ಗೋಕಾಕ:ಮೂಡಲಗಿ ವಲಯದಲ್ಲಿ ವಿನೂತನ ಪ್ರಯೋಗ : ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಪುನರ್ ಮನನ ಕಾರ್ಯಕ್ರಮ
ಮೂಡಲಗಿ ವಲಯದಲ್ಲಿ ವಿನೂತನ ಪ್ರಯೋಗ : ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಪುನರ್ ಮನನ ಕಾರ್ಯಕ್ರಮ
* ಅಡಿವೇಶ ಮುಧೋಳ ಬೆಟಗೇರಿ
ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸ್ಥಳೀಯ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿರಾಮದ ದಿನಗಳಲ್ಲಿ ಆಯೋಜಿಸಿದ ವಿಷಯ ಪುನರ್ ಮನನ ಕಾರ್ಯಕ್ರಮ ಶನಿವಾರ ಮಾರ್ಚ್.24 ರಂದು ನಡೆಯಿತು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ 23 ರಿಂದ ಆರಂಭಗೂಂಡಿವೆ. ಈ ಪರೀಕ್ಷೆಯ ಹಿನ್ನಲೆಯಲ್ಲಿ ಪರೀಕ್ಷಾ ವಿರಾಮದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ವಿಷಯದ ಪರೀಕ್ಷೆಗಳಗೆ ಅಂತಿಮ ಕ್ಷಣದ ಸಿದ್ಧತೆಗಾಗಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಹಲವಾರು ಪ್ರಶ್ನೆ ಪತ್ರಿಕೆಗಳಗೆ ಉತ್ತರ ಬರೆಯುವ ವಿಧಾನ ಸೇರಿದಂತೆ ಆಯಾ ವಿಷಯದ ಶಿಕ್ಷಕರಿಂದ ಪುನರ್ ಮನನ ಮಾಡಲಾಗುತ್ತಿದೆ. ಇದೇ ಸೋಮವಾರ ಮಾ.26 ರಂದು ನಡೆಯಲಿರುವ ಗಣಿತ ವಿಷಯದ ಕುರಿತು ಶನಿವಾರ ಮಾ.24 ಮತ್ತು ರವಿವಾರ ಮಾ.25 ರಂದು ವಿಷಯ ಪುನರ್ ಮನನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ಥಳೀಯ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ತಿಳಿಸಿದರು.
ವಿನೂತನ ಹಲವು ಕಾರ್ಯಕ್ರಮ ಆಯೋಜನೆ: ಮೂಡಲಗಿ ಶೈಕ್ಷಣಿಕ ವಲಯದ ಎಲ್ಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ವಲಯ ವ್ಯಾಪ್ತಿಯ ಎಲ್ಲ ಪ್ರೌಢ ಶಾಲೆಗಳಲ್ಲಿ ಪರೀಕ್ಷಾ ವಿರಾಮದ ದಿನಗಳಲ್ಲಿ ಆಯೋಜಿಸುತ್ತಿರುವ ವಿನೂತನ ವಿಷಯ ಪುನರ್ ಮನನ ಕಾರ್ಯಕ್ರಮ, ಅಣುಕು ಪರೀಕ್ಷೆ, ಮೋಬೈಲ್ ಇನ್ ಕಾರ್ಯಕ್ರಮ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ-ಭೀತಿ ನಿವಾರಣೆ, ಪರೀಕ್ಷಾ ಸಿದ್ದತೆ, ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಅಂತಿಮ ಕ್ಷಣದಲ್ಲಿ ವಿದ್ಯಾರ್ಥಿಯ ಸಿದ್ಧತೆ ಸೇರಿದಂತೆ ಹಲವಾರು ಪ್ರಯೋಗಗಳನ್ನು ನಡೆಸುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ತಿಳಿಸಿದ್ದಾರೆ.
ಕಳೆದ ಮೂರು ಬಾರಿ ಮೂಡಲಗಿ ಶೈಕ್ಷಣಿಕ ವಲಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದೆ ಈ ಸಲ ಆಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಉತ್ತಮ ಫಲಿತಾಂಶ ಪಡಿಯುವ ಸಲವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಅವರು ಪ್ರಯತ್ನಿಸುತ್ತಿದ್ದಾರೆ. ಅವರೂಂದಿಗೆ ವಲಯದ ಪ್ರೌಢ ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು ಹಾಗೂ ನೂರಿತ ಸಂಪನ್ಮೂಲ ವ್ಯಕ್ತಿಗಳು ಕೈ ಜೋಡಿಸಿ ಹಗಲಿರುಳು ಕಾರ್ಯಹಿಸುತ್ತರುವುದು ವೀಶೆಷವಾಗಿದೆ.
“ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿರಾಮದ ದಿನಗಳಲ್ಲಿ ಅಂತಿಮ ಕ್ಷಣದ ಸಿದ್ಧತೆಗಾಗಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ”
ಎ.ಸಿ. ಗಂಗಾಧರ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಲಗಿ ಶೈಕ್ಷಣಿಕ ವಲಯ
“ವಿದ್ಯಾರ್ಥಿಗಳಿಗೆ ಇಂತಹ ವಿನೂತನ ಪ್ರಯೋಗ ಮಾಡುವದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳಿಗೆ ಚೈತ್ಯನ್ಯ ತುಂಬಿದಂತಾಗುತ್ತದೆ”
ರಮೇಶ ಅಳಗುಂಡಿ ಮುಖ್ಯಾಧ್ಯಾಪಕ ವಿ.ವಿ.ಡಿ ಸರಕಾರಿ ಪ್ರೌಢಶಾಲೆ
ಬೆಟಗೇರಿ.