RNI NO. KARKAN/2006/27779|Friday, October 18, 2024
You are here: Home » breaking news » ಖಾನಾಪುರ:ನಾಸೀರ ಬಾಗವಾನ ನಡಿಗೆ ಮತ್ತೆ ಜೆಡಿಎಸ್ ಕಡೆಗೆ

ಖಾನಾಪುರ:ನಾಸೀರ ಬಾಗವಾನ ನಡಿಗೆ ಮತ್ತೆ ಜೆಡಿಎಸ್ ಕಡೆಗೆ 

ನಾಸೀರ ಬಾಗವಾನ ನಡಿಗೆ ಮತ್ತೆ ಜೆಡಿಎಸ್ ಕಡೆಗೆ

ವಿಶೇಷ ವರದಿ

ಸುಮಾರು 14ವರ್ಷಗಳ ಹಿಂದೆ ಖಾನಾಪುರ ತಾಲೂಕಿನಿಂದ ಜೆ.ಡಿ.ಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆ ಮಾಡಿದ ನಾಸೀರ ಬಾಗವಾನ, ತಾಲೂಕಿನಲ್ಲಿರುವ ಪೂರ್ವಭಾಗ ಮತ್ತು ಪಶ್ಚಿಮಭಾಗ ಎನ್ನದೇ, ಭಾಷಾ ಭೇಧಭಾವವಿಲ್ಲದೆ ಜಾತ್ಯಾತೀತ ನಾಯಕನಾಗಿ ಪ್ರತಿ ಹಳ್ಳಿ-ಹಳ್ಳಿಗಳಿಗೆ ತೆರಳಿ ಜನಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಬೆರೆತು ಜನರ ಸುಖ-ದುಖದಲ್ಲಿ ಭಾಗಿಯಾಗಿ ಕಾರ್ಯಕರ್ತರ ನೋವು-ನಲಿವುಗಳಿಗೆ ಸ್ಪಂಧಿಸಿ, ದಾನ ನೀಡುವುದರಲ್ಲಿ ಕರ್ಣನ ಹಾಗೇ ಹೆಸರು ಗಳಿಸಿ ಕಲಿಯುಗದ ಕರ್ಣ ಎಂಬ ಬಿರುದಾಂಕಿತನಾಗಿ ತಾಲೂಕಿನ ಹೆಮ್ಮೆಯ ಸುಪುತ್ರರಾಗಿ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ಹೀಗೆ ಜೆ.ಡಿ.ಎಸ್ ಪಕ್ಷದ ಬಗ್ಗೆ ಇವರಿಗಿರುವ ಉತ್ಸಾಹ ಮತ್ತು ಸಂಘಟನಾತ್ಮಕ ಶೈಲಿಯನ್ನು ಗುರುತಿಸಿದ ತಾಲೂಕಿನ ಜನತೆ 2008ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಈ ಸಂಧರ್ಭದಲ್ಲಿ ಇವರು 2900 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣೆಯಲ್ಲಿ ಸೋಲುಂಡ ನಂತರ ಆತ್ಮವಿಶ್ವಾಸ ಕಳೆದುಕೊಳ್ಳದೆ ಪಕ್ಷದ ಬಗ್ಗೆ ತಮಗಿರುವ ಉತ್ಸಾಹವನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಿ ತಾಲೂಕಿನಾದ್ಯಂತ ಕಾರ್ಯಕರ್ತರ ಪಡೆಯನ್ನು ಕಟ್ಟುವುದರ ಮೂಲಕ ಸಂಘಟನಾತ್ಮಕ ಶೈಲಿಯನ್ನು ಚುರುಕುಗೊಳಿಸಿ ಜೆ.ಡಿ.ಎಸ್ ಪಕ್ಷದ ಬಲಾಡ್ಯ ಸೈನ್ಯವನ್ನು ತಾಲೂಕಿನಲ್ಲಿ ಕಟ್ಟಿದರು. ಹೀಗೆ ಇವರ ಪಕ್ಷದ ಕಾರ್ಯದಕ್ಷತೆಯನ್ನು ಗುರುತಿಸಿದ ಪಕ್ಷ ಮತ್ತೇ 2013ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಈ ಸಂಧರ್ಭದಲ್ಲಿ ಇವರು 2008ರ ಚುನಾವಣೆಗಿಂತ 13152 ಹೆಚ್ಚಿನ ಮತಗಳನ್ನು ಪಡೆದು ಒಟ್ಟಾರೆಯಾಗಿ 16052 ಮತಗಳನ್ನು ಪಡೆದು ಮತ್ತೇ ಚುನಾವಣೆಯಲ್ಲಿ ಪರಾಭವಗೊಂಡರು.

ಆದರೆ ಇವರು ವಿಧಾನಸಭಾ ಚುನಾವಣೆಯಲ್ಲಿ ಮತಗಳಿಸಿದನ್ನು ಸೂಕ್ಷ್ಮವಾಗಿ ಪರಿಗಣಿಸಿದ ಜೆ.ಡಿ.ಎಸ್ ಪಕ್ಷದ ವರಿಷ್ಟರು 2014ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಈ ಸಂಧರ್ಭದಲ್ಲಿ ಪಕ್ಷದ ನಾಯಕರು ಸಹಕರಿಸದ ಕಾರಣ, ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರುಗಳು ಇವರನ್ನು ಭೇಟಿಯಾಗಿ ಈ ಬಾರಿ ನಮ್ಮ ಪಕ್ಷಕ್ಕೆ ಬೆಂಬಲಿಸು ನಿಮಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುತ್ತೆವೆಂದು ಹೇಳಿದಾಗ ಇವರುಗಳ ಆಶ್ವಾಸನೆಗೆ ಒಪ್ಪಿಕೊಂಡು ಕಿತ್ತೂರಿನಲ್ಲಿ ನಡೆದ ಕಾಂಗ್ರೆಸ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಆರ್.ವಿ.ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳಕರ ಇನ್ನಿತರ ನಾಯಕರುಗಳ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ತದನಂತರ ಖಾನಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದರ ಜೋತೆಗೆ ಕಳೆದ ವರ್ಷವಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೋಳಿ ಕರೆದುಕೊಂಡು ಬಂದು ಸಮಾವೇಶ ಹಾಗೂ ಪಕ್ಷದ ಪ್ರಚಾರವನ್ನು ಮಾಡುತ್ತಿದ್ದಾರೆ.

ಇದರ ಜೋತೆಗೆ ಕಾಂಗ್ರೇಸ್ ಟಿಕೇಟ್ ಪಡೆಯುವಲ್ಲಿ ಬಾಲ ಭವನ ಅಧ್ಯಕ್ಷಿ ಡಾ|| ಅಂಜಲಿ ನಿಂಬಾಳಕರ ಅವರೊಂದಿಗೆ ಪೈಪೋಟಿಗೆ ಇಳಿದಿದ್ದ ಜನಮೇಚ್ಚಿನ ನಾಯಕ ನಾಸೀರ ಬಾಗವಾನ ರವರು ಕಾಂಗ್ರೆಸ್ ಪಕ್ಷವನ್ನು ಮತ್ತು ನಾಯಕರುಗಳನ್ನು ನಂಬಿ ಕುತಿದ್ದರು. ಆದರೆ ಇತ್ತಿಚಿನ ರಾಜಕೀಯ ಬೆಳವಣಿಗೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಸೂಕ್ಷ್ಮ ರೀತಿಯಲ್ಲಿ ಗಂಭೀರವಾಗಿ ಗಮನಿಸಿದ ಇವರು “ನಂಬಿದ “ಕೈ” ಕೊನೆಗಳಿಗೆಯಲ್ಲಿ ಮೋಸಮಾಡಬಹುದೆಂದು ತಿಳಿದು, ಮರಳಿ ಗುಡಿಗೆ ಸೇರಿದರನೇ ರಾಜಕೀಯದಲ್ಲಿ ಇಟ್ಟುಕೊಂಡ ಆಸೆ ಇಡೇರಬಹುದು ಎನ್ನುವ ಹಾಗೇ ಮತ್ತೇ ಜೆ.ಡಿ.ಎಸ್. ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.
ಕಳೆದ ವಾರವಷ್ಟೇ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಅವರ ಜೋತೆಗೂಡಿ ಹಠಾತ ಬೆಂಗಳೂರಿಗೆ ತೆರಳಿ ಜೆ.ಡಿ.ಎಸ್ ಪಕ್ಷದ ರಾಷ್ಟ್ರಾಧ್ಯಕ್ಷರು ಮತ್ತು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ಹಾಗೂ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಾರಿ 2018ರಲ್ಲಿ ಜರುಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಮತಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ನಾಸೀರ ಬಾಗವಾನ ಸ್ಪರ್ಧಿಸಲು ದೇವೆಗೌಡರು ಹಸಿರು ನಿಶಾನೆ ತೊರಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಇದರ ಜೋತೆಗೆ ತಾಲೂಕಿನ ಜೆ.ಡಿ.ಎಸ್ ನಾಯಕರುಗಳ ಜೊತೆಗೆ ಸಭೆ ನಡೆಸಿ ಎಲ್ಲರನ್ನೂ ವಿಸ್ಚಾಸಕ್ಕೆ ತೆಗೆದುಕೊಂಡಿರುವುದರಿಂದ ಅವರ ನಡೆಗೆ ತಾಲೂಕಿನ ಜೆ.ಡಿ.ಎಸ್.ನವರು ಒಮ್ಮತ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಇದೇ ಮಾರ್ಚ್ 12 ರಂದು ತಾಲೂಕಿನ ಬೀಡಿ ಗ್ರಾಮದಲ್ಲಿ ಜೆ.ಡಿ.ಎಸ್. ಬಹಿರಂಗ ಸಮಾವೇಶ ನಡೆಸಲು ಜೆ.ಡಿ.ಎಸ್. ಹಿರಿಯ ನಾಯಕರು ಸೂಚಿಸಿದ್ದಾರೆ. ಈ ಸಮಾವೇಕ್ಕೆ ಖುದ್ದಾಗಿ ದೇವೆಗೌಡರು ಮತ್ತು ಕುಮಾರಿಸ್ವಾಮಿಯವರು ಆಗಮಿಸಿಲಿದ್ದಾರೆ. ಸಮಾವೇಶದಲ್ಲಿ ನಾಸೀರ ಬಾಗವಾನ ಅವರು ತಾಲೂಕಿನಲ್ಲಿರುವ ತಮ್ಮ ಸಾವಿರಾರು ಬೆಂಬಲಿಗರು ಮತ್ತು ಅಭಿಮಾನಿಗಳ ಜೋತೆಗೆ ಅಧಿಕೃತವಾಗಿ ಜೆ.ಡಿ.ಎಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರ ಆಪ್ತ ಎಂದು ಗುರುತಿಸಿಕೊಂಡಿದ್ದ ಇವರು ಹಲವಾರು ಬಾರಿ ತಾಲೂಕಿನಲ್ಲಿ ಅವರ ನೇತೃತ್ವದಲ್ಲಿ ಸಭೆ-ಸಮಾರಂಭಗಳನ್ನು ನಡೆಸಿದ್ದಾದರೂ, ಅಪಾರ ಪ್ರಮಾಣದ ಬೆಂಬಲಿಗರು ಮತ್ತು ಅಭಿಮಾನಿಗಳೊಂದಿಗೆ ಭೇಟಿಯಾಗಿದ್ದ ನಾಸೀರ ಬಾಗವಾನ ಅವರಿಗೆ ಟಿಕೇಟ್ ಭರವಸೆ ದೊರಕಲಿಲ್ಲ ಎಂದು ತಿಳಿದು ಬಂದಿದೆ. ಇದಿಗ ಮತ್ತೇ ತಮ್ಮ ಮೂಲ ಪಕ್ಷ ಜೆ.ಡಿ.ಎಸ್. ಗೆ ತೆರಳಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲಿದ್ದಾರೆ.

Related posts: