಿಕೊಳ್ಳಬಾರದೆಂದು ಸೂಚಿಸಲಾಗಿದೆ.
ಪೌರಾಡಳಿತ ಇಲಾಖೆಯ ಈ ಆದೇಶದಿಂದ ಪ.ಪಂ 30 ಕ್ಕೂ ಹೆಚ್ಚು ನೌಕರರು ಅತಂತ್ರ ಸ್ಥಿತಿಯಲಿದ್ದಾರೆ.
ಇಲಾಖೆಯ ಆದೇಶದ ವಿರುದ್ಧ ಸಿಡಿದ್ದೆದ್ದಿರುವ ನೌಕರರು ಪ್ರತಿಭಟನೆ ಹಾದಿ ಹಿಡಿದ್ದಿದ್ದಾರೆ. ತಮ್ಮ ಪ್ರಮುಖ ಬೇಡಿಕೆಗಳಾದ, ಗ್ರಾ.ಪಂ ಠರಾವ ಮೂಲಕ ನೇಮಕಗೊಂಡ ಸಿಬ್ಬಂದಿಗಳನ್ನು ಖಾಯಂಗೊಸಬೇಕು. ಪೌರಕಾರ್ಮಿಕರ ನೇರ ನೇಮಕಾತಿ ಮಾಡಿಕೊಳ್ಳುವಾಗ ವಯಸ್ಸು ಮಿತಿಯನ್ನು 45 ವರ್ಷಕ್ಕೆ ಸಿಮೀತಗೊಳಿಸಿರುವುದನ್ನು ರದ್ದುಪಡಿಸಬೇಕು. ಹೊರ ಗುತ್ತಿಗೆ ಪದ್ದತಿಯನ್ನು ಕೈಬಿಡಬೇಕು. ಕಳೆದ 4 ತಿಂಗಳ ವೇತನವನ್ನು ನೀಡಬೇಕು ಎಂದು ಧರಣಿ ನಿರತ ನೌಕರರು ಆಗ್ರಹಿಸದ್ದಾರೆ.
ಕಳೆದ 3 ವರ್ಷಗಳಿಂದ ನಮ್ಮನ್ನ ಕಾಯಂಗೊಳಿಸಲು ಸರಕಾರಕ್ಕೆ ಮತ್ತು ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿ ಬೆಂಗಳೂರು ವರೆಗೆ ಹೋಗಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದರೆ ನಮ್ಮ ಯಾವ ಪ್ರಯತ್ನಕ್ಕೂ ಸರಕಾರ ಹಾಗೂ ಅಧಿಕಾರಿಗಳು ಸ್ಪಂಧನೆ ನೀಡದಿದ್ದರಿಂದ ಅನಿವಾರ್ಯವಾಗಿ ಅನಿರ್ಧಿಷ್ಠ ಧರಣಿ ಕೈಕೊಳ್ಳಬೇಕಾಗಿದೆ ಕೂಡಲೆ ನಮ್ಮ ಬೇಡಿಕೆಯನ್ನು ಈಡೇರಿಸಿದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವೃಗೊಳಿಸಿವುದಾಗಿ ಪ್ರತಿಭಟನೆಯ ನೇತೃತ್ವವಹಿಸಿರುವ ಗುಮಾಸ್ತ ಆನಂದ ಬಡಾಯಿ ತಿಳಿಸಿದ್ದಾರೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಲ್ಲ ಸಿಬ್ಬಂದಿಗಳನ್ನು ಕಾಯಂಗೊಳಿಸಿ ಅವರ ಹಿಂದಿನ ಸೇವೆಯನ್ನು ಪರಿಗಣಿಸಿ ಕೆಲಸದಲ್ಲಿ ಮುಂದುವರಿಸಿ ವೇತನ ನೀಡಲಾಗುತ್ತಿದೆ. ಆದರೆ ಇನ್ನುಳಿದ ಜಿಲ್ಲೆಗಳಲ್ಲಿ ತಾರತಮ್ಯ ಮಾಡಿ ಸಿಬ್ಬಂದಿಗಳಿಗೆ ಸರಕಾರ ಹಿಂಸೆ ನೀಡುತ್ತಿದೆ ಎಂದು ನೌಕರರ ಆರೋಪವಾಗಿದೆ.
ಧರಣಿಯಲ್ಲಿ ಆರ್.ಜಿ.ತಂಗೆವ್ವಗೋಳ, ಆರ್.ಎನ್.ಸದಲಗಿ, ಆರ್.ಎಚ್.ಬೆಲ್ಲದ, ಎಸ್. ವಾಯ್.ಮಾದರ, ಯು.ಎ.ಪವಾರ, ಎಮ್.ಆಯ್. ಮಕಾನದಾರ, ಮಹಾವೀರ ಕೆಂಪವ್ವಗೋಳ, ಸಿದ್ದಪ್ಪಾ ಬಾಗನ್ನವರ, ಪ.ಪಂ ಎಲ್ಲ ಕಾರ್ಮಿಕರು ಸಿಬ್ಬಂದಿಗಳು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಮುಖಂಡರಾದ ಎಸ.ಹೆಚ್.ಸರ್ವಣ್ಣವರ, ಅರ್ಜುನ ಗಂಡವ್ವಗೋಳ, ಶಂಕರ ಹಂಚಿನಾಳ, ವಿರಭದ್ರ ಗಂಡವ್ವಗೋಳ, ಪರಶುರಾಮ ಗೋಕಾಕ, ಬಸವರಾಜ ಚಿಂಚಲಿ, ರಾಜು ದೊಡಮನಿ, ಪಟ್ಟಣ ಪಂಚಾಯತದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಧರಣಿಗೆ ಬೆಂಬಲ ಸೂಚಿಸಿದ್ದಾರೆ.

Related posts: