RNI NO. KARKAN/2006/27779|Sunday, September 8, 2024
You are here: Home » breaking news » ಅಥಣಿ: ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ

ಅಥಣಿ: ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ 

ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ  ವಿಲನ್ ಚಿತ್ರೀಕರಣ
ಅಥಣಿ ಮೇ 23: ಕಳೆದ ಎರೆಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಖ್ಯಾತ ನಟರಾದ ಶಿವರಾಜ್ ಕುಮಾರ ಮತ್ತು ಸುದೀಪ್ ನಾಯಕ ನಟರಾಗಿ ನಟಿಸುತ್ತಿರುವ ದಿ ವಿಲನ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಈಗಾಗಲೇ ಕೆಲವೆಡೆ ಶೂಟಿಂಗ್‌ ನಡೆಸಿರುವ ನಿರ್ದೇಶಕ ಪ್ರೇಮ್‌ ಸದ್ಯ ಕುಂದಾನಗರಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಕಳೆದ ಎರೆಡು ದಿನಗಳಿಂದ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಶೂಟಿಂಗ್‌ ನಡೆಸಲಾಯಿತು. ನಿನ್ನೆ ನಡೆದ ಶೂಟಿಂಗ್‌ನಲ್ಲಿ ನಟ ಸುದೀಪ್‌ ಪಾಲ್ಗೊಂಡಿದ್ದು ಚೇಸಿಂಗ್‌ ಮತ್ತು ಫೈಟಿಂಗ್ ದೃಶ್ಯಗಳನ್ನು ಸೆರೆಹಿಡಿಯಲಾಯಿತು

ಈ ವೇಳೆ ಮಾತನಾಡಿದ ನಿರ್ದೆಶಕ ಪ್ರೆಮ್ ಹೆಚ್ಚಿನ ನಿರೀಕ್ಷೆಯಂತೆ ಚಿತ್ರೀಕರಣ ನಡೆಯುತ್ತಿದ್ದು, ಉತ್ತರ ಕರ್ನಾಟಕ ಜನರ ಪ್ರೀತಿ ಸಹಕಾರ ಅದ್ಭುತವಾಗಿದೆ ಎಂದರು. ಇನ್ನು ಚಿತ್ರೀಕರಣ ಹಾಗೂ ಸುದೀಪ್‌ ಅವರನ್ನು ನೋಡಲು ನೂರಾರು ಜನ ಸ್ಥಳಕ್ಕೆ ದೌಡಾಯಿಸಿದ್ದರು. 

ಇನ್ನು ‘ದಿ ವಿಲನ್‌’ ಈ ಗ್ರಾಮದಲ್ಲಿ ನಡೆಯುತ್ತಿರುವ ಎರಡನೆಯ ಚಿತ್ರವಾಗಿದ್ದು, ಈ ಮೊದಲು ಪುನೀತ್ ರಾಜ್ ಕುಮಾರ್ ಅಭಿನಯದ ‘ರಣವಿಕ್ರಮ್ ‘ಚಿತ್ರವನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು.

Related posts: