ಮೂಡಲಗಿ:ಹೆಚ್ಚಿನ ಲೀಡ್ ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು : ಶಾಸಕ ಬಾಲಚಂದ್ರ ಮನವಿ
ಹೆಚ್ಚಿನ ಲೀಡ್ ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು : ಶಾಸಕ ಬಾಲಚಂದ್ರ ಮನವಿ
ಮೂಡಲಗಿ ಮಾ 2 : ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರಕ್ಕೆ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗುರುವಾರ ಸಂಜೆ ಗುರ್ಲಾಪೂರದಲ್ಲಿ ಜರುಗಿದ ಮೂಡಲಗಿ-ಗುರ್ಲಾಪೂರ ಪಟ್ಟಣಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 7.5 ಕೋಟಿ ರೂ. ವೆಚ್ಚದ ನಗರೋತ್ಥಾನ ಯೋಜನೆಯಿಂದ ಗುರ್ಲಾಪೂರದ ನಾಲ್ಕು ವಾರ್ಡುಗಳು ಅಭಿವೃದ್ಧಿಯಾಗಲಿವೆ ಎಂದರು.
ಗುರ್ಲಾಪೂರ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತ ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಲಾಗುತ್ತಿದೆ. ಪಟ್ಟಣದ ನಾಗರೀಕರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ನೆರವಿನಿಂದ ಒತ್ತು ನೀಡುವುದಾಗಿ ಹೇಳಿದರು.
ಗೆಲುವಿಗೆ ಲೀಡ್ ನೀಡಿ : ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರ್ಯಕರ್ತರು ಶ್ರಮ ವಹಿಸಬೇಕು. ಮೂಡಲಗಿ-ಗುರ್ಲಾಪೂರ ಪಟ್ಟಣಗಳ ಮುಖಂಡರು ಹೆಚ್ಚಿನ ಲೀಡ್ ನೀಡಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಚುನಾವಣೆ ಸಮೀಪಿಸುವಂತೆಯೇ ಕೆಲ ವಿರೋಧಿಗಳು ಸುಳ್ಳು ವದಂತಿಗಳನ್ನು ಹರಡಿಸುತ್ತಿರುತ್ತಾರೆ. ಅಂತಹ ಯಾವುದೇ ವದಂತಿಗಳಿಗೆ ಕಿವಿಗೊಡದೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬೆಂಬಲಿಸಿ ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.
ಕುಂದು ಕೊರತೆಗಳ ವಿಚಾರಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದರು. ಸಮಸ್ಯೆಗಳ ವಿಲೇವಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, ಸಾರ್ವಜನಿಕರ ದೂರು-ದುಮ್ಮಾನಗಳಿಗೆ ಪರಿಹಾರ ಕಂಡುಹಿಡಿದು ಪರಿಹರಿಸುವ ಭರವಸೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡರಾದ ವೀರಣ್ಣಾ ಹೊಸೂರ, ನಿಂಗಪ್ಪ ಫಿರೋಜಿ, ಡಿ.ಬಿ. ಪಾಟೀಲ, ರಾಮಣ್ಣಾ ಹಂದಿಗುಂದ, ಬಿ.ಎಚ್. ಸೋನವಾಲ್ಕರ, ಬಸವಪ್ರಭು ನಿಡಗುಂದಿ, ಜಿ.ಟಿ. ಸೋನವಾಲ್ಕರ, ಸಂತೋಷ ಸೋನವಾಲ್ಕರ, ಲಕ್ಷ್ಮಣ ಹಳ್ಳೂರ, ಕಲ್ಲಪ್ಪ ರಂಗಾಪೂರ, ಸದಾಶಿವ ನೇಮಗೌಡರ, ಮಹಾದೇವ ಮುಗಳಖೋಡ, ಶಿದಗೊಂಡ ಮುಗಳಖೋಡ, ರಾಜು ಕುಲಗೋಡ, ಅಶೋಕ ಗಾಣಿಗೇರ, ಶಿವಬಸು ಹಂಚಿನಾಳ, ರಾಮಪ್ಪ ಮುಗಳಖೋಡ, ಶಿವಪ್ಪಾ ಸತ್ತಿಗೇರಿ, ಮಹಾದೇವ ಮುಕ್ಕುಂದ, ಶಿವಾನಂದ ಹಳಬರ, ಅಜೀಜ ಡಾಂಗೆ, ಹುಸೇನಸಾಬ ಶೇಖ, ರವಿ ಸಣ್ಣಕ್ಕಿ, ಸಿದ್ದು ಕೋಟಗಿ, ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಮುಂತಾದವರು ಉಪಸ್ಥಿತರಿದ್ದರು.