ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆ
ಘಟಪ್ರಭಾ ಮಾ 7 : ಸಮೀಪದ ಅರಭಾಂವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಹಾಗೂ ಗೋಡಾವನ ಉದ್ಘಾಟನೆಯು ದಿ.8ರಂದು ಮುಂಜಾನೆ 11.30ಕ್ಕೆ ಸಂಘದ ಆವರಣದಲ್ಲಿ ಜರುಗಲಿದೆ.
ಸಮಾರಂಭದ ದಿವ್ಯಸಾನಿಧ್ಯವನ್ನು ಅರಭಾಂವಿಮಠ ಶ್ರೀ ದುರದುಂಡೇಶ್ವರ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಹಾಗೂ ಬಬಲಾದಿಮಠದ ವೇಧಮೂರ್ತಿ ಶಿವಯ್ಯ ಮಹಾಸ್ವಾಮಿಜಿ ವಹಿಸುವರು.
ಅಧ್ಯಕ್ಷತೆಯನ್ನು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸುವರು. ಸಹಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗೋಡಾವನ ಉದ್ಘಾಟಿಸುವರು. ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಸಭಾಭವನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರುಗಳಾದ ಶಿವಾನಂದ ಡೋಣಿ, ನೀಲಕಂಠ ಕಪ್ಪಲಗುದ್ದಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಸಗೌಡ ಆರ್.ಪಾಟೀಲ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಕೆ.ಎಲ್.ಶ್ರೀನಿವಾಸ, ಎನ್.ಎನ್.ಸರಾಫ್, ಸಿಡಿಓ ಆಯ್.ಬಿ.ಬೆಟಗೇರಿ,ಪ್ರಧಾನ ವ್ಯವಸ್ಥಾಪಕ ಸುರೇಶ ಅಳಗುಂಡಿ, ಡಿ.ಟಿ.ಕುಲಕರ್ಣಿ, ಮಹಾಂತೇಶ ಕುರಬೇಟ,ಸನ್ನಿ ಪಾಟೀಲ ಸೇರಿದಂತೆ ಅರಭಾಂವಿ, ಗಣೇಶವಾಡಿ, ಬಸಳಿಗುಂದಿ, ಲೋಳಸೂರ, ಹಾಗೂ ಸಹಕಾರಿ ಸಂಘದ ಕಾರ್ಯ ಕ್ಷೇತ್ರದ ರೈತ ಸದಸ್ಯರು, ಮಾಜಿ ಅಧ್ಯಕ್ಷರು, ನಿರ್ದೇಶಕರು, ಯುವ ಧುರೀಣರು, ಪ್ರಗತಿಪರ ರೈತರು ಉಪಸ್ಥಿತರಿರುವರು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಜಡಕಿನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.