RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ರಿಯಾಜ ಚೌಗಲಾ ರಿಂದ ದೇಶದಲ್ಲಿ ಮೊದಲ ಪ್ರಯೋಗ : ಗೋಕಾಕದಲ್ಲಿ ಸಿಂಪೊನಿ ಆರ್ಕೆಸ್ಟ್ರಾದಿಂದ ಲೈವ್ ಗಾಯನ

ಗೋಕಾಕ:ರಿಯಾಜ ಚೌಗಲಾ ರಿಂದ ದೇಶದಲ್ಲಿ ಮೊದಲ ಪ್ರಯೋಗ : ಗೋಕಾಕದಲ್ಲಿ ಸಿಂಪೊನಿ ಆರ್ಕೆಸ್ಟ್ರಾದಿಂದ ಲೈವ್ ಗಾಯನ 

ರಿಯಾಜ ಚೌಗಲಾ ರಿಂದ ದೇಶದಲ್ಲಿ ಮೊದಲ ಪ್ರಯೋಗ : ಗೋಕಾಕದಲ್ಲಿ ಸಿಂಪೊನಿ ಆರ್ಕೆಸ್ಟ್ರಾದಿಂದ ಲೈವ್ ಗಾಯನ

ಗೋಕಾಕ ಫೆ 28: ಸಾಹಿತಿಕವಾಗಿ, ಕಲಾತ್ಮಕವಾಗಿ, ಕ್ರೀಡಾತ್ಮಕವಾಗಿ ಗೋಕಾಕ ನಗರ ಪ್ರಸ್ತುತ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಬರುವ ದಿನಾಂಕ: 04 ರಂದು ಸಾಯಂಕಾಲ ನಗರದ ಕೆ.ಎಲ್.ಇ. ಶಾಲಾ ಆವರಣದಲ್ಲಿ ನಡೆಯುವ ಸಿಂಪೊನಿಕ್ ಆರ್ಕೆಸ್ಟ್ರಾ (ಸ್ವರಮೇಳ) ದೇಶದಲ್ಲಿಯೇ ಇತಿಹಾಸ ಸೃಷ್ಠಿಸಿ ದೇಶದಲ್ಲಿ ಗೋಕಾಕ ನಗರದ ಕೀರ್ತಿ ಹೆಚ್ಚಿಸಲಿದೆ.

ಹೌದು ಗೋಕಾಕ ನಗರದ ಖ್ಯಾತ ಗಾಯಕ ರಿಯಾಜ ಚೌಗಲಾ ಮತ್ತು ಅವರ ಸಂಗೀತ ತಂಡ ಇಂತಹ ಒಂದು ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ. 50,60 ರ ದಶಕಗಳಲ್ಲಿ ನಡೆಯುತ್ತಿದ್ದ ಇಂತಹ ಸಂಗೀತ ಸಂಜೆಗಳು ಪ್ರಸ್ತುತ ಮಾಯವಾಗುತ್ತಿವೆ. ದಿ.ಮಹ್ಮದರಫೀ, ಮುಕೇಶ, ಕಿಶೋರ್‍ಕುಮಾರ, ಪಿ.ಬಿ. ಶ್ರೀನಿವಾಸ್, ಸೈಗಲ್, ಲತಾ ಮಂಗೇಶ್ಕರ್, ಆಶಾ ಬೋಸಲೆ ಸೇರಿದಂತೆ ಇನ್ನಿತರ ಕಲಾವಿದರು ಆ ಕಾಲದಲ್ಲಿ ಸಿಂಪೊನಿಕ್ ಆರ್ಕೆಸ್ಟ್ರಾಗಳನ್ನು ಮಾಡಿ ಜನಮನ ಸೂರಗೊಳಿಸುತ್ತಿದ್ದರು. ಕನಿಷ್ಠ 30 ವಾದ್ಯ ಕಲಾವಿದರು ವಿವಿಧ ವಾದ್ಯಗಳನ್ನು ನುಡಿಸಿ ಸಂಗೀತ ನಡೆಸಿಕೊಡುವುದಕ್ಕೆ ಸಿಂಪೊನಿಕ್ ಎನ್ನುವುದು ವಾಡಿಕೆ. ಸುಮಾರು 300 ವರ್ಷಗಳ ಹಳೆ ಇತಿಹಾಸವುಳ್ಳ ಸಿಂಪೊನಿಕ್ ಆರ್ಕೆಸ್ಟ್ರಾವನ್ನು 1730 ರಲ್ಲಿ ಮೊದಲ ಬಾರಿ ಇಟಲಿಯ ಮಿಲನ್ ಮತ್ತು ಸುತ್ತಮುತ್ತಲಿನ ಲೊಂಬಾರ್ಡಿ ಪ್ರದೇಶದ ಸುತ್ತ ಮೊದಲ ಪ್ರಯೋಗ ನಡೆಸಿದ ಕೀರ್ತಿ ಸಿಂಪೊನಿಕ್ ಆರ್ಕೆಸ್ಟ್ರಾದ ಪಿತಾಮಹ ಜೋಸೆಫ್ ಹೆಡೆನ್‍ಗೆ ಸಲ್ಲುತ್ತದೆ. ಥ್ರೋಂಬೆನ್, ಇಂಪೊನಿಯಮ್, ಕರ್ಲಾನೆಟ್, ಟ್ರೊಂಪೆಟ್, ಸೆಕ್ಸೊಪೊನ್, ಪ್ಲೂಟ್, ಮೌಥಹಾರ್ಗನ್ ಸೇರಿದಂತೆ ನೂರಕ್ಕೂ ಹೆಚ್ಚು ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತ ಹೊಂದಿರುವ ಕಲಾವಿದರನ್ನು ಬಳಸಿಕೊಂಡು ಸಂಗೀತ ಸಂಯೋಜನೆ ಮಾಡುವ ಮುಖೇನ ಹಾಡುಗಳನ್ನು ರಚಿಸಲಾಗುತ್ತಿದ್ದವು. ಆದರೆ ಕ್ರಮೇಣ ಸಂಗೀತ ಲೋಕದ ಇಲೆಕ್ಟ್ರಾನಿಕ್ ಲೋಕದಲ್ಲಿ ಎಲ್ಲಾ ವಾದ್ಯಗಳನ್ನು ನುಡಿಸುವ ಒಂದೇ ಇಲೆಕ್ಟ್ರಾನಿಕ್ ಪ್ಯಾಡ್ ಕಂಡು ಹಿಡಿದ ಪರಿಣಾಮ ಈ ಎಲ್ಲಾ ವಾದ್ಯಗಳ ಮತ್ತು ವಾದ್ಯ ಕಲಾವಿದರು ಸಂಗೀತ ಲೋಕದ ಪರದೇ ಹಿಂದೆ ಸರಿದು ಸಾಕಷ್ಟು ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿವೆ. ಇದನ್ನು ಮನಗಂಡು ಇಂತಹ ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸತೀಶ್ ಜಾರಕಿಹೊಳಿ ಇವರ ಮಾರ್ಗದರ್ಶನದಲ್ಲಿ ಸತೀಶ್ ಶುಗರ್ಸ್ ಪೌಂಡೇಶನ್ ಮತ್ತು ಲೋಕಮಾನ್ಯ ಸಿಂಪೊನಿ ಆರ್ಕೆಸ್ಟ್ರಾ ಸಹಯೋಗದೊಂದಿಗೆ ಗೋಕಾಕಿನ ರಿಯಾಜ ಚೌಗಲಾ ಮತ್ತು ತಂಡದವರು ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿ ಸುಮಾರು 50 ಕ್ಕೂ ಹೆಚ್ಚು ವಾದ್ಯಗಳನ್ನು ಮತ್ತು ಕಲಾವಿದರನ್ನು ಬಳಸಿಕೊಂಡು ಹಳೆ ಕಾಲದ ಹಲವು ಗೀತೆಗಳನ್ನು ಹಾಡಿ ಇತಿಹಾಸ ಸೃಷ್ಠಿಸಲಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಿಹಾಸ್ ನಡೆಸುತ್ತಿರುವ ಗಾಯಕ ರಿಯಾಜ್ ಚೌಗಲಾ ಅವರು ಹಳೆ ಕಾಲದಲ್ಲಿ ನುಡಿಸಲಾಗುತ್ತಿದ್ದ ವಾದ್ಯಗಳನ್ನು ಮತ್ತು ವಾದ್ಯ ಕಲಾವಿದರನ್ನು ನಾಡಿಗೆ ಪರಿಚಯಿಸಿ ಅವರಿಗೆ ಪ್ರೋತ್ಸಾಹಿಸಿ ಭವಿಷ್ಯತ್ತಿನಲ್ಲಿ ಇಂತಹ ಕಲಾವಿದರಿಗೆ ಭದ್ರ ಬುನಾದಿ ಹಾಕಿಕೊಡಲು ನಿರ್ಧರಿಸಿರುವುದು ಸುತ್ಯಾರ್ಹ.


ಕರ್ನಾಟಕ ಮತ್ತು ಮಹಾರಾಜ್ಯದಿಂದ ಆಗಮಿಸುತ್ತಿರುವ ಸುಮಾರು 50 ಕ್ಕೂ ಹೆಚ್ಚು ನುರಿತ ವಾದ್ಯ ಕಲಾವಿದರು ಥ್ರೊಂಬೆನ್, ಇಂಪೊನಿಯನ್, ಕರ್ಲಾನೆಟ್, ಟ್ರೊಂಪೆಟ್, ಸೆಕ್ಸೊಪೊನ್, ಗಿಟಾರ್, ವಾಲೆನ್ ಸೇರಿದಂತೆ 50 ಕ್ಕು ಹೆಚ್ಚು ವಾದ್ಯಗಳನ್ನು ನುಡಿಸಲಿದ್ದು, ಸುಮಾರು 15 ಕ್ಕೂ ಹೆಚ್ಚು ಹಳೆ ಮತ್ತು ಹೊಸ ಗೀತೆಗಳಿಗೆ ಈ ಭಾಗದ ಖ್ಯಾತ ಗಾಯಕ ರಿಯಾಜ ಚೌಗಲಾ ಧ್ವನಿಯಾಗಲಿದ್ದಾರೆ.
ಸಂಗೀತ ಲೋಕದಲ್ಲಿ ಸುಮಾರು 2 ದಶಕಗಳ ಅನುಭವ ಹೊಂದಿರುವ ರಿಯಾಜ ಚೌಗಲಾ ಅವರು ಗೋವಾ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ರಾಜ್ಯದ ಹಲವು ಕಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಯಿಸಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ.
ದಿ.ರಫೀ ರಂತಹ ಮಹಾಕಲಾವಿದರು ನಡೆಸುತ್ತಿದ್ದ ಇಂತಹ ಸಿಂಪೊನಿಕ್ ಆರ್ಕೆಸ್ಟ್ರಾಗಳನ್ನು ದೇಶದಲ್ಲಿ ಇಲ್ಲಿಯವರೆಗೆ ಯಾವುದೇ ಆರ್ಕೆಸ್ಟ್ರಾ ತಂಡಗಳನ್ನು ನಡೆಸಿಕೊಟ್ಟಿಲ್ಲ. ಆದರೆ ಗೋಕಾಕಿನ ರಿಯಾಜ್ ಚೌಗಲಾ ಮತ್ತು ತಂಡದವರು ಇಂತಹ ಒಂದು ಐತಿಹಾಸಿಕ ಅವಿಸ್ಮರಣಿಯ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವುದು ಗೋಕಾಕ ನಾಡಿನ ಕೀರ್ತಿಯನ್ನು ದೇಶದ್ದೂಕ್ಕೂ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ.

Related posts: