RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ : ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಘಟಪ್ರಭಾ:ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ : ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ 

ಧುಪದಾಳ ಗ್ರಾಮ ಪಂಚಾಯತಿನ ನೂತನ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸುತ್ತಿರುವ ಅಂಬಿರಾವ ಪಾಟೀಲ ಹಾಗೂ ಗಣ್ಯರು.

ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ : ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಘಟಪ್ರಭಾ ಮಾ 5 : ಒಗ್ಗಟಿನಿಂದ ಅಭಿವೃದ್ಧಿ ಸಾಧ್ಯ. ಗ್ರಾ.ಪಂ ಸದಸ್ಯರು ಧುಪದಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಹೇಳಿದರು.
ಅವರು ಧುಪದಾಳ ಗ್ರಾಮ ಪಂಚಾಯತಿಯ 2016-17ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಲಾದ ನೂತನ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ, ಇಲ್ಲಿನ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಕಾರ್ಯವನ್ನು ಮೆಚ್ಚಿ ದುಪದಾಳ ಗ್ರಾ.ಪಂ,ಗೆ ಸಚಿವ ರಮೇಶ ಜಾರಕಿಹೊಳಿಯವರು ಹಲವಾರು ಕೋಟಿ ರೂಪಾಯಿಗಳ ಅನುದಾನವನ್ನು ಸರಕಾರದಿಂದ ನೀಡಿದ್ದಾರೆ. ಸದಸ್ಯರು ಇದರ ಸದುಪಯೋಗ ಪಡದುಕೊಳ್ಳಬೇಕೆಂದು ಹೇಳಿದರು.
ಸಾನಿಧ್ಯ ವಹಿಸಿದ ಘಟಪ್ರಭಾ ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವನ ನೀಡುತ್ತ, ಪ್ರತಿಯೊಬ್ಬರು ತಮ್ಮ ಜನ ಪ್ರತಿನಿದಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕರನ್ನು ಆಯ್ಕೆ ಮಾಡಿದ್ದಾಗ ಮಾತ್ರ ನಿಮ್ಮ ಗ್ರಾಮ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ಸತ್ಯಪ್ಪಾ ಬೆನವಾಡಿ ವಹಿಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಸೀತವ್ವ ಜೋಡಟ್ಟಿಯವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಹಾಗೂ ಬಸವ ವಸತಿ ಯೋಜನೆಯ ಫಲಾನುಭಾವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಜಿ.ಪ ಸದಸ್ಯ ಮೀನಾಕ್ಷಿ ಜೋಡಟ್ಟಿ, ತಾ.ಪ ಸದಸ್ಯ ಲಗಮಣ್ಣ ನಾಗನ್ನವರ, ಮುಖಂಡರಾದ ಡಿ.ಎಂ.ದಳವಾಯಿ, ಜಯಶೀಲ ಶೆಟ್ಟಿ, ಪ್ರಕಾಶ ಡಾಂಗೆ, ಹನಮಂತ ಗಾಡಿವಡ್ಡರ, ಮದರಸಾಬ ಜಗದಾಳ, ಅಶೋಕ ಪರಪ್ಪನವರ, ಮಹೇಶ ಪಾಟೀಲ, ಸುಲ್ತಾನಸಾಬ ಕಬ್ಬೂರ, ಮಲಪುರಿ ಗಾಡಿವಡ್ಡರ, ಪಿಡಿಓ ಎಸ್.ಹೆಚ್.ದೇಸಾಯಿ, ಗ್ರಾ.ಪಂ ಸರ್ವ ಸದಸ್ಯರು, ಧುಪದಾಳ ಗ್ರಾಮಸ್ಥರು ಇದ್ದರು.

Related posts: