RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ

ಗೋಕಾಕ:ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ 

ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸುತ್ತಿರುವ ನಿಯೋಗ

ಬೆಳಗಾವಿ ಜಿಲ್ಲೆ ವಿಭಜನೆ : ಶೀಘ್ರ ಜಿಲ್ಲೆಯ ಎಲ್ಲ ಶಾಸಕ , ಸಂಸದರ ಸಭೆ ಸಿಎಂ ಭರವಸೆ

ಗೋಕಾಕ ಮಾ 16: ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗುರುವಾರದಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಜಿಲ್ಲಾ ಹೋರಾಟ ಸಮಿತಿ , ವಕೀಲರ ಸಂಘ , ಕನ್ನಡಪರ ಸಂಘಟನೆ , ತಾಲೂಕಿನ ಎಲ್ಲ ಮುಖಂಡರ ನಿಯೋಗ ಸಚಿವ ರಮೇಶ ಜಾರಕಿಹೊಳಿಯೊಂದಿಗೆ ಭೇಟಿಯಾಗಿ ಮನವಿ ಅರ್ಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆಯನ್ನಾಗಿ ಮಾಡಲು ನನ್ನದೇನು ಅಭ್ಯಂತರವಿಲ್ಲ ಜಿಲ್ಲೆಯ ಎಲ್ಲ ಶಾಸಕರನ್ನು ಮತ್ತು ಸಂಸದರನ್ನು ಕರೆಯಿಸಿ ಸಮಗ್ರವಾಗಿ ಚರ್ಚಿಸಿ ಆದಷ್ಟು ಬೇಗ ಈ ಕುರಿತು ನಿರ್ಧರಿಸಲಾಗುವುದೆಂದು ಭರವಸೆ ನೀಡಿದರು .

ಈ ಸಂದರ್ಭದಲ್ಲಿ ಶೂನ್ಯ ಸಂಪಾದನಾ ಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು , ನಗರಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ , ಡಾ.ರಾಜೇಂದ್ರ ಸಣ್ಣಕ್ಕಿ , ಬಿಜೆಪಿ ಮುಖಂಡ ಅಶೋಕ ಪೂಜಾರಿ , ವಕೀಲರ ಸಂಘದ ಅಧ್ಯಕ್ಷ ಶಶಿಧರ ದೇಮಶೇಟ್ಟಿ , ಮಾಜಿ ಶಾಸಕ ಎಂ.ಎಲ್.ಮುತ್ತೇನ್ನವರ , ಅಶೋಕ ಪಾಟೀಲ , ಟಿ.ಆರ.ಕಾಗಲ , ಗೋವಿಂದ ಕೋಪ್ಪದ , ಎಸ್.ಎ.ಕೋತವಾಲ , ಅಬ್ಬಾಸ ದೇಸಾಯಿ , ಭೀಮಶಿ ಭರಮಣ್ಣವರ , ಗಿರೀಶ ಖೋತ , ಕರವೇ ಅಧ್ಯಕ್ಷರಾದ ಬಸವರಾಜ ಖಾನಪ್ಪನವರ , ಕಿರಣ ಢಮಾಮಗರ , ಅಡಿವೇಪ್ಪ ಕಿತ್ತೂರ , ಆನಂದ ಗೋಟ್ಟಡಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ನಿಯೋಗದಿಂದ ದೂರ ಉಳಿದ ಶಾಸಕರು : ನಿಯೋಗದೊಂದಿಗೆ ತೆರಳಬೇಕಾಗಿದ್ದ ಅರಬಾಂವಿ ಶಾಸಕ ಬಾಲಚಂದ್ರ ಮತ್ತು ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ನಿಯೋಗದಿಂದ ದೂರ ಉಳಿದಿದ್ದು ಎದ್ದು ಕಾಣುತ್ತಿತ್ತು

ಅಸಭ್ಯ ವರ್ತನೆ ಸಿಎಂ ತರಾಟೆ : ನಿಯೋಗದಲ್ಲಿ ತೆರಳಿದ್ದ ಎಲ್ಲ ಸದಸ್ಯರ ಮಾತುಕತೆ ನಡೆಸುವಾಗ ಗದ್ದಲ ಉಂಟು ಮಾಡಿದ್ದರಿಂದ ಸಿಎಂ ಸಿದ್ದರಾಮಯ್ಯ ರೇಗಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ

ನಿರಾಸೆ ಮೂಡಿಸಿದ ಸಿಎಂ :ಒಟ್ಟಾರೆಯಾಗಿ ಆಶಾ ಮನೋಭಾವನೆಯಿಂದ ಸಿಎಂ ಭೇಟಿಗೆ ತೆರಳಿದ್ದ ನಿಯೋಗಕ್ಕೆ ಸಿಎಂ ರಿಂದ ಸ್ವಷ್ಟ ಭರವಸೆ ಸಿಗದೆ ನಿರಾಸೆ ಮೂಡಿಸಿದ್ದಂತು ಅಲ್ಲಗಳೆಯುವಂತಿಲ್ಲಾ ಇಂದೇ ಗೋಕಾಕಕ್ಕೆ ವಾಪಸ ಆಗಲಿರುವ ನಿಯೋಗ ಮುಂದಿನ ದಿನಗಳಲ್ಲಿ ಯಾವ ನಡೆ ಅನುಸರಿಸಲ್ಲಿದೆ ಎಂಬುದರ ಮೇಲೆ ಗೋಕಾಕ ನೂತನ ಜಿಲ್ಲಾ ಘೋಷಣೆಯ ಭವಿಷ್ಯ ನಿಂತಿದೆ ಎಂದು ಎಲ್ಲರೂ ಮಾತನಾಡಿಕೋಳ್ಳುತ್ತಿದ್ದಾರೆ

Related posts: