ಗೋಕಾಕ:ಜಿಲ್ಲಾ ವಿಭಜನೆ ಸ್ವರ್ವ ಪಕ್ಷಗಳ ಮುಖಂಡರ ಸಭೆ : ಕನ್ನಡಪರ ಸಂಘಟನೆಗಳ ಮುಖಂಡರ ಹರ್ಷ
ಜಿಲ್ಲಾ ವಿಭಜನೆ ಸ್ವರ್ವ ಪಕ್ಷಗಳ ಮುಖಂಡರ ಸಭೆ : ಕನ್ನಡಪರ ಸಂಘಟನೆಗಳ ಮುಖಂಡರ ಹರ್ಷ
ಗೋಕಾಕ ಮಾ 16 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ರಚನೆ ಚರ್ಚೆಗಾಗಿ ಬರುವ ಮಾ 19 ರಂದು ಸಿಎಂ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ತಿಳಿಯುತ್ತಿದಂತೆ ಇಲ್ಲಿಯ ಕನ್ನಡ ಪರ ಸಂಘಟನೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ
ಈ ಕುರಿತು ನಮ್ಮ ಬೆಳಗಾವಿಯೊಂದಿಗೆ ಮಾತನಾಡಿರುವ ಕಿರಣ ಢಮಾಮಗರ ಮತ್ತು ಬಸವರಾಜ ಖಾನಪ್ಪನವರ ಮುರಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೊನ್ನೆ ಜಿಲ್ಲಾ ವಿಭಜನೆ ಕುರಿತು ಸಿಎಂ ಅವರಿಗೆ ಮನವರಿಕೆ ಮಾಡಿಕೋಡಲಾಗಿದ್ದರ ಬೆನ್ನಲ್ಲೇ ಇಂದು ಮತ್ತೆ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರು ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಜಿಲ್ಲಾ ವಿಭಜನೆ ಕುರಿತು ಪ್ರಸ್ತಾಪಿಸಿದ್ದರಿಂದ ಸಿಎಂ ಅವರು ಇದೆ 19 ರಂದು ಜಿಲ್ಲೆಯ ಎಲ್ಲ ಪಕ್ಷದ ಮುಖಂಡರ ಸಭೆ ಕರೆದಿರುವುದು ಸಹಜವಾಗಿ ಎಲ್ಲರಲ್ಲಿ ಹರ್ಷ ತಂದಿದೆ . ಸಭೆಯಲ್ಲಿ ಎಲ್ಲರೂ ಸೇರಿ ಪಕ್ಷ ಭೇಧ ಮರೆತು ಅಭಿವೃದ್ಧಿ ಹಿತದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ಎರಡನ್ನು ನೂತನ ಜಿಲ್ಲೆಯನ್ನಾಗಿಸಲು ಪ್ರಾಮಾಣಿಕ ಅಭಿಪ್ರಾಯಗಳನ್ನು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ
ಮಾ. 15 ರಂದು ಗೋಕಾಕ ತಾಲೂಕಿನ ಸರ್ವ ಪಕ್ಷದ ಮುಖಂಡರು ಗೋಕಾಕ ಜಿಲ್ಲೆ ರಚೆನೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲಿಯೇ ಶುಕ್ರವಾರ ಸಂಸದ ಪ್ರಕಾಶ ಹುಕ್ಕೇರಿ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದ ಸರ್ವ ಪಕ್ಷದ ಸಭೆಯನ್ನು ಆಯೋಜಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ