RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಂಗಳವಾರದಂದು ಸುಣಧೋಳಿಯಲ್ಲಿ 10 ಲಕ್ಷ ರೂ. ವೆಚ್ಚದ ಕನಕ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ : ಶಾಸಕ ಬಾಲಚಂದ್ರ

ಮೂಡಲಗಿ ಮಾ 21 : ಸುಣಧೋಳಿ ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನತೆಯ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಗುಂಪುಗಾರಿಕೆ ಮರೆತು ಎಲ್ಲರೂ ಒಂದಾಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಇಲ್ಲಿಗೆ ಸಮೀಪದ ಸುಣಧೋಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಕನಕ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳು ಸುಧಾರಿಸಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಹಿತಾಸಕ್ತಿ ಮರೆತು ಅಭಿವೃದ್ಧಿಗಾಗಿ ಒಂದಾಗಬೇಕು. ಜನಸೇವೆಗೆ ಅಧಿಕಾರವೇ ಮುಖ್ಯವಲ್ಲ. ಅಧಿಕಾರವಿಲ್ಲದೆಯೂ ಕೆಲಸ ಮಾಡಬೇಕೆಂದು ಗ್ರಾಮಸ್ಥರಿಗೆ ಸಲಹೆ ಮಾಡಿದರು.
1.40 ಕೋಟಿ ರೂ. ವೆಚ್ಚದ ಕನಕ ಭವನಗಳ ನಿರ್ಮಾಣ : ಅರಭಾವಿ ಕ್ಷೇತ್ರದಲ್ಲಿ ಈಗಾಗಲೇ ಕೌಜಲಗಿ, ರಾಜಾಪೂರ, ಬೆಟಗೇರಿ, ಯಾದವಾಡ, ವಡೇರಹಟ್ಟಿ ಗ್ರಾಮಗಳಲ್ಲಿ ತಲಾ 20 ಲಕ್ಷ ರೂ.ಗಳ ವೆಚ್ಚದಲ್ಲಿ ಕನಕ ಭವನಗಳನ್ನು ನಿರ್ಮಿಸಲಾಗಿದೆ. ಧರ್ಮಟ್ಟಿ, ಅರಭಾವಿ, ಸುಣಧೋಳಿ ಹಾಗೂ ಹೊನಕುಪ್ಪಿ ಗ್ರಾಮಗಳಲ್ಲಿ ತಲಾ 10 ಲಕ್ಷ ರೂ.ಗಳಂತೆ ಕನಕ ಭವನಗಳನ್ನು ಮಂಜೂರು ಮಾಡಿಸಲಾಗಿದೆ. ಕಾಮಗಾರಿಗಳು ಸಧ್ಯದಲ್ಲಿ ಆರಂಭವಾಗಲಿವೆ ಎಂದು ಹೇಳಿದರು. 1.40 ಕೋಟಿ ರೂ. ವೆಚ್ಚದಲ್ಲಿ ಕನಕ ಭವನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಭವನಗಳಿಂದ ಸಾರ್ವಜನಿಕ ಸಭೆ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುತ್ತವೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಸುಣಧೋಳಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಸಿದ್ಧಾಪೂರ, ತಾಪಂ ಸದಸ್ಯ ರಮೇಶ ಗಡಗಿ, ಎಪಿಎಂಸಿ ನಿರ್ದೇಶಕ ರೇವಣ್ಣಾ ಕನಕಿಕೋಡಿ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಸಂತೋಷ ಸೋನವಾಲ್ಕರ, ಮುಖಂಡರಾದ ಶಿವಲಿಂಗಪ್ಪ ಮದಭಾಂವಿ, ಗುರುರಾಜ ಪಾಟೀಲ, ಕಲ್ಲಪ್ಪ ಕಮತಿ, ಭೀಮಪ್ಪ ಹೂವನ್ನವರ, ಸುರೇಶ ಸಣ್ಣಕ್ಕಿ, ಬಸು ಹೆಗಡೆ, ಮುರಿಗೆಪ್ಪ ಪಾಟೀಲ, ರಾಜು ವಾಲಿ, ರಾಮಣ್ಣಾ ಬೆಣ್ಣಿ, ಮಹಾದೇವ ಹಾರೂಗೇರಿ, ಭೀಮಪ್ಪ ಕಮತಿ, ಬಸವರಾಜ ಪಾಟೀಲ, ಶಿದ್ಲಿಂಗ ಅಜ್ಜಪ್ಪನವರ, ಬಸಪ್ಪ ಮಾದರ, ಶಿದ್ಲಿಂಗ ದೇವನಗಳ, ಶ್ರೀಕಾಂತ ದೇವರಮನಿ, ಬಿಇಓ ಗಂಗಾಧರ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 3.31 ಲಕ್ಷ ರೂ. ವೆಚ್ಚದ ಎರಡು ಬಿಸಿಯೂಟ ಕೋಣೆಗಳನ್ನು ಉದ್ಘಾಟಿಸಿದರು. ಶಾಸಕರನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮೀತಿಯಿಂದ ಸತ್ಕರಿಸಲಾಯಿತು.

Related posts: