RNI NO. KARKAN/2006/27779|Monday, September 16, 2024
You are here: Home » breaking news » ಬೆಳಗಾವಿ: ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ

ಬೆಳಗಾವಿ: ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ 

ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ
ಬೆಳಗಾವಿ ಮೇ 23: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ನಿಮ್ಮಗೆ ಟಿಕೆಟ್ ನೀಡಲಾಗುವುದು ನಿವೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷ ಬೀಡುವ ಚಿಂತೆ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೋಡಗಿ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ ಗಾಂಧಿ ಅಭಯ ಹಸ್ತ ನೀಡಿದ್ದಾರೆ ಎಂದು ಪಕ್ಕದ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌‌ನಲ್ಲಿ ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟ ಸರಿಪಡಿಸುವಲ್ಲಿ ವಿಫಲರಾಗಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಹೋದರರಿಬ್ಬರಿಗೂ ರಾಹುಲ್ ಗಾಂಧಿ ಬಳಿ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ಕಳೆದ ರಾತ್ರಿಯೇ ವಿಮಾನ ಏರಿದ ಸತೀಶ್ ಜಾರಕಿಹೊಳಿ ದೆಹಲಿ ತಲುಪಿದ್ದರು.

ಇಂದು ಬೆಳಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದಲ್ಲಿ ತಮ್ಮನ್ನು ಪಡೆಗಣಿಸಿರುವ ಕುರಿತು ಪ್ರಸ್ತಾಪ ಮಾಡಿದರು. 40 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ. 

 

ಸಿಎಂ, ಹೆಬ್ಬಾಳ್ಕರ್ ವಿರುದ್ಧ ದೂರು:

ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್‌‌ಗೆ ಸತೀಶ್ ಜಾರಕಿಹೊಳಿ ದೂರು ನೀಡಿದರು. ಸಿಎಂ ನನ್ನ ನಿರ್ಲಕ್ಷ್ಯ ಮಾಡಿದರು. ಅವರಿಂದಾಗಿಯೇ ಸಾಕಷ್ಟು ಸಮಸ್ಯೆ ಎದುರಿಸಬೇಕಾಯ್ತು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಿ ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದರು

ಜೊತೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆಯೂ ದೂರು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌‌ರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಪಕ್ಷವನ್ನು ಹೆಬ್ಬಾಳ್ಕರ್ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಇದನ್ನೆಲ್ಲಾ ಸರಿಪಡಿಸಿ ಎಂದು ರಾಹುಲ್ ಗಾಂಧಿಗೆ ಸತೀಶ್ ಜಾರಕಿಹೊಳಿ ಮನವಿ ಮಾಡಿದರು ಎನ್ನಲಾಗಿದೆ.

ಟಿಕೆಟ್ ನಿಮಗೆ ಕನ್ಫರ್ಮ್:

ಸಮಸ್ಯೆ ಆಲಿಸಿದ ಬಳಿಕ ಯಮಕನಮರಡಿ ಕ್ಷೇತ್ರದ ಟಿಕೆಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮನ್ನ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲ್ಲ ಎಂದು ಸತೀಶ್ ಜಾರಕಿಹೊಳಿಗೆ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಪಕ್ಷದ ಸಂಘಟನೆ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಮಾತನ್ನಾಡಬೇಡಿ. ಅಂತಹ ಚಿಂತನೆಯೂ ಬೇಡ. ನಿಮ್ಮನ್ನ ಸಚಿವ ಸ್ಥಾನದಿಂದ ಬಿಟ್ಟದ್ದು ಕೇವಲ ತಾತ್ಕಾಲಿಕ ಮಾತ್ರ. ಅಷ್ಟಕ್ಕೇ ಪಕ್ಷ ನಿಮ್ಮನ್ನ ಕಡೆಗಣಿಸಿದೆ ಎಂದುಕೊಳ್ಳುವುದು ಬೇಡ. ಪಕ್ಷ ನಿಮ್ಮನ್ನು ಪರಿಗಣಿಸಿಯೇ ಜಿಲ್ಲಾ ಕಾಂಗ್ರೆಸ್‌‌ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ ಸೇರಲ್ಲ:

ರಾಹುಲ್ ಗಾಂಧಿ ಭರವಸೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ ಎನ್ನುವುದು ಕೇವಲ ವದಂತಿ. ನಾನು ಕಾಂಗ್ರೆಸ್‌‌‌ನಲ್ಲೇ ಇರುತ್ತೇನೆ. ಕಾಂಗ್ರೆಸ್ ಪಕ್ಷವನ್ನೇ ಕಟ್ಟಿ ಬೆಳೆಸುತ್ತೇನೆ ಎಂದು ಭರವಸೆ ನೀಡಿದರು.

ಆದರೆ ಇನ್ನೂ ರಮೇಶ್ ಜಾರಕಿಹೊಳಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿಲ್ಲ. ಹೀಗಾಗಿ ಸಮಸ್ಯೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಮೇ 28ರೊಳಗೆ ಭೇಟಿ ಮಾಡುವಂತೆ ಸೂಚನೆ ನೀಡಿರುವುದರಿಂದ ಇನ್ನು ಒಂದು ವಾರದಲ್ಲಿ ಬೆಳಗಾವಿ ಜಿಲ್ಲೆಯ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ

Related posts: