ಘಟಪ್ರಭಾ:ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ
ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ
ಘಟಪ್ರಭಾ ಮಾ 28 : ಇಲ್ಲಿನ ಸಿದ್ಧಾರೂಡ ಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಬುಧವಾರದಂದು ಜರುಗಿತು.
ಸಭೆಯನ್ನೇದ್ದೆಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಸುರೇಶ ಕಾಡದವರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ ಶಾ ಅವರು ದಿ.2 ರಂದು ಗೋಕಾಕ ನಗರಕ್ಕೆ ಆಗಮಿಸುತ್ತಿದ್ದು, ಅಂದು ನಡೆಯುವ ರೋಡ ಶೋಗೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು.
ಹಿರಿಯ ಕಾರ್ಯಕರ್ತರಾದ ಸುರೇಶ ಪಾಟೀಲ ಮಾತನಾಡಿ ಪಕ್ಷದಲ್ಲಿ ಹಿರಿಯ, ಹಾಗೂ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಕಾರಣ ಈ ಬಾರಿಯಾದರೂ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಬಿ ಪಾರ್ಮ ನೀಡಿ ಗೆಲುವಿಗೆ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಕೆ ಮೇಲೆ ಅಡಿವೆಪ್ಪ ಮರಲಿಂಗನವರ, ಎನ್.ಬಿ.ನಿರ್ವಾಣಿ, ಲಕ್ಷ್ಮಣ ತಪಶಿ, ಎಸ್.ಎಲ್.ಪಾಟೀಲ, ಗೌಡಪ್ಪ ನಿರ್ವಾಣಿ, ಬಸವರಾಜ ನಿರ್ವಾಣಿ, ರಾಜೇಂದ್ರ ಗೌಡಪ್ಪಗೋಳ, ಪ್ರಮೋದ ಜೋಶಿ, ಜಿ.ಎಸ್.ರಜಪೂತ, ಕಲ್ಲಪ್ಪ ಕಾಡದವರ, ಕೆಂಪಣ್ಣ ಕರೋಶಿ, ಸಂತೋಷ ಖೆಮಲಾಪುರೆ, ಮಹಾವೀರ ಇಂಗಳೆ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.