RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ : ಚಲನ ಚಿತ್ರ ನಟ ಮಂಡ್ಯ ರಮೇಶ

ಗೋಕಾಕ:ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ : ಚಲನ ಚಿತ್ರ ನಟ ಮಂಡ್ಯ ರಮೇಶ 

ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ : ಚಲನ ಚಿತ್ರ ನಟ ಮಂಡ್ಯ ರಮೇಶ

ಗೋಕಾಕ ಮಾ 8 : ಮಕ್ಕಳಿಗೆ ರಂಗಶಿಕ್ಷಣ ಅತೀ ಅವಶ್ಯವಾಗಿದೆ. ರಂಗಶಿಕ್ಷಣದ ಮೂಲಕ ಸಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಕನ್ನಡ ಚಲನ ಚಿತ್ರ ನಟ ಮಂಡ್ಯ ರಮೇಶ ಹೇಳಿದರು.
ಅವರು ಬುಧವಾರದಂದು ಸಂಜೆ ಇಲ್ಲಿಯ ರೋಟರಿ ರಕ್ತ ಭಂಡಾರದ ಶ್ರೀಮತಿ ಮಂಗಲಾದೇವಿ ತಾಂವಶಿ ಸಭಾಭವನದಲ್ಲಿ ಆಶಾಕಿರಣ ಕಲಾ ಟ್ರಸ್ಟ್ ಹಾಗೂ ಗೋಕಾವಿ ನಾಡಿನ ಸಾಂಸ್ಕøತಿಕ ಸಂಘಟನೆಗಳ ಹಾಗೂ ಮಾಲತಿಶ್ರೀ ಅಭಿಮಾನಿ ಬಳಗದ ಆಶ್ರಯದಲ್ಲಿ ಪ್ರತಿವರ್ಷ ವೃತ್ತಿ ರಂಗಭೂಮಿ ಕಲಾವಿದರಿಗೆ ನೀಡುತ್ತಿರುವ ಮಾಲತಿಶ್ರೀ ರಂಗಪ್ರಶಸ್ತಿಯನ್ನು ವೃತ್ತಿ ರಂಗಭೂಮಿ ಪ್ರಖ್ಯಾತ ನಟ ರುದ್ರಪ್ಪ ಮಾಸ್ತರ ಮತ್ತಿಗಟ್ಟಿ ಹಾಗೂ ವೃತ್ತಿ ರಂಗಭೂಮಿ ಪ್ರಖ್ಯಾತ ನಟಿ ಪ್ರೇಮಾ ಹೊಸಮನಿ ಅವರಿಗೆ ವಿತರಿಸಿ ಮಾತನಾಡಿದರು.
ರಂಗಭೂಮಿಯು ಅಧ್ಯಾತ್ಮಿಕವನ್ನು, ಉತ್ತಮ ಸಂಸ್ಕಾರವನ್ನು ಕಲಿಸಿ ಕೊಡುತ್ತದೆ. ಈ ನಾಡಿನಲ್ಲಿ ರಂಗಭೂಮಿ ಶಿಕ್ಷಣ ಶಾಲೆ ಅವಶ್ಯವಾಗಿದ್ದು ಅದು ನಿರಂತರ ನಡೆಯುವಂತೆ ನೋಡಿಕೊಳ್ಳುವುದು ಕಲಾವಿದರ ಹಾಗೂ ಕಲಾ ಪೋಷಕರ ಜವಾಬ್ದಾರಿಯಾಗಿದೆ. ಕಲಾವಿದರ ಮನಸ್ಸು ಹಸನಾಗಿರಬೇಕು.ಒಳ್ಳೇಯ ಮನಸ್ಸನ್ನು ಹೊಂದಿರಬೇಕು. ಅವಕಾಶಗಳನ್ನು ಹುಡುಕಿಕೊಂಡು ಹೋಗಬಾರದು ಅವಕಾಶ ಸಿಕ್ಕಾಗ ಉಪಯೋಗ ಮಾಡಿಕೊಳ್ಳಬೇಕು. ಎಲ್ಲ ಕ್ಷೇತ್ರಕಿಂತ ರಂಗಭೂಮಿಯು ಬದುಕನ್ನು ಕಟ್ಟಿಕೊಳ್ಳುವ ಸಂದೇಶ ನೀಡುವ ಏಕೈಕ ಕ್ಷೇತ್ರವಾಗಿದೆ. ಸುಂದರ ಬದುಕನ್ನು ನಡೆಸಲು ಅಗತ್ಯಕಿಂತ ಹೆಚ್ಚು ಸಂಪತ್ತನ್ನು ಗಳಿಸಬಾರದು. ಇದ್ದಷ್ಟರಲ್ಲಿಯೇ ಸಂತೃಪ್ತಿಯನ್ನು ಪಡೆದುಕೊಳ್ಳಬೇಕು. ಉತ್ತರ ಕರ್ನಾಟಕ ಕಲಾವಿದರ ತವರು ಮನೆಯಾಗಿದೆ. ರಂಗಭೂಮಿ ಸೇರಿದಂತೆ ಹಲವಾರು ಕಲಾವಿದರನ್ನು ಕಾಣುವ ನಾಡು ಉತ್ತರ ಕರ್ನಾಟಕವಾಗಿದೆ. ರಂಗಭೂಮಿ ಕಲಾವಿದರನ್ನು ಬೆಳೆಸುವ ಮೂಲಕ ಕಲೆಯನ್ನು ಉಳಿಸುವಂತಹ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾಲತಿಶ್ರೀ ಅವರು ತಮ್ಮ ಬಾಲ್ಯ ಜೀವನದಲ್ಲಿ ಕಷ್ಟ ಪಟ್ಟು ರಂಗಭೂಮಿ ಕಲಾವಿದೆಯಾಗಿ ತಾನು ಬೇವರು ಸುರಿಸಿ ಸಂಪಾದಿಸಿದ ಹಣದಲ್ಲಿ ರಂಗಭೂಮಿಯ ಋಣವನ್ನು ತೀರಿಸುವಗೊಸ್ಕರ ಪ್ರತಿವರ್ಷ ತಮ್ಮ ಜನುಮ ದಿನದಂದು ರಂಗಭೂಮಿ ಕಲಾವಿದರಿಗೆ ತಮ್ಮ ಹೆಸರಿನಲ್ಲಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಗೋಕಾಕದಲ್ಲಿ ಹಿರಿಯ ರಂಗಭೂಮಿ ಕಲಾವಿದ ಬಸವಣ್ಣೆಪ್ಪ ಹೊಸಮನಿ ಅವರ ಪುತ್ಥಳಿಯನ್ನು ಮುಂಬರುವ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.
ಸಾನಿಧ್ಯ ವಹಿಸಿದ್ದ ಕುಂದರಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಕಾರಿ ಪೂಜ್ಯ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ ಮಾತನಾಡಿ ಜಗತ್ತಿಗೆ ಕಲೆ, ಸಂಗೀತ, ಸಂಸ್ಕಂತಿಕಯನ್ನು ತೋರಿಸಿಕೊಟ್ಟ ಪ್ರಥಮ ಮಹಾನ್‍ವ್ಯಕ್ತಿ ಹಾನಗಲ್ ಕುಮಾರಸ್ವಾಮಿಗಳು. ರಂಗಭೂಮಿ ಕ್ಷೇತ್ರದಲ್ಲಿ ಹುಚ್ಚೇಶ್ವರ ನಾಟ್ಯ ಸಂಘವು ನಾಡಿನ ವಿವಿಧ ಕಡೆಗಳಲ್ಲಿ ನಾಟಕ ಪ್ರದರ್ಶನ ಮಾಡುತ್ತಾ ಬಂದಿದ್ದು ರಂಗಭೂಮಿ ಕಲಾವಿದರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಬಣ್ಣದ ಬದುಕನ್ನು ತಮ್ಮ ಉಸಿರಾಗಿಸಿಕೊಂಡ ಮಾಲತಿಶ್ರೀ ಅವರ ಸಮಾಜ ಮುಖಿ ಕಾರ್ಯ ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ನಾವು ಇಷ್ಟೊಂದು ನೆಮ್ಮದಿಯಿಂದ ಮತ್ತು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲು ಕಾರಣಿಕರ್ತರಾದ ದೇಶ ಕಾಯುವ ಸೈನಿಕನ ಮತ್ತು ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತನ ಬಗ್ಗೆ ದೇವರಲ್ಲಿ ಪ್ರಾರ್ಥಿಸಿ ಅವರನ್ನು ಚೆನ್ನಾಗಿ ಇಡಬೇಕೆಂದು ಕೇಳಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಜೀವನವು ಸುಖಮಯದಿಂದರಿಲು ಸಾಧ್ಯವೆಂದು ಹೇಳಿದರು.
ಮಾಲತಿಶ್ರೀ ರಂಗಪ್ರಶಸ್ತಿಯನ್ನು ವೃತ್ತಿ ರಂಗಭೂಮಿ ಪ್ರಖ್ಯಾತ ನಟ ರುದ್ರಪ್ಪ ಮಾಸ್ತರ ಮತ್ತಿಗಟ್ಟಿ ಹಾಗೂ ವೃತ್ತಿ ರಂಗಭೂಮಿ ಪ್ರಖ್ಯಾತ ನಟಿ ಪ್ರೇಮಾ ಹೊಸಮನಿ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಸಂಪಾದಕ ಗುಡಿಹಳ್ಳಿ ನಾಗರಾಜ ಅವರು ಬರೆದ ರಂಗ ಸಾರ್ಥಕ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ ವಹಿಸಿದ್ದರು. ವೇದಿಕೆ ಮೇಲೆ ಬಾಗಲಕೋಟಿಯ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಲಲಿತಾ ಹೊಸಪ್ಯಾಟಿ, ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಮಲ್ಲಿಕಾರ್ಜುನ ಕಲ್ಲೋಳಿ, ಮುದ್ದೇಬಿಹಾಳ ಕಸಾಪ ಅಧ್ಯಕ್ಷ ಮಹಾಂತಪ್ಪ ನಾವದಗಿ,ಗುಡಿಹಳ್ಳಿ ನಾಗರಾಜ ಇದ್ದರು.
ರಾಜೇಶ್ವರಿ ಒಡೆಯರ್ ಸ್ವಾಗತಿಸಿದರು.ಶೈಲಾ ಕೊಕ್ಕರಿ ನಿರೂಪಿಸಿದರು.ಸಂಗೀತಾ ಬನ್ನೂರು ವಂದಿಸಿದರು. ಈ ಸಂದರ್ಭದಲ್ಲಿ ಗೋಕಾಕ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು, ಕಲಾ ಪ್ರೋತ್ಸಾಹಕರು ಇದ್ದರು.

Related posts: