RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ

ಗೋಕಾಕ:ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ 

ಗ್ರಾಮದ ಗ್ರಾಮಸ್ಥರ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪರವಾಗಿ ಅಂಚೆ ಕಛೇರಿ ನಿವೃತ್ತ ಮೇಲ್ವಿಚಾರಕ ಶಿವಾಜಿ ನೀಲಣ್ಣವರ ದಂಪತಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸುತ್ತಿರುವದು.

ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ

ಗೋಕಾಕ (ಬೆಟಗೇರಿ) ಮಾ 24 : ಗ್ರಾಮದ ಅಂಚೆ ಕಛೇರಿಯಲ್ಲಿ ಪೊಸ್ಟ್ ಮಾಸ್ಟರ್‍ರಾಗಿ ಮೂರು ದಶಕಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯವಾಗಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ಲಕ್ಷ್ಮೀ ದೇವಾಲಯದ ಸಭಾ ಭವನದಲ್ಲಿ ಶುಕ್ರವಾರ ಮಾ.23 ರಂದು ಶಿವಾಜಿ ನೀಲನ್ನವರ ಅಂಚೆ ಪಾಲಕ ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಆಯೋಜಿಸಿದ ಸೇವಾ ನಿವೃತ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಂಚೆ ಪಾಲಕ ಶಿವಾಜಿ ಅವರು ಅಂಚೆ ಇಲಾಖೆಯ ಕಾರ್ಯ ನಿರತ ಸೇವೆಯಲ್ಲಿ ಇದ್ದಾಗಲೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ಅವರು ಶ್ರಮಿಸಿದ ಕಾರ್ಯ ಅವಿಸ್ಮರಣೀಯವಾಗಿದೆ ಎಂದರು.
ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗೋಕಾಕ ವಿಭಾಗದ ಅಂಚೆ ಕಛೇರಿ ಮುಖ್ಯ ಮೇಲ್ವಿಚಾರಕ ಎಮ್.ಶಿವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಕಾಕ ಅಂಚೆ ಕಛೇರಿಯ ನಿರೀಕ್ಷಕ ರಮೇಶ ದುರ್ಗಾಯಿ, ಜೆ.ಆರ್.ಜೋಶಿ ವರು ಎಸ್.ಬಿ.ನೀಲಣ್ಣವರ ಅವರ ಸದ್ಗುಣ, ಒಡನಾಟ ಹಾಗೂ ಸೇವೆಯ ಕುರಿತು ಮಾತನಾಡಿದರು.
ಇಲ್ಲಿಯ ಗ್ರಾಮಸ್ಥರ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪರವಾಗಿ ಅಂಚೆ ಕಛೇರಿ ನಿವೃತ್ತ ಅಂಚೆ ಪಾಲಕ ಶಿವಾಜಿ ನೀಲಣ್ಣವರ ದಂಪತಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದ ಬಳಿಕ ಸನ್ಮಾನಿತ ದಂಪತಿಗಳು ಅತಿಥಿ ಮಹೊದಯರನ್ನು ಸತ್ಕರಿಸಿದರು. ನಿವೃತ್ತ ಪೊಸ್ಟ್ ಮಾಸ್ಟರ್ ಶಿವಾಜಿ ನೀಲಣ್ಣವರ ಸನ್ಮಾನ ಸ್ವೀಕರಿಸಿ ತಮ್ಮ 30 ವರ್ಷಗಳ ಸೇವಾನುಭವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಪಣದಿ, ವಿ.ಎಸ್.ಹಿರೇಮಠ, ಶಿವನಪ್ಪ ಮಾಳೇದ, ರಾಮಣ್ಣ ಬಳಿಗಾರ, ಈರಣ್ಣ ಸಿದ್ನಾಳ, ವೀರನಾಯ್ಕ ನಾಯ್ಕರ, ಸುಭಾಷ ಜಂಬಗಿ, ವೀರಸಂಗಪ್ಪ ದೇಯಣ್ಣವರ, ಎಮ್.ಐ.ನೀಲಣ್ಣವರ, ಶ್ರೀಶೈಲ್ ಗಾಣಗಿ, ಸುರೇಶ ಸಿದ್ನಾಳ, ಶಿವಲಿಂಗಪ್ಪ ಭಾಗೋಜಿ, ಗೌಡಪ್ಪ ಮೇಳೆಣ್ಣವರ, ರಫೀಕ ಮಿರ್ಜಾನಾಯ್ಕ, ಸಿ.ಪಿ.ನೀಲಣ್ಣವರ, ಮಲ್ಲಪ್ಪ ಕಂಬಿ ಸೇರಿದಂತೆ ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗೋಕಾಕ ಮತ್ತು ಬೆಟಗೇರಿ ಅಂಚೆ ಕಛೇರಿಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು, ಇತರರು ಇದ್ದರು.
ಬಸವರಾಜ ಪಣದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಬೆಳಗಲಿ ಕೊನೆಗೆ ವಂದಿಸಿದರು.

Related posts: