ಬೆಳಗಾವಿ: ಪಾಲಿಕೆ ಮೇಯರರಾಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧ ಆಯ್ಕೆ
ಬೆಳಗಾವಿ ಪಾಲಿಕೆ ಮೇಯರರಾಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧ ಆಯ್ಕೆ
ಬೆಳಗಾವಿ ಮಾ 1: ಬೆಳಗಾವಿ ಮಹಾ ನಗರ ಪಾಲಿಕೆ ಮೇಯರ ಆಗಿ ಬಸಪ್ಪ ಚಿಕ್ಕಲದಿನ್ನಿ ಅವಿರೋಧವಾಗಿ ಆಯ್ಕೆಯಾದರು ಈ ಮೂಲಕ ಬೆಳಗಾವಿ ಬೆಳಗಾವಿ ಪಾಲಿಕೆಗೆ ಕನ್ನಡದ ಐದನೇಯ ಮೇಯರ ಯಾದಂತಾಗಿದೆ
ಇದಕ್ಕೂ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಚುನಾವಣೆಮುನ್ನ ನಾಡಗೀತೆಯೊಂದಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಕಳೆದ ವರ್ಷ ಮೇಯರ್ ಚುನಾವಣೆ ವೇಳೆ ನಾಡಗೀತೆ ಪರಂಪರೆ ಆರಂಭವಾಗಿತ್ತು.
ಪಾಲಿಕೆ ಸದಸ್ಯರ ಹಾಜರಾತಿ ಪರಿಶೀಲನೆ ವೇಳೆ ಎಂಇಎಸ ಕ್ಯಾತೆ ತೆಗೆದ ಪ್ರಸಂಗವೂ ನಡೆಯಿತು. ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಮರಾಠಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲು ಆಗ್ರಹಿಸಿದರು.
ಆದರೆ ಕನ್ನಡ ಸದಸ್ಯ ರಮೇಶ ಸೋಂಟಕ್ಕಿ ಇದಕ್ಕೆ ಆಕ್ಷೇಪ ಮಾಡಿದ್ರು. ಎಲ್ಲರಿಗೂ ಕನ್ನಡ ಬರುತ್ತೆ. ಕನ್ನಡದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದರು.
ಇನ್ನು ಚುನಾವಣಾಧಿಕಾರಿ ಮೇಘನ್ನವರ ಎಂಇಎಸಗೆ ತೀರುಗೇಟು ನೀಡಿದರು. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಕನ್ನಡದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟನೆ ನೀಡಿದರು. ನಂತರ ಕನ್ನಡದಲ್ಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿ ಮೇಘನ್ನವರ ಚಿಕ್ಕಲದಿನ್ನಿ ಅವರ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡಿದರು.