RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ

ಮೂಡಲಗಿ:ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ 

ಮೂಡಲಗಿಯಲ್ಲಿ ಅರಭಾಂವಿ ಮಂಡಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗುಜರಾತನ ಸಂಸದ ಚಂದ್ರಕಾಂತ ಪಾಟೀಲ ಅವರು ಮಾತನಾಡಿದರು.

ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಿ : ಗುಜರಾತ್ ಸಂಸದ ಚಂದ್ರಕಾಂತ ಪಾಟೀಲ

ಮೂಡಲಗಿ ಮಾ 20 : ರಾಜ್ಯ ಸರ್ಕಾರದ ವೈಫಲ್ಯತೆ ಹಾಗೂ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕು. ಅರಭಾಂವಿ ವಿಧಾನ ಸಭಾ ಮತಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣಿ ಜಪ್ತು ಮಾಡಲು ಎಲ್ಲ ಕಾರ್ಯಕರ್ತರು ಹಗಲಿರಳು ದುಡಿಯುವಂತೆ ಗುಜರಾತನ ಹಿರಿಯ ಲೋಕಸಭೆ ಸದಸ್ಯ ಚಂದ್ರಕಾಂತ ಪಾಟೀಲ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಇಲ್ಲಿಯ ಈರಣ್ಣಾ ದೇವಸ್ಥಾನದಲ್ಲಿ ಮಂಗಳವಾರದಂದು ಅರಭಾಂವಿ ಬಿಜೆಪಿ ಮಂಡಲ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡುವಂತೆ ಕಾರ್ಯಕರ್ತರನ್ನು ಕೋರಿದರು.
ಅರಭಾಂವಿ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಕ್ರೀಯಾಶೀಲರಾಗಿ ಪಕ್ಷದ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸುತ್ತಿದ್ದಾರೆ. ಅದರಲ್ಲೂ 10135 ಫೇಜ್ ಪ್ರಮುಖರನ್ನು ನೇಮಿಸಿರುವದು, ಸದಸ್ಯತ್ವ ಅಭಿಯಾನ, ಮಿಸ್ಡ ಕಾಲ್ ಮೂಲಕ ಸದಸ್ಯತ್ವ ಅಭಿಯಾನ, ವಿಸ್ತಾರಕರ ಸಭೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿಗಳ ಠೇವಣಿ ಜಪ್ತುಮಾಡಲು ಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ಮತಗಟ್ಟೆಗಳ ಪ್ರಮುಖರು ಶ್ರಮಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ರಾಜ್ಯದಲ್ಲಿಯೇ ದಾಖಲೆ ಮತಗಳಿಂದ ಜಯಶಾಲಿಯಾಗುವಂತೆ ನೋಡಿಕೊಳ್ಳ ಬೇಕೆಂದು ತಿಳಿಸಿದರು.
ಕೇಂದ್ರ ಸರಕಾರವು ನಿರ್ಗತಿಕ ಕುಟುಂಬಗಳಿಗೆ ಉಜ್ವಲಾ ಸೀಲಿಂಡರಗಳನ್ನು ಉಚಿತವಾಗಿ ನೀಡುತ್ತಿದೆ. ಇಂತಹ ಸಾಧನೆಯನ್ನು ಬಡವರಿಗೆ ಮುಟ್ಟಿಸಲು ಶ್ರಮಿಸಬೇಕು. ಇದು ಉಚಿತವಾಗಿದ್ದು ಯಾರಾದರೂ ಈ ಯೋಜನೆಗಾಗಿ ಫಲಾನುಭವಿಗಳಿಂದ ಹಣ ಪಡೆದರೆ ಅಂತವರ ವಿರುದ್ಧ ಪಕ್ಷಕ್ಕೆ ದೂರು ನೀಡುವಂತೆ ಕೋರಿದರು.
ಈಗಿಂದಲೆ ಭೂತ ಮಟ್ಟದ ಪ್ರಮುಖರು ಮತದಾರರೊಂದಿಗೆ ಸಂಪರ್ಕ ನಡೆಸಿ ಬಿಜೆಪಿ ಪರ ವಾಲುವಂತೆ ಮಾಡಬೇಕು. ವೈಧ್ಯರು, ಇಂಜಿನೀಯರ, ಶಿಕ್ಷಕರು, ಕರ್ಮಚಾರಿ ಸೇರಿದ್ದಂತೆ ಸಮಾಜದ ಹಲವು ಸ್ಥರನಾದ ವ್ಯಕ್ತಿಗಳನ್ನು ಭೇಟಿ ಮಾಡಿ ನಮ್ಮ ಸರಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬೇಕು. ಪ್ರತಿ ಗ್ರಾಮಗಳಿಗೆ ಶಕ್ತಿ ಕೇಂದ್ರಗಳ ಪ್ರಮುಖರು ಭೇಟಿ ಮಾಡಿ ಅಭ್ಯರ್ಥಿ ಪರ ಮತ ಕೇಳಬೇಕು. ಪ್ರತಿ ಮತಗಟ್ಟೆಗಳಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳನ್ನು ಹಾಕಿಸುವ ಮತಗಟ್ಟೆ ಪ್ರಮುಖರನ್ನು ಅಭಿನಂದಿಸಿ ಅವರಿಗೆ ಪಕ್ಷದಿಂದ ನಗದು ರೂಪದ ಬಹುಮಾನ ವಿತರಿಸುವದಾಗಿ ಘೋಷಿಸಿದರು.
ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಮಾತನಾಡಿ, ಪ್ರಧಾನಿ ಮೋದಿಯವರು ದೇಶದ 8 ಕೋಟಿ ಜನರ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಿ ಕೊಟ್ಟಿದ್ದಾರೆ. ಉದ್ಯೋಗ ಸೃಷ್ಠಿಸಲು ಮುದ್ರಾ ಯೋಜನೆ ಜಾರಿಗೋಳಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೋಳಿಸಿರುವ ಮೋದಿಯವರ ಕೈಬಲಪಡಿಸಲು ಬಾಲಚಂದ್ರ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಕೋರಿದರು.
ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸಿ.ಆರ್ ಮುತಾಲಿಕ ದೇಸಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ಹಿರಿಯ ಸಹಕಾರಿ ಮುಖಂಡ ಬಸಗೌಡ ಪಾಟೀಲ(ನಾಗನೂರ), ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಎಸ್.ಜಿ ಢವಳೇಶ್ವರ ಉಪಸ್ಥಿತರಿದ್ದರು.
ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಸ್ವಾಗತಿಸಿದರು. ಪ್ರಕಾಶ ಮಾದರ ಕಾರ್ಯಕ್ರಮ ನಿರೂಪಿಸಿದರು. ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ವಂದಿಸಿದರು.

ಬಿಜೆಪಿ ಬಿಡಲ್ಲ: ದಾಖಲೆಯ ಫಲಿತಾಂಶಕ್ಕೆ ಪಣ ತೊಡಿ- ಬಾಲಚಂದ್ರ ಜಾರಕಿಹೊಳಿ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿಯಲ್ಲಿ ಮಂಗಳವಾರದಂದು ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಈ ಬಾರಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೇ ಮಾಡುತ್ತಿದ್ದು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬಾರದು. ಕಳೆದ ಬಾರಿಗಿಂತ ಈ ಬಾರಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಲಿಕ್ಕೆ ಕಾರ್ಯಕರ್ತರು ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಕಾರ್ಯಕರ್ತರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವರು ತಪ್ಪು ಸಂದೇಶಗಳನ್ನು ಕಾರ್ಯಕರ್ತರಿಗೆ ನೀಡುತ್ತಿದ್ದಾರೆ. ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುತ್ತಾರೆಂಬ ಸುಳ್ಳು ವದಂತಿಗಳನ್ನು ಸೃಷ್ಠಿಸುತ್ತಿದ್ದಾರೆ. ಬಿಜೆಪಿಯಿಂದ ಅರಭಾಂವಿ ಕ್ಷೇತ್ರದಿಂದ ಸ್ಪರ್ಧಿಸುವದು ಪಕ್ಕಾ ಎಂದು ಸ್ಪಷ್ಟನೆ ನೀಡಿದರು.
ತಮ್ಮ ತಮ್ಮಲ್ಲಿಯ ವ್ಯತ್ಯಾಸಗಳನ್ನು ಮರೆಯಬೇಕು. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ನಮ್ಮ ಗೆಲುವಿಗೆ ದುಡಿಯಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೊಮ್ಮೆ ಜನಸೇವೆ ಮಾಡಲು ವಿಧಾನ ಸಭೆಗೆ 5 ನೇ ಬಾರಿಗೆ ದಾಖಲೆಯ ಮತಗಳಿಂದ ಆಯ್ಕೆ ಮಾಡಬೇಕೆಂದು ಕೋರಿದರು. ಮೂಡಲಗಿ ಪಟ್ಟಣದಲ್ಲಿ ಶೇ. 75 ರಷ್ಟು ಮತಗಳು ಲಭಿಸಲು ಈಗಿಂದಲೇ ಕಾರ್ಯಕರ್ತರು ಸನ್ನಧ್ಧರಾಗಿ ದುಡಿಯುವಂತೆ ಮನವಿ ಮಾಡಿದರು.
ಬಿಜೆಪಿ ಸ್ಪಷ್ಟ ಬಹುಮತದಿಂದ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದ್ದು, ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಬಿಜೆಪಿ ಅಧಿಕಾರಾವಧಿಯಲ್ಲಿ ಮಾತ್ರ ರೈತರ ಅಭಿವೃದ್ಧಿ ಸಾಧ್ಯವೆಂದ ಅವರು, ರೈತರ ಸಾಲ ಮನ್ನಾ ಮಾಡುವದು ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಸರಕಾರದಿಂದ ಮಾತ್ರ ಸಾಧ್ಯವೆಂದು ಹೇಳಿದರು.

Related posts: