RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ

ಗೋಕಾಕ:ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ 

ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗೋಕಾಕದ ಎಲ್.ಆರ್.ಜೆ. ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕಿ ಪ್ರೊ. ಶ್ರೀಮತಿ ಮಹಾನಂದಾ ಪಾಟೀಲರು ಮಾತನಾಡುತ್ತಿರುವುದು.

ಮಹಿಳಾ ಶೋಷಣೆ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ – ಶ್ರೀಮತಿ ಮಹಾನಂದಾ ಪಾಟೀಲ

ಗೋಕಾಕ ಮಾ 13: ಮಹಿಳೆಯ ಸ್ವಾತಂತ್ರ್ಯ ಸಮಾನತೆಯು ತುಂಬಾ ಮುಖ್ಯವಾದದ್ದು. ಮಹಿಳೆ ಅಸಮಾನತೆಯ ಕಂದಕದಲ್ಲಿ ಬದುಕುತ್ತಿದ್ದಾಳೆ. ಮಹಿಳೆ ಎರಡನೆಯ ದರ್ಜೆ ಪ್ರಜೆಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವಿಲ್ಲ. ಸ್ವಾಭಿಮಾನದಿಂದ ಬದುಕುವದು ದುಸ್ತರವಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯು ಸ್ತ್ರೀಯು ಅನೇಕ ಸಾಧನೆ ಗರಿಯನ್ನು ಕಟ್ಟಿಕೊಂಡಿದ್ದಾಳೆ. ಕನ್ನಡ ನೆಲ -ಜಲ ರಕ್ಷಣೆಗೆ ತಾಯ್ನಾಡನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮಹಿಳೆಗೆ ಸಬಲೀಕರಣ ಮುಖ್ಯ. ಮಹಿಳಾ ಶೋಷಣೆ ಅನ್ಯಾಯ ನಿರಂತರವಾಗಿ ನಡೆಯುತ್ತಿರುವದು ವಿಷಾದದ ಸಂಗತಿ. ಪುರುಷರು ಕೂಡಾ ಮಹಿಳಾ ಸಂಕೋಲೆಯಿಂದ ಪಾರು ಮಾಡಲು ಪ್ರಯತ್ನಿಸಿದ್ದಾರೆ. ಸ್ವಾತಂತ್ರ್ಯ ಒಂದು ಮನೋಧರ್ಮವಾಗಿದೆ ಎಂದು ಗೋಕಾಕದ ಎಲ್.ಆರ್.ಜೆ. ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕಿ ಪ್ರೊ. ಶ್ರೀಮತಿ ಮಹಾನಂದಾ ಪಾಟೀಲರು ಮಾರ್ಮಿಕವಾಗಿ ಮಾತನಾಡಿದರು.
ಅವರು ಕಲ್ಲೋಳಿಯ ಎಸ್.ಆರ್.ಇ.ಎಸ್. ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ದೇಶಿಯತೆಯನ್ನು ವiರಿಯುತ್ತಿರುವದು ವಿಷಾದದ ಸಂಗತಿಯಾಗಿದೆ. ಆಧುನಿಕ ಕಾಲದಲ್ಲಿ ಮನುಷ್ಯ ಆಡಂಬರದ ಜೀವನ ಸಾಗಿಸುತ್ತಿದ್ದಾನೆ. ಮಹಿಳೆ ಶೋಷಣೆ, ಅನ್ಯಾಯಕ್ಕೆ ಒಳಗಾಗಿದ್ದಾಳೆ. ಮಹಿಳೆ ಅಬಲೆಯಲ್ಲ್ಲ ಅವಳು ಸಬಲೆಯಾಗಿದ್ದಾಳೆ. ತಾಯಿಯಾದವಳಲ್ಲಿ ಮಮತೆ, ಪ್ರೀತಿ, ವಾತ್ಸಲ್ಯವಿರುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಸುರೇಶ ಹನಗಂಡಿಯವರು ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಬಾಳವ್ವ ಕಂಕಣವಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರ ಧರ್ಮಪತ್ನಿಯರು, ಮಹಿಳಾ ಘಟಕದ ಕಾರ್ಯದರ್ಶಿ ಪ್ರೊ. ಪಿ.ಬಿ.ಮಾಸ್ತಿಹೋಳಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ, ಪ್ರೊ. ಎಂ.ಬಿ.ಕುಲಮೂರ, ಪ್ರೊ. ಎಸ್.ಎಮ್.ಐಹೊಳೆ, ಕೆ.ಎಸ್.ಪರವ್ವಗೋಳ, ವಿಲಾಸ ಕೆಳಗಡೆ, ಆರ್.ಎಸ್.ಪಂಡಿತ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಕಾಲೇಜಿನ ಅಧ್ಯಾಪಕರು ಮತ್ತು ಗ್ರಾಮದ ಹಲವಾರು ತಾಯಂದಿರು ಉಪಸ್ಥಿತರಿದ್ದರು.
ಪ್ರೊ ಡಿ.ಎಸ್.ಹುಗ್ಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶ್ರೀಮತಿ ವ್ಹಿ.ವಾಯ್.ಕಾಳೆಯವರು ಸ್ವಾಗತಿಸಿ ಪರಿಚಯಿಸಿದರು. ಸುಷ್ಮಿತಾ ನಾಯಿಕವಾಡಿಯವರು ನಿರೂಪಿಸಿದರು.

Related posts: