ಘಟಪ್ರಭಾ:ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಘಟಪ್ರಭಾ ಮಾ 17 : ಘಟಪ್ರಭಾ 220 ಕೆವ್ಹಿ ಸ್ವೀಕರಣಾ ಕೇಂದ್ರದಿಂದ ಹೊಸ 110 ಕೆವ್ಹಿ ವಿದ್ಯುತ್ ಮಾರ್ಗವನ್ನು ಸೋಲಾರ ಪ್ಲ್ಯಾಂಟ್ ಸಲುವಾಗಿ ನಿರ್ಮಾನ ಕಾರ್ಯವನ್ನು ಮಾರ್ಚ 20 ರಂದು ಕೈಕೊಳ್ಳಲು ಉದ್ದೇಶಿಸಿರುವುದರಿಂದ 110ಕೆವ್ಹಿ ಘಟಪ್ರಭಾ ಮಾರ್ಗ-1 ಹಾಗೂ 110ಕೆವ್ಹಿ ಘಟಪ್ರಭಾ ಮಾರ್ಗ-2 ರ ಮುಕ್ತತೆ ಇರುವುದರಿಂದ ಈ ಕೆಳಗಿನ 11ಕೆವ್ಹಿ ಹಾಗೂ 33ಕೆವ್ಹಿ ವಿದ್ಯುತ್ ಮಾರ್ಗಗಳ ನಿಲುಗಡೆ ಮುಂಜಾನೆ 10:00 ರಿಂದ ಸಾಯಂಕಾಲ 6:00 ಘಂಟೆಯವರೆಗೆ ಆಗುವುದರಿಂದ ಈ ಕೆಳಗಿನ ಫೀಡರಗಳ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33ಕೆವ್ಹಿ ಕಲ್ಲೋಳ್ಳಿ ಉಪಕೇಂದ್ರದ ಎಲ್ಲ 11ಕೆವ್ಹಿ ಮಾರ್ಗಗಳು, 33 ಕೆವ್ಹಿ ಗೋಕಾಕ ಟೆಕ್ಷಟೈಲ್ ಮಿಲ್ ಗೋಕಾಕ ಪಾಲ್ಸ, 33ಕೆವ್ಹಿ ಮಂಟೂರ ಫೀಡರ ಹಾಗೂ 33ಕೆವ್ಹಿ ದಂಡಾಪೂರ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ 11ಕೆವ್ಹಿ ಮಾರ್ಗಗಳು, 110ಕೆವ್ಹಿ ಘಟಪ್ರಭಾ ವಿ.ವಿ. ಕೇಂದ್ರದಿಂದ ಹೊರಡುವ ಎಲ್ಲ 11ಕೆವ್ಹಿ ಮಾರ್ಗಗಳು, ಎಫ್-4 ಎಮ್.ಡಿ.ಆರ್.ಎಸ್, (ಘಟಪ್ರಭಾ ಪಟ್ಟಣ), ಎಫ್-5 ಎನ್.ಜೆ.ವಾಯ್ (ನಂದಗಾಂವ, ಶಿವಾಪೂರ, ಮೆಲ್ಮಟ್ಟಿ ಹಾಗೂ ಶಿಂದಿಕುರಬೇಟ್), ಎಫ್-2 ಪಾಮಲದಿನ್ನಿ ಎಫ್-6 ಶಿಂಧಿಕುರಬೇಟ್ ಐಪಿ, ಎಫ್-10 ಕೊಣ್ನೂರ (ಪಟ್ಟಣ), ಎಫ್-11 ಘಟಪ್ರಭಾ ಪಟ್ಟಣ, ಎಫ್-12 ಶಿರಡಾನ್ ವಾಟರ್ ಸಪ್ಲಾಯ್ ಹಾಗೂ ಎಫ್-13 ಸಂಗನಕೇರಿ ಐಪಿ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕಾರಣ ಹೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.