ಬೆಳಗಾವಿ: ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು
ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು
ಬೆಳಗಾವಿ ಮೇ 22 : ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರ ಸಮ್ಮುಖದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಜಿಲ್ಲಾ ಸಮಿತಿ ಮುಖಂಡರ ಸಭೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಭಿನ್ನಮತವನ್ನು ಸಂಧಾನ ಸೂತ್ರದ ಮೂಲಕ ಬಗೆಹರಿಸಿ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಿದ್ಧಗೊಳಿಸುವ ನಾಯಕರ ಪ್ರಯತ್ನ ಕೊನೆಗೂ ಕೈಗೂಡಿದಂತಾಗಿದ್ದು, ಜವಾಬ್ದಾರಿ ಹಂಚಿಕೆ ಸೂತ್ರದ ಮೂಲಕ ಜಿಲ್ಲೆಯ ಕಾಂಗ್ರೆಸ್ ನಲ್ಲಿದ್ದ ಭಿನ್ನಮತವನ್ನು ಶಮನಗೊಳಿಸಲಾಗಿದೆ.
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬೆಳಗಾವಿ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಮಾಜಿ ಸಚಿವ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಘಟಕದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲೆ ಕಾಂಗ್ರೆಸ್ ನ ಕಾರ್ಯಚಟುವಟಿಕೆಗಳು, ದೂರುಗಳು, ಭಿನ್ನಮತ, ಮುಖಂಡರ ವರ್ತನೆಯ ಬಗ್ಗೆ ಮಾಹಿತಿ ಕಲೆ ಹಾಕಿದ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರು, ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯಗಳ ಶಮನಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರು. ಈ ಸೂತ್ರದಂತೆ ಜಿಲ್ಲೆಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳ ಜವಾಬ್ದಾರಿಯನ್ನು ಶಾಸಕ ಸತೀಶ ಜಾರಕಿಹೊಳಿ ಅವರು ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಸಚಿವ ರಮೇಶ ಜಾರಕಿಹೊಳಿ ಅವರಿಗೆ ವಹಿಸಬೇಕು ಎಂದು ತಿಳಿಸಿದರು. ಜಾರಕಿಹೊಳಿ ಸಹೋದರರು ಈ ಸಂಧಾನ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರು.
ಸಮನ್ವಯದ ಕೊರತೆಯಿಂದ ಭಿನ್ನಮತ ತಲೆದೋರಿದೆ. ಹೀಗಾಗದಂತೆ ತಡೆಯಲು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿ ಸಮನ್ವಯ ಸಮಿತಿ ರಚಿಸಲಾಗುವುದು. ಸಮಸ್ಯೆಗಳನ್ನು ಸಮಿತಿಗೆ ಹೇಳಿಕೊಂಡರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ ಸಭೆಗೆ ವಿವರಿಸಿದರು ಎಂದು ಗೊತ್ತಾಗಿದೆ.
ನಾಯಕರು ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು. ಇಬ್ಬರೂ ಒಟ್ಟಿಗೆ ಹೋಗಬೇಕು ಎಂದು ರಾಜ್ಯದ ಉಸ್ತುವಾರಿ ಸೂಚಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಜಾರಕಿಹೊಳಿ ಸಹೋದರರು ಪರಸ್ಪರ ಕೈ ಕುಲುಕಿ ಫೋಟೋಕ್ಕೆ ಪೋಸ ನೀಡಿ ಹಮ್ ಸಾಥ ಸಾಥ ಹೈ ಎಂದು ಒಗ್ಗಟ್ಟು ಪ್ರರ್ದಶಿಸಿದರು . ಇದರಿಂದ ಕಿರಿಯ ಸಹೋದರ ಶಾಸಕರಾಗುವ ಕನಸ್ಸು ಕನಸಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗುವುದಲ್ಲಿ ಸಂಶಯವಿಲ್ಲಾ