ಘಟಪ್ರಭಾ:ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ಎಸ್.ಎಚ್.ಸರ್ವನ್ನವರ
ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ : ಎಸ್.ಎಚ್.ಸರ್ವನ್ನವರ
ಘಟಪ್ರಭಾ ಮಾ 21 : ಸ್ಥಳೀಯ ಸಮತಾ ಸೈನಿಕ ದಳ (ಎಸ್.ಎಸ್.ಡಿ) ವತಿಯಿಂದ ಬರುವ ಎಪ್ರೀಲ್ 14 ರಂದು ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ಪೂರ್ವ ಬಾವಿ ಸಭೆಯನ್ನು ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಇವರ ನೇತೃತ್ವದಲ್ಲಿ ಮಂಗಳವಾರದಂದು ಮೃತ್ಯುಂಜಯ ವೃತ್ತದಲ್ಲಿರುವ ಸಮತಾ ಸೈನಿಕದಳದ ಕಾರ್ಯಾಲಯದಲ್ಲಿ ಕರೆಯಲಾಗಿತ್ತು.
ಸಭೆಯನ್ನುದೇಶಿಸಿ ಮುಖಂಡರಾದ ಎಸ್.ಎಚ್.ಸರ್ವನ್ನವರ ಮಾತನಾಡಿ, ದಲಿತರು ಶೈಕ್ಷಣಿಕವಾಗಿ ಮುಂದೆ ಬರುವ ಅಗತ್ಯವಿದೆ. ಶೋಷಿತ ಜನಾಂಗದ ಏಳ್ಗೆಗಾಗಿ ಸಂವಿದಾನದಲ್ಲಿ ಅವಕಾಶÀ ಕಲ್ಪಿಸಿ ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರಿಗೆ ಮೀಸಲಾತಿ ದೊರಕಿಸಿಕೊಟ್ಟವರು, ಹಾಗೂ ಬುಧ್ದ, ಬಸವಣ್ಣನವರ ಹಾದಿಯಲ್ಲಿ ಸಾಗಿದ ಅಂಬೇಡ್ಕರರು ಸಮಾಜದಲ್ಲಿ ಸಮಾನತೆ ತರಲು ನೀಡಿದ ಕೊಡುಗೆ ಅಪಾರವಾಗಿದೆ ಅವರ ಜಯಂತಿ ಆಚರಿಸುತ್ತಿರುವ ನಾವೆಲ್ಲರೂ ಭಾಗ್ಯವಂತರು. ಅಂತಹ ಮಹಾನ ವ್ಯಕ್ತ್ತಿಯ ಜಯಂತಿಯನ್ನು ನಾವು ಅರ್ಥ ಪೂರ್ಣವಾಗಿ ಆಚರಿಸಬೇಕೆಂದು ಹೇಳಿದರು.
ಸಭೆಯಲ್ಲಿ ಎಪ್ರೀಲ್ 14 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಸಂಜೆ ಅಂಬೇಡ್ಕರರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ವಾದ್ಯ ಮೇಳದೊಂದಿಗೆ ಮಲ್ಲಾಪೂರ ಪಿ.ಜಿ ಪಟ್ಣಣದ ಅಂಬೇಡ್ಕರ ಭವನದಿಂದ ಮೃತ್ಯುಂಜಯ ವೃತ್ತದ ವರೆಗೆ ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಸುಧೀರ ಜೋಡಟ್ಟಿ, ಸುರೇಶ ಪೂಜೇರಿ, ಪರಸರಾಮ ಗೋಕಾಕ, ಎಸ್.ಎಚ್.ಸರ್ವನ್ನವರ, ವೀರಭದ್ರ ಗಂಡವ್ವಗೋಳ, ರಮೇಶ ಗಂಡವ್ವಗೋಳ, ಬರಮಣ್ಣಾ ಗಾಡಿವಡ್ಡರ, ಅಮೃತ ಧರ್ಮಟ್ಟಿ, ಹನಮಂತ ಕರೆವ್ವಗೋಳ, ಕೃಷ್ಣಾ ಗಂಡವ್ವಗೋಳ, ರಾಜು ದೊಡಮನಿ, ಮುನ್ನಾ ಪಾಚ್ಛಾಪೂರೆ, ರಿಯಾಜ ಮುಲ್ಲಾ, ಜಬ್ಬಾರ ಅತ್ತಾರ, ಅಪ್ಪಾಸಾಬ ಮುಲ್ಲಾ, ಶಂಕರ ಹಂಚಿನಾಳ, ದಯಾನಂದ ಗುಡಾಜ, ಜಗದೀಶ ಕಟ್ಟಿಮನಿ, ಕೆಂಪಣ್ಣಾ ನಡವಿನಮನಿ, ಗಜಾನನ ಹಂಚಿನಮನಿ, ವಿಠ್ಠಲ ಗೂರಜಪ್ಪಗೋಳ, ನವೀನ ಗಂಡವ್ವಗೋಳ, ಉದಯ ಗಂಡವ್ವಗೋಳ, ಶಂಕರ ವಾಘ, ನಾಗೇಶ ಕಾಮೋಶಿ, ಜಿನ್ನಪ್ಪ ವಡ್ರಾಳೆ, ಪ್ರಭು ತಂಗೆವ್ವಗೋಳ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.