ಗೋಕಾಕ:ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹಿಸಿ ನ್ಯಾಯವಾದಿಗಳಿಂದ ಶುಕ್ರವಾರ ಗೋಕಾಕ್ ಬಂದ
ಮೂರನೇ ದಿನಕ್ಕೆ ಕಾಲಿಟ್ಟ ವಕೀಲರ ಪ್ರತಿಭಟನೆ : ನ್ಯಾಯಕ್ಕಾಗಿ ಆಗ್ರಹಿಸಿ ನ್ಯಾಯವಾದಿಗಳಿಂದ ಶುಕ್ರವಾರ ಗೋಕಾಕ್ ಬಂದ
ಗೋಕಾಕ ಮಾ 21: ವಕೀಲರ ಮೇಲೆ ಹಲ್ಲೆ ನಡಿಸಿ ಅಸಭ್ಯವಾಗಿ ವರ್ತಿಸಿದ ಪೋಲಿಸ್ ಪೇದೆಯನ್ನು ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬುಧವಾರ ಮೂರನೆಯ ದಿನಕ್ಕೆ ಕಾಲಿಟ್ಟಿದೆ .
ಇಂದು ಮುಂಜಾನೆ ನ್ಯಾಯಾಲಯ ಆವರಣದಲ್ಲಿ ಸೇರಿದ ವಕೀಲರ ಸಂಘದ ಸದಸ್ಯರು ಪೊಲೀಸರ ವಿಳಂಬ ನೀತಿ ಖಂಡಿಸಿ ಅವರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಡಿ ವೈ ಸ್ ಪಿ ಕಚೇರಿ ವರೆಗೆ ಮೆರವಣಿಗೆ ನಡಿಸಿ ಧರಣಿ ಸತ್ತ್ಯಾಗ್ರಹ ನಡೆಸಿದ್ದಾರೆ
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಷಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಸ್ ವಿ ದೇಮಶೇಟ್ಟಿ ವಕೀಲರ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಪೇದೆಯನ್ನು ಬಂದಿಸಿ ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಕಳೆದ ಮೂರು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ಇಲಾಖೆ ಉನ್ನತ ಅಧಿಕಾರಿಗಳು ಅವನ ಮೇಲೆ ಯಾವದೇ ಕ್ರಮ ಜರುಗಿಸದೆ ಅವನನ್ನು ರಕ್ಷಿಸಿಸುತ್ತಿರುವದು ಖಂಡನಾರ್ಹ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವ ವಕೀಲರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಇನ್ನು ಸಾಮಾನ್ಯ ಜನರೊಂದಿಗೆ ಯಾವ ರೀತಿ ವರ್ತಿಸುತ್ತಾರೆಂದು ನಾವು ಅವಲೋಕಿಸ ಬೇಕಾದ ಪರಿಸ್ಥಿತಿ ಎದುರಾಗಿದೆ.
ನಾಳೆ ಸಾಯಂಕಾಲದ ವರೆಗೆ ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಪೇದೆಯನ್ನು ಬಂಧಿಸದಿದ್ದಲಿ ಶುಕ್ರವಾರದಂದು ಗೋಕಾಕ್ ನಗರವನ್ನು ಸಂಪೂರ್ಣ ಬಂದ್ ಮಾಡಿ ಉಗ್ರವಾಗಿ ಪ್ರತಿಭಟಿಸಲಾಗುವದು ಈ ಸಂದರ್ಭದಲ್ಲಿ ಯಾವದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆ ಹೊಣೆ ಯೆಂದು ದೇಮಶೇಟ್ಟಿ ಎಚ್ಚರಿಕೆ ನೀಡಿದ್ದಾರೆಲ್ಲದೆ ನಗರದ ಎಲ್ಲ ಸಂಘ ಸಂಸ್ಥೆಗಳು , ವ್ಯಾಪಾರಸ್ತರು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡಿ ಸಹಕರಿಸಬೇಕೆಂದು ವಕೀಲರ ಸಂಘದ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಿ ಆರ್ ಕೊಪ್ಪ , ಬುದಿಗೋಪ್ಪ, ನ್ಯಾಯವಾದಿ ಸಂಘದ ಸಿ ಡಿ ಹುಕ್ಕೇರಿ, ಸಿ ಬಿ ಗಿಡ್ಡನವರ , ಸಿಂಪಿ , ಶಫೀ ಜಮಾದಾರ, ಬಾಬು ಮುಲ್ಲಾ, ರಘುರಾಮ್ ಸುಭಂಜಿ , ಆರ್ ಎಸ್ ಬಿರನ್ನವರ್ ,ವಿಷ್ಣು ಲಾತೂರ, ಆನಂದ್ ಪಾಟೀಲ್, ಸೇರಿದಂತೆ ಎಲ್ಲಾ ನ್ಯಾಯವಾದಿಗಳು ನ್ಯಾಯಾಲಯದ ಕಾರ್ಯ ಕಲಾಪ ದೂರ ಉಳಿದು ಧರಣಿಯಲ್ಲಿ ಭಾಗವಹಿಸಿದ್ದರು..