ಗೋಕಾಕ:ನಾವು ಆಡುವ ಮಾತುಗಳು ಕೇಳುವವರ ಮನ ಮುಟ್ಟುವಂತಿರಬೇಕು : ಪ್ರೊ. ಚಂದ್ರಶೇಖರ ಅಕ್ಕಿ
ನಾವು ಆಡುವ ಮಾತುಗಳು ಕೇಳುವವರ ಮನ ಮುಟ್ಟುವಂತಿರಬೇಕು : ಪ್ರೊ. ಚಂದ್ರಶೇಖರ ಅಕ್ಕಿ
ಗೋಕಾಕ ಮಾ 2 ;- ಮಾತೆಂಬುದು ಜ್ಯೋತಿರ್ಲಿಂಗ. ನಾದ ಬಿಂದು ಕಳಾತೀತವಾದದ್ದು, ಅದು ಪರಬ್ರಹ್ಮ ಸ್ವರೂಪವೆಂದು ತಿಳಿಯಬೇಕು. ಆಡುವ ಮಾತುಗಳನ್ನು ಅಂತರಂಗದ ಒರೆಗಲ್ಲಿಗೆ ತಿಕ್ಕಿ ಮೇಲೆ ತರಬೇಕು. ನಾವು ಆಡುವ ಮಾತುಗಳು ಕೇಳುವವರ ಮನ ಮುಟ್ಟಿ ಅವರ ಮುಖವ ಅರಳಿಸುವಂತಿರಬೇಕು ಎಂದು ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು.
ಅವರು, ಗುರುವಾರದಂದು ರಾತ್ರಿ ನಗರದ ಬಸವ ಮಂಟಪದಲ್ಲಿ ಜರುಗಿದ ಪೌರ್ಣಿಮೆಯ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಮಾತು ನೇರವಾಗಿರಬೇಕು. ಒಳಗೊಂದಾಗಿ, ಹೊರಗೊಂದಾಗಿ ತೋರಿಕೆಯ ಕೃತಕ ಪ್ರದರ್ಶನವಾಗಬಾರದು. ಆಡುವ ಮಾತು ಜನರ ಮೆಚ್ಚುಗೆಯನ್ನಲ್ಲದೇ ಅಂತರಂಗದೊಳಗಿರುವ ಪರಮಾತ್ಮನೂ ಮೆಚ್ಚುವಂತಿರಬೇಕು ಎಂದು ಹೇಳಿದರು.
ರಾಷ್ಟ್ರೀಯ ಬಸವ ದಳದ ತಾಲೂಕಾಧ್ಯಕ್ಷ ಉದಯ ಕರಜಗಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಶಿವಯೋಗಿ ತತ್ವ ವಿಚಾರ ವೇದಿಕೆ ಅಧ್ಯಕ್ಷ ಬಸವರಾಜ ಮುರಗೋಡ ಕವಿ ಶಂಕರ ಮುಂಗರವಾಡಿ, ಪ್ರವಚನಕಾರ ಎಂ.ಬಿ.ಬಿರಾದರ ಪಾಟೀಲ, ಬಿ.ಆರ್.ಕೊಪ್ಪದ, ಶಿವಪುತ್ರಪ್ಪ ಹೆಗ್ಗನ್ನವರ, ಎಸ್.ಸಿ.ನುರೊಂದಮಠ, ಶ್ರೀಮತಿ ಜಯಶ್ರೀ ಶಂಕರಗೌಡ ಪಾಟೀಲ ಇದ್ದರು.
ಶಿವಯೋಗಿ ತತ್ವ ವಿಚಾರ ವೇದಿಕೆ ಕಾರ್ಯದರ್ಶಿ ವಿ.ಎಸ್.ಕೊಳಕಿ ಸ್ವಾಗತಿಸಿದರು. ಉಪಾಧ್ಯಕ್ಷ ಯಲ್ಲಪ್ಪ ಕುರುಬಗಟ್ಟಿ ನಿರೂಪಿಸಿದರು. ಶಿವಲಿಂಗಪ್ಪ ಶಿರಸಂಗಿ ವಂದಿಸಿದರು.