RNI NO. KARKAN/2006/27779|Friday, October 18, 2024
You are here: Home » breaking news » ಖಾನಾಪುರ:ಕಾಂಗ್ರೇಸ ಪಕ್ಷದವರು ನಿಜವಾದ ನಾಡದ್ರೋಹಿಗಳು : ನಾಸೀರ ಬಾಗವಾನ ಗಂಭೀರ ಆರೋಪ

ಖಾನಾಪುರ:ಕಾಂಗ್ರೇಸ ಪಕ್ಷದವರು ನಿಜವಾದ ನಾಡದ್ರೋಹಿಗಳು : ನಾಸೀರ ಬಾಗವಾನ ಗಂಭೀರ ಆರೋಪ 

"ಶ್ರೀ ಸಿದ್ಧಾರೂಡರ ಮಠದ" ಕಟ್ಟದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡುತ್ತಿರುವ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ.

ಕಾಂಗ್ರೇಸ ಪಕ್ಷದವರು ನಿಜವಾದ ನಾಡದ್ರೋಹಿಗಳು : ನಾಸೀರ ಬಾಗವಾನ ಗಂಭೀರ ಆರೋಪ

ಖಾನಾಪುರ ಮಾ 19 : ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳಿಗಾಗಿ ನನಗೆ ಖಾನಾಪುರದಿಂದ ಕಾಂಗ್ರೆಸ ಪಕ್ಷದ ಟಿಕೇಟ ನೀಡುತ್ತೆವೆಂದು ಆಮಿಷವೋಡ್ಡಿ ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಮಾಡಿಕೊಂಡರು, ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಕಾಂಗ್ರೆಸ ಅಭ್ಯರ್ಥಿಯ ಸೋಲಿಗೆ ಕಾರಣಿಕರ್ತರಾದವರನ್ನು ಮತ್ತೆ ಮಹಾರಾಷ್ಟ್ರದಿಂದ ಕರೆದುಕೊಂಡು ಬಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಾಂಗ್ರೆಸ ಟಿಕೇಟ ನೀಡುತ್ತಿದ್ದಾರೆಂದರೆ ನಿಜವಾದ ನಾಡದ್ರೋಹಿಗಳು ಕಾಂಗ್ರೆಸ ಪಕ್ಷದವರು ಎಂದು ಖಾನಾಪುರ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ನಾಸೀರ ಬಾಗವಾನ ಹೇಳಿದರು.

ತಾಲೂಕಿನ ಭೂರಣಕಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸುರಾಪುರ ಗ್ರಾಮದಲ್ಲಿ ರವಿವಾರದಂದು ಹಮ್ಮಿಕೊಂಡಂತಹ “ಶ್ರೀ ಸಿದ್ಧಾರೂಡರ ಮಠದ” ಕಟ್ಟದ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ತಾಲೂಕಿನ ಎಲ್ಲ ಘಟಾನುಘಟಿ ನಾಯಕರುಗಳು ನನ್ನ ಬೆನ್ನಿಗೆ ನಿಂತಿರುವುದಕ್ಕೆ ಮೊದಲಿಗೆ ಅವರೆಲ್ಲರಿಗೂ ನಾನು ಚಿರರುಣಿ. ಜೋತೆಗೆ ಕ್ಷೇತ್ರದ ಅಭಿವೃದ್ಧಿಗೊಸ್ಕರ ತನು-ಮನ-ಧನದ ರೂಪದಲ್ಲಿ ಸಾಕಷ್ಟು ಸಹಾಯ ಮಾಡಿದ್ದೆನೆ. ಇನ್ನೂ ಕೂಡ ಸಹಾಯ ಮಾಡಲು ಸಿದ್ಧನಿದ್ದೆನೆ ಆದರೆ ತಾಲೂಕಿನಲ್ಲಿ ಶಾಶ್ವತ ನೀರಾವರಿ ಮತ್ತು ಕೈಗಾರಿಗೆಗಳಂತಹ ಏನಾದರೂ ದೊಡ್ಡಮಟ್ಟದ ಕಾರ್ಯ ಮಾಡಬೇಕೆಂದರೇ ಅಧಿಕಾರ ಅತ್ಯವಶ್ಯಕವಾಗಿದೆ. ಆದ್ದರಿಂದ ತಾವೆಲ್ಲರೂ ಸೇರಿಕೊಂಡು ನನಗೆ ಆಶೀರ್ವಾದ ಮಾಡಿದರೇ, ಮಹಿಳಾ ಸಂಘಗಳ ಸಾಲಮನ್ನಾ ನನ್ನ ಸ್ವಂತ ಹಣಭರಿಸಿ ಮನ್ನಾ ಮಾಡಿಸುತ್ತೆನೆ. ಅದೇ ಕರ್ನಾಟಕ ರಾಜ್ಯದಲ್ಲಿ ಕುಮಾರಣ್ಣನ ಸರಕಾರ ಅಧಿಕಾರಕ್ಕೆ ಬಂದರೇ 24ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಮಾತನಾಡಿದ ಹಿರಿಯ ರಾಜಕಾರಣಿ,ವಕೀಲರಾದ ಸಿ.ಬಿ.ಅಂಬೋಜಿ ರವರು ತಾಲೂಕಿನ ಪ್ರಭಾವಿ ನಾಯಕರುಗಳು ಒಂದೇ ವೇದಿಕೆಯಲ್ಲಿದ್ದಾರೆ, ಮುಂದೇನಪ್ಪಾ ಎಂದು ಭಯಭಿತರಾಗಬೇಡಿ, ಈಗ ಬದಲಾವಣೆಯ ಕಾಲ ಕೂಡಿಬಂದಿದೆ ಅದಕ್ಕಾಗಿ ನಾವೆಲ್ಲರೂ ಜಾತಿ-ಭೇದ ಮತ್ತು ಪಕ್ಷಪಾತಮರೆತು ಒಂದಾಗಬೇಕು. ಏಕೆಂದರೆ ಮನುಷ್ಯ ಒಂದು ಕಡ್ಡಿಯನ್ನು ತೆಗೆದುಕೊಂಡು ಮುರಿಯಲು ಪ್ರಯತ್ನಿಸಿದರೆ ತಕ್ಷಣವೇ ಮುರಿದು ಬೀಳುತ್ತದೆ. ಅದೇ ಕಡ್ಡಿಯ ಜೋತೆಗೆ ನಾಲ್ಕೈದು ಕಡ್ಡಿ ಸೇರಿಸಿ ಮುರಿಯಲು ಪ್ರಯತ್ನಿಸಿದರೇ ಅಷ್ಟು ಸುಲಭವಾಗಿ ಅದು ಮುರಿಯಲ್ಲ. ಹೀಗೆ ನಾಸೀರ ಬಾಗವಾನಗೆ ನಾವೆಲ್ಲರೂ ಸೇರಿಕೊಂಡು ಬೆಂಬಲಕೊಟ್ಟು ಈ ಬಾರಿ ಎಂ.ಎಲ್.ಎ ಮಾಡೋಣ ತಾವೂ ಎಲ್ಲರೂ ಒಂದಾಗಬೇಕೆಂದು ನುಡಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ರಪೀಕ ಖಾನಾಪುರಿ ರವರು ನಾಸೀರ ಬಾಗವಾನ ಯಾವುದೇ ಅಧಿಕಾರ ಇಲ್ಲದಿದ್ದರೂ ಕೋಟಿಗಟ್ಟಲೇ ಹಣ ತಾಲೂಕಾಭಿವೃದ್ಧಿಗೊಸ್ಕರ ಖರ್ಚು ಮಾಡಿದಷ್ಟು, ಅಧಿಕಾರದಲ್ಲಿದ್ದಂತಹ ಯಾವೋಬ್ಬ ಜನಪ್ರತಿನಿಧಿಯು ಇಷ್ಟು ಖರ್ಚು ಮಾಡಿಲ್ಲ. ಆದ್ದರಿಂದ ನಾಯಕನ ಅವಶ್ಯಕತೆ ನಮ್ಮ ತಾಲೂಕಿಗೆ ಇದೆ ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಾನು ಮತ್ತು ನನ್ನ ಸಂಘಡಿಗರೆಲ್ಲರು ಸೇರಿಕೊಂಡು ಬಾಗವಾನ ಅವರ ಬೆನ್ನಿಗೆ ನಿಂತು ಚುನಾವಣೆಯಲ್ಲಿ ಕೆಲಸ ಮಾಡಿ ಇದೊಂದು ಬಾರಿ ನಾಸೀರ ಬಾಗವಾನರಿಗೆ ಶಾಸಕರನ್ನಾಗಿ ಆಯ್ಕೆ ಮಾಡೋಣ ಎಂದರು.

ಇದರ ಜೋತೆಗೆ ಮಾತನಾಡಿದ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ರಿಯಾಜಅಹ್ಮದ ಪಟೇಲ ರವರು ಮನೆಯಮಂದಿ ಯಾವಾಗ ಬೇಕಾದರೂ ಮರಳಿ ತಮ್ಮ ಮನೆಗೆ ಬರಬಹುದು. ಈಗಾಗಲೇ ಕಾಂಗ್ರೇಸ ಪಕ್ಷದ ಕಾರ್ಯವೈಖರಿಗೆ ಬೇಸತ್ತು ಮರಳಿ ನಮ್ಮ ಪಕ್ಷಕ್ಕೆ ಸೆರ್ಪಡೆಯಾದ ಎಲ್ಲ ನಾಯಕರೂಗಳಿಗೆ ಮತ್ತು ಕಾರ್ಯಕರ್ತರಿಗೆ ಮುಂದಿನ ಪಯಣ ಯಶಸ್ವಿಯಾಗಲೇಂದು ಹಾರೈಸುತ್ತೆನೆ. ಜೋತೆಗೆ ಖಾನಾಪುರ ಅಭ್ಯರ್ಥಿಯಾಗಿ ನಾಸೀರ ಬಾಗವಾನ ಸ್ಪರ್ಧಿಸಿದ್ದರಿಂದ ನಮ್ಮ ಪಕ್ಷಕ್ಕೆ ಮತ್ತು ನಮ್ಮೆಲ್ಲರಿಗೂ ದೊಡ್ಡ ಬಲಬಂದಂತಾಗಿದೆ. ಸೂರ್ಯ-ಚಂದ್ರನೀರುವುದು ಎಷ್ಟು ಸತ್ಯವೋ ಈ ಬಾರಿ ನಾಸೀರ ಬಾಗವಾನ ಎಂ.ಎಲ್.ಎ ಆಗುವುದು ಅಷ್ಟೇ ಶತಸಿದ್ಧ.

ಈ ಕಾರ್ಯಕ್ರಮದಲ್ಲಿ ದಶರಥ ಗುರನ್ನವರ, ಗ್ರಾಮಸಂಸ್ಥಾಪಕರಾದ ಶ್ರೀಮತಿ ಶಾಂತಾಬಾಯಿ ಬೊಗಲೆ, ಪ್ರಕಾಶ ದೊಡ್ಡೆಬೈಲುರಕರ, ಎಮ್.ಎಮ್.ಸಾಹುಕಾರ, ಅಜೀಜ ಗಿರಿಯಾಲ, ಪಾಂಡುರಂಗ ಮಿಟಗಾರ, ಅಶ್ಪಾಕ ಪಟೇಲ, ಅಶ್ರಪ ಹೋಸುರ, ಶಿವರಾಯ ಆಯಟ್ಟಿ, ರಾಮಪ್ಪ ತಳವಾರ, ಶಶಿಕಾಂತ ಗಸ್ತೆ, ಪ್ರವೀಣ ಗೊಗಲೆ, ಜಾಕೀರ ಪಟೇಲ, ಶಾದಾಬ ಪಟೇಲ, ಮುನಾಫ ತಿಗಡಿ, ಶಬ್ಬೀರ ಕಿತ್ತೂರ,

Related posts: