ಗೋಕಾಕ: ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ
ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ
ಗೋಕಾಕ ಮೇ 23 : ನಾಡದ್ರೋಹಿ ಎಂ.ಇ.ಎಸ್ ನ ಚುನಾಯಿತ ಸದಸ್ಯರಾದ ನಾಡವಿರೋಧಿ ಶ್ರೀಮತಿ ಸರಿತಾ ಪಾಟೀಲ ಮತ್ತು ಜಿ.ಪಂ.ಸದಸ್ಯೆ ಸರಸ್ವತಿ ಪಾಟೀಲ ಜೈ ಮಹಾರಾಷ್ಟ್ರ ಎಂಬ ಘೋಷಣೆಗಳನ್ನು ಕೂಗಿದ ವಿಡಿಯೋ ತುಣುಕುಗಳನ್ನು ಹರಿಬಿಟ್ಟಿರುವುದು ಅಕ್ಷಮ್ಯ ಅಪರಾದ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಕಿಡಿ ಕಾರಿದ್ದಾರೆ.
ಈ ಕುರಿತು ಇಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರಾಭಿವೃದ್ಧಿ ಸಚಿವ ರೋಶನ ಬೇಗ ನೀಡಿದ ಎಚ್ಚರಿಕೆಗೆ ವಿರುದ್ಧವಾಗಿ ನಡೆದುಕೊಂಡಿರುವ ಪಾಲಿಕೆ ಸದಸ್ಯೆ ಸರಿತಾ ಮತ್ತು ಅವಳಿಗೆ ಸಾತ ನೀಡಿದ ಜಿ.ಪಂ.ಸದಸ್ಯೆ ಸರಸ್ವತಿ ಪಾಟೀಲರ ಕ್ರಮ ಖಂಡನೀಯ
ಕರ್ನಾಟಕದಲ್ಲಿ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ಇಬ್ಬರು ರಾಜ್ಯದ ಬಗ್ಗೆ ಮಾತನಾಡುವಾಗ ನಾಲಿಗೆ ಸ್ವಲ್ಪ ಬಿಗಿ ಹಿಡಿದು ಮಾತನಾಡಲಿ. ಇಲ್ಲವಾದರೆ ಅವರ ನಾಲಿಗೆ ಕಿತ್ತೆಸೆಯಲು ಕರವೇ ಹಿಂಜರಿಯುವುದಿಲ್ಲ
ಜಿಲ್ಲಾಧಿಕಾರಿ ಬರೀ ಬಾಯಿ ಮಾತಿನಿಂದ ಎಂ.ಇ.ಎಸ್. ನಾಯಕರಿಗೆ ಎಚ್ಚರಿಕೆ ನೀಡುವುದನ್ನು ನಿಲ್ಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು. ಅಂದಾಗ ಮಾತ್ರ ನಾಡ ವಿರೋಧಿ ಹೇಳಿಕೆಗಳನ್ನು ನೀಡುವವರನ್ನು ನಿಯಂತ್ರಿಸಲು ಸಾಧ್ಯವೆಂದಿರುವ ಖಾನಪ್ಪನವರ ಸಚಿವ ರೋಶನ ಬೇಗ ಅವರ ಸಂವಿದಾನಾತ್ಮಕ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಹಾರಾಷ್ಟ್ರದ ಕೋಲ್ಹಾಪೂರದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳ ಮೇಲೆ ಜೈ ಮಹಾರಾಷ್ಟ್ರ ಎಂಬ ಬರವಣಿಗೆಗಳನ್ನು ಬರೆದಿರುವ ಶಿವಸೇನಾ ಕಾರ್ಯಕರ್ತರು ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ಕರವೇ ತಕ್ಕ ಉತ್ತರ ನೀಡಲಿದೆ ಎಂದು ನಾಡವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ