RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್

ಗೋಕಾಕ:ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್ 

ನೂತನ ಗೋಕಾಕ ಜಿಲ್ಲಾ ರಚನೆ: ನಾಳೆ ಸಿಎಂ ಮುಂದೆ ಹೋರಾಟಗಾರರ ಪರೇಡ್ 

ಗೋಕಾಕ ಮಾ 14 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಹೊಸ ಜಿಲ್ಲೆ ರಚನೆ ಮಾಡುವಂತೆ ಜಿಲ್ಲಾ ಹೋರಾಟ ಸಮಿತಿ ಮತ್ತು ನಗರದ ಕನ್ನಡಪರ ಸಂಘಟನೆಗಳ ಪ್ರಮುಖರು ಸಿಎಂ ಸಿದ್ದರಾಮಯ್ಯ ಮುಂದೆ ಪರೇಢ ನಡೆಸಲ್ಲಿದಾರೆ

ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿಯ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ನೂತನ ಜಿಲ್ಲೆ ರಚಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ವರ್ಷಗಳಿಂದಲೂ ಹೋರಾಟಗಳು ನಡೆಯುತ್ತಲೇ ಇವೆ ಕಳೆದ ಹಲವು ತಿಂಗಳಿನಿಂದ ಈ ಹೋರಾಟಗಳು ತೀವ್ರ ಗೊಂಡಿದ್ದು ಮಾ 15 ರಂದು ಸಿಎಂ ಸಿದ್ದರಾಮಯ್ಯ ಭೇಟಯಿಗಲು ಶೂನ್ಯ ಸಂಪಾದನಾ ಮಠದ ಮುರಘರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ  ನಿಯೋಜಿತ ಗೋಕಾಕ ಜಿಲ್ಲಾ ಹೋರಾಟ ಸಮಿತಿ ವಿವಿಧ ಸಂಘಟನಗಳ ಪ್ರಮುಖರ ನಿಯೋಗ ಇಂದು ಬೆಂಗಳೂರಿಗೆ ತೆರಳಿದೆ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಹೋರಾಟ ಸಮಿತಿ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಲಿರುವ ನಿಯೋಗದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪಾ ಕಿತ್ತೂರ , ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನವರ , ಕಿರಣ ಢಮಾಮಗರ ,  ಮಾಜಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಸಿದ್ದ ಖಾನಪ್ಪನವರ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಸರ್ವಪಕ್ಷಗಳ ನಾಯಕರು ಈ ನಿಯೋಗದಲ್ಲಿ  ಪಾಲ್ಗೊಂಡು ಸಿಎಂ ಮುಂದೆ ಪರೇಡ್ ನಡೆಸಲಿದ್ದಾರೆ

 
 

Related posts: