RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಪೊಲೀಸ ಪೇದೆಯಿಂದ ಅಸಭ್ಯ ವರ್ತನೆ : ವಕೀಲರ ಸಂಘದಿಂದ ಧಿಢೀರ ಪ್ರತಿಭಟನೆ , ಸಾರ್ವಜನಿಕರ ಪರದಾಟ

ಗೋಕಾಕ:ಪೊಲೀಸ ಪೇದೆಯಿಂದ ಅಸಭ್ಯ ವರ್ತನೆ : ವಕೀಲರ ಸಂಘದಿಂದ ಧಿಢೀರ ಪ್ರತಿಭಟನೆ , ಸಾರ್ವಜನಿಕರ ಪರದಾಟ 

ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸುತ್ತಿರುವ ವಕೀಲ ಸಂಘದ ಸದಸ್ಯರು

ಪೊಲೀಸ ಪೇದೆಯಿಂದ ಅಸಭ್ಯ ವರ್ತನೆ : ವಕೀಲರ ಸಂಘದಿಂದ ಧಿಢೀರ ಪ್ರತಿಭಟನೆ , ಸಾರ್ವಜನಿಕರ ಪರದಾಟ
ಗೋಕಾಕ ಮಾ 19: ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ರವಿವಾರದಂದು ನಡೆದ ಉದ್ದಮ್ಮ ದೇವಿ ಜಾತ್ರಾ ಸಂಧರ್ಭದಲ್ಲಿ ಗೋಕಾಕ ಗ್ರಾಮೀಣ ಠಾಣೆ ಪೇದೆ ಎಂ.ವಾಯ್ ಕೆಂಪಣ್ಣ ನ್ಯಾಯವಾದಿ ಎ.ಎಸ್.ಬೆನಚಿನಮರಡಿ ಮೇಲೆ ಹಲ್ಲೆ ಮಾಡಿ ವಕೀಲ ವೃತ್ತಿಯ ಬಗ್ಗೆ ಅವಹೇನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ವಕೀಲರ ಸಂಘದ ಸದಸ್ಯರು ಅಧ್ಯಕ್ಷ ಎಸ್.ವಿ ದೇಮಶೇಟ್ಟಿ ಅವರ ನೇತೃತ್ವದಲ್ಲಿ ಸೋಮವಾರದಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಧಿಢೀರ ಪ್ರತಿಭಟನೆ ಹಮ್ಮಿಕೊಂಡು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.

ಹಲ್ಲೆ ನಡೆದ ಹಿನ್ನೆಲೆಯಲ್ಲಿ ದಿ.18 ರಂದು ದೂರ ದಾಖಲಾದರೂ ಸಹ ಅವರ ಮೇಲೆ ಕ್ರಮ ಜರುಗಿಸಲ್ಲಾ ಎಂದು ಪೊಲೀಸ ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿ 11 ಘಂಟೆಯಿಂದ ರಸ್ತೆ ತಡೆ ನಡೆಸಿ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲಾ ಎಂದು ಪಟ್ಟು ಹಿಡಿದ್ದಾರೆ.

ಸಂಚಾರ ಅಸ್ತವ್ಯಸ್ತ , ಸಾರ್ವಜನಿಕರ ಪರದಾಟ : ಇಂದು ಮುಂಜಾನೆಯಿಂದ ವಕೀಲರ ಸಂಘದವರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುತ್ತಿದ್ದಾರೆ

ಪ್ರತಿಭಟನೆ ವೇಳೆ ಪರದಾಡಿದ ಅಂಗವಿಕಲ ಮಹಿಳೆ

ಪೊಲೀಸರೊಂದಿಗೆ ಮಾತಿನ ಚಕಮಕಿ : ಪ್ರತಿಭಟನೆಯ ಸಂಧರ್ಭದಲ್ಲಿ ವಕೀಲರ ಮತ್ತು ಪೊಲೀಸ ಅಧಿಕಾರಿಗಳ ನಡೆವೆ ಮಾತಿನ ಚಕಮಕಿ ಉಂಟಾಗಿ ಸ್ವಲ್ಪ ಸಮಯ ಸ್ಥಳದಲ್ಲಿ ಬೀಗುವಿನ ವಾತಾರಣದ ಉಂಟಾಗಿತ್ತು ಇದರ ಗಂಭೀರತೆಯನ್ನು ಅರಿತ ಪೊಲೀಸರು ಹೆಚ್ಚಿನ ಪೊಲೀಸ ಬಂದೋಬಸ್ತ ಒದಗಿಸಿದ್ದಾರೆ

ವಕೀಲರೊಂದಿಗೆ ವಾದಕ್ಕೀಳಿದಿರುವ ಪೊಲೀಸ ಸಿಬ್ಬಂದಿಯರು

 

ಡಿವಾಯ್ಎಸಪಿ ಕಛೇರಿ ಎದುರು ಧರಣಿ : ಸೂಮಾರು ಮೂರು ಘಂಟೆಗೂ ಹೆಚ್ಚು ಕಾಲ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಯಿಸಿದ ವಕೀಲ ಸಂಘದ ಸದಸ್ಯರು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಪೇದೆಯ ಮೇಲೆ ಸೂಕ್ತ ಕ್ರಮ ಕೈಗೋಳಬೇಕೆಂದು ಧರಣಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿರುವ ವಕೀಲ ಸಂಘದ ಸದಸ್ಯರು

Related posts: