ಚಿಕ್ಕೋಡಿ:ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಢ ಶಾಲೆಗೆ ಜಿ.ಬಿ.ಬಳಗಾರ ಧಿಡೀರ ಭೇಟಿ
ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಫ್ರೌಢ ಶಾಲೆಗೆ ಜಿ.ಬಿ.ಬಳಗಾರ ಧಿಡೀರ ಭೇಟಿ
ಚಿಕ್ಕೋಡಿ ಮಾ 1: ಚಿಕ್ಕೋಡಿ ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಗುರುವಾರ ಮುಂಜಾನೆಯಷ್ಠೇ ಅಧಿಕಾರ ಸ್ವೀಕರಿಸಿದ ನೂತನ ಬಿಸಿಯೂಟ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಧ್ಯಾಹ್ನ ತಾಲೂಕಿನ ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು ಫ್ರೌಢ ಶಾಲೆಗೆ ಬೇಟ್ಟಿ ನೀಡಿ ಬಿಸಿಯೂಟದ ಗುಣಮಟ್ಟ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಿದರು
ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಜಿ.ಬಿ.ಬಳಗಾರ ನಿಕಟಪೂರ್ವ ಅಧಿಕಾರಿಯಿಂದ ಎಲ್ಲ ಮಾಹಿತಿಯನ್ನು ಪಡೆದು ತಕ್ಷಣ ಕಾರ್ಯ ಪ್ರವೃತ್ತರಾಗಿ ಶಾಲೆಗೆ ಭೇಟಿ ನೀಡಿ ತಾಲೂಕಿನಲ್ಲಿ ಸಂಚಲನ ಮೂಡಿಸಿದರು
ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ , ಎಲ್ಲ ವಿಷಯಗಳನ್ನು ತದೆಕ ಚಿತ್ತದಿಂದ ಆಲಿಸಿದ ಬಳಗಾರ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ನಿಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಬರುವ ದಿನಗಳಲ್ಲಿ ಸರಕಾರ ಕೊಡಮಾಡಿದ ವಸ್ತುಗಳನ್ನೇ ಬಳಸಿಕೊಂಡು ವಿಭಿನ್ನ ಬಗೆಯ ಭೋಜನವನ್ನು ಉಣ ಬಡಿಸಲು ಮುಂದಾಗಿ ಅಮ್ಯೂಲಾಗ್ರಹ ಬದಲಾವಣೆ ಮಾಡಿಕೋಳ್ಳಬೇಕೆಂದು ಹೇಳಿದರು
ಫ್ರೌಢ ಶಾಲೆಗೆ ಬೇಟಿ ನೀಡಿದ ಶಿಕ್ಷಣಾಧಿಕಾರಿಗಳು ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಸೂಕ್ತ ಮಾರ್ಗದರ್ಶನ ಮಾಡಿದರು
ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಸಿಬ್ಬಂದಿಗಳಿಂದ ನೂತನ ಬಿಸಿಯೂಟ ಶಿಕ್ಷಣಾಧಿಕಾರಿ ಬಳಗಾರ ಅವರನ್ನು ಸತ್ಕರಿಸಲಾಯಿತು