ಗೋಕಾಕ:ಡಾ. ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ : ಸೋಮಶೇಖರ ಮಗದುಮ್ಮ
ಡಾ. ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ : ಸೋಮಶೇಖರ ಮಗದುಮ್ಮ
ಗೋಕಾಕ ಮಾ, 19 ;- ಜಾತಿ, ಮತ, ಹೆಣ್ಣು-ಗಂಡು ಬೇಧ ಭಾವವಿಲ್ಲದೆ ಬಿದ್ದವರನ್ನು ಮೇಲೆತ್ತುವ ಕಾರ್ಯವನ್ನು ಡಾ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಸೋಮಶೇಖರ ಮಗದುಮ್ಮ ಹೇಳಿದರು.
ಅವರು, ಭಾನುವಾರದಂದು ನಗರದ ಸಮುದಾಯ ಭವನದಲ್ಲಿ ಇಲ್ಲಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧ ಯೋಜನೆ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರ ಶುಭಾಶೀರ್ವಾದಗಳೊಂದಿಗೆ ಸ್ವ-ಉದ್ಯೋಗ ಪೂರಕವಾಗಿ ದ್ವಿ ಚಕ್ರವಾಹನ ಹಾಗೂ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮ ಸ್ವರಾಜ್ಯ ಮಾಡುವ ಉದ್ದೇಶದಿಂದ ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬ ಮಂಜುನಾಥ ಸ್ವಾಮಿಯ ಕೃಪೆಯಿಂದ ತಮ್ಮ ಸಮಯವನ್ನು ಮುಡುಪಾಗಿಟ್ಟಿದೆ. ಜನರನ್ನು ಸಂಘಟಿಸಿ ನಿಮ್ಮ ಬದುಕನ್ನು ಕಟ್ಟಿಕೊಳ್ಳುವ ಪೂರಕ ಯೋಜನೆಗಳನ್ನು ಕಲ್ಪಿಸಿ ನಿಮ್ಮ ಕುಟುಂಬ ದಾ ಬೆಳಕಾಗಿರಲು ಹೆಗ್ಗಡೆಯವರು ಶ್ರಮಿಸುತ್ತಿದ್ದು, ನೀವೆಲ್ಲ ಸ್ವಾವಲಂಬಿಗಳಾಗಿ ಬದುಕಬೇಕೆಂಬ ಅವರ ಮಹಾದಾಸೆಯನ್ನು ಸಕಾರಗೊಳಿಸುವಂತೆ ಕೋರಿದ ಅವರು, ರಾಜ್ಯದಲ್ಲಿ ಮಧ್ಯದರ್ಜನ ಶಿಬಿರಗಳನ್ನು ನಡೆಸುವ ಮೂಲಕ ಒಂದು ಲಕ್ಷ ಕುಟುಂಬಗಳಿಗೆ ಬೆಳಕನ್ನು ನೀಡಿದ ಕೀರ್ತಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸುರೇಶ ಮೊಯ್ಲಿ ಅವರು ಮಾತನಾಡಿ, ಸಂಘದ ಸದಸ್ಯರಿಗೆ ಉದ್ಯೋಗ ತರಬೇತಿ ನೀಡಿ ಸಾಲ ಪಡೆಯುವ ಅರ್ಹತೆ ಬರುವಂತೆ ಮಾಡುವ ಮೂಲಕ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ. 2 ಸಾವಿರದ 975 ಕೋಟಿ ಸಾಲವನ್ನು ವಿವಿಧ ಬ್ಯಾಂಕಗಳ ಮೂಲಕ ತಾವು ತಯಾರಿಸುವ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ವಾಹನಗಳ ಸೌಲಭ್ಯ ಕಲ್ಪಿಸುತ್ತಿದ್ದು, ಇದರಿಂದ ಸಮಯದ ಉಳಿತಾಯದೊಂದಿಗೆ ಹೆಚ್ಚಿನ ಕೆಲಸ ಮಾಡಲು ಅನುಕೂಲವಾಗುವುದು. ಪೂಜ್ಯರ ಆಶೀರ್ವಾದದ ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ದ್ವಿಚಕ್ರ ವಾಹನದ ಕೀಲಿಗಳನ್ನು ವಿತರಿಸಲಾಯಿತು. ಮಾಸಾಶನ ಅನುದನಗಳನ್ನು ನೀಡಲಾಯಿತು. ಸೋಲಾರ ಶಕ್ತಿಯಿಂದ ಕಾರ್ಯ ನಿರ್ವಹಿಸುವ, ರೊಟ್ಟಿ ತಯಾರಿಸುವ, ಹೊಲಿಗೆ ಹಾಗೂ ಝರಾಕ್ಸ್ ಯಂತ್ರಗಳ ಪ್ರಾತಕ್ಷಿತೆ ನಡೆಯಿತು.
ವೇದಿಕೆ ಮೇಲೆ ಡಿಎಸ್‍ಪಿ ಪ್ರಭು ಡಿ.ಟಿ., ಕಾರ್ಪೋರೇಶನ್ ಬ್ಯಾಂಕ್ ವ್ಯವಸ್ಥಾಪಕ ಸುರೇಶಕುಮಾರ ರಾವ್, ದ್ವಿಚಕ್ರ ವಾಹನ ಶೋರೂಮ್ ಮಾಲೀಕರುಗಳಾದ ಶಿವಾನಂದ ಉದುಪುಡಿ, ಮಹ್ಮದ ಖಾಜಿ, ಎಂ.ಬಿ.ಪಾಟೀಲ, ಸೆಲ್ಕೋ ಸೋಲಾರ್‍ನ ವಿನಾಯಕ ಹೆಗಡೆ ಇದ್ದರು.
ಯೋಜನಾಧಿಕಾರಿ ಸುರೇಂದ್ರ ಸ್ವಾಗತಿಸಿದರು. ಮಹಾದೇವ ನಿರೂಪಿಸಿದರು. ದಿನೇಶ ವಂದಿಸಿದರು.