RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ

ಗೋಕಾಕ:ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ 

ನಗರದ ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ಇಲ್ಲಿಯ ವೀರಶೈವ ಲಿಂಗಾಯತ ಸದ್ಭಕ್ತ ಮಂಡಳಿ ಹಾಗೂ ವೀರಶೈವ ಜಂಗಮ ಅಭಿವೃದ್ಧಿ ಯುವ ವೇದಿಕೆ ಇವರು ಹಮ್ಮಿಕೊಂಡ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಢವಳೇಶ್ವರ ಹಿರೇಮಠದ ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸುತ್ತಿರುವುದು.

ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ : ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ

ಗೋಕಾಕ ಏ, 1 ;- ಗುರು ಪರಂಪರೆಯ ಮಠಗಳು ಮನೆ ಮನೆಗೆ ಧರ್ಮ ಪ್ರಸಾರಕ್ಕಾಗಿ ದುಡಿದಿವೆ. ನಿರಂಜನ ಪರಂಪರೆ ಮಠಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡಿವೆ. ಹೀಗೆ ಎರಡೂ ಪರಂಪರೆಯ ಮಠಗಳು ಸಮಾಜ ಸೇವೆ ಮಾಡುತ್ತಿವೆ. ಈ ಎರಡೂ ವೀರಶೈವ ಧರ್ಮದ ಎರಡು ಕಣ್ಣುಗಳು ಇದ್ದಂತೆ ಎಂದು ಢವಳೇಶ್ವರ ಹಿರೇಮಠದ ಶ್ರೀ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ರವಿವಾರದಂದು ನಗರದ ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ಇಲ್ಲಿಯ ವೀರಶೈವ ಲಿಂಗಾಯತ ಸದ್ಭಕ್ತ ಮಂಡಳಿ ಹಾಗೂ ವೀರಶೈವ ಜಂಗಮ ಅಭಿವೃದ್ಧಿ ಯುವ ವೇದಿಕೆ ಇವರು ಹಮ್ಮಿಕೊಂಡ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೇವ ಭಾಷೆ ಸಂಸ್ಕøತದಲ್ಲಿದ್ದ ಪಂಚಾಚಾರ್ಯರ ತತ್ವಗಳನ್ನೇ ಬಸವಾದಿ ಶರಣರು ವಚ£ಗಳ ಮೂಲಕ ಮನೆ ಮನೆಗೆ ತಲುಪಿಸಿದ್ದಾರೆ. ಇವು ಬದುಕುವ ದಾರಿಯನ್ನು ತೋರಿಸುತ್ತವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕುಂದರಗಿಯ ವಿಶ್ವರಾಧ್ಯ ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತ, ಸಿದ್ಧಾಂತ ಶಿಖಾಮಣಿ ಮನುಕುಲಕಕ್ಕೆ ಸನ್ಮಾರ್ಗವನ್ನು ತೋರುವ ದಾರ್ಶನಿಕ ಗ್ರಂಥವಾಗಿ ವಿಶ್ವದ 16 ಭಾಷೆಗಳಿಗೆ ಅನುವಾದಗೊಂಡಿದೆ ಎಂದು ಅದರ ಮಹತ್ವವನ್ನು ವಿವರಿಸಿದರು.
ಕಬ್ಬೂರಿನ ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಹಾನ್ ಪುರುಷರು ಮನುಕುಲದ ಒಳಿತಿಗಾಗಿ ಸಂದೇಶಗಳನ್ನು ನೀಡಿದ್ದಾರೆ. ಅವರನ್ನು ಒಂದೇ ಸಮುದಾಯಕ್ಕೆ ಸೀಂಇತಗೊಳಿಸದೇ ಅವರ ತತ್ವಗಳನ್ನು ಆಚರಣೆಗೆ ತಂದರೆ ಜಯಂತಿ ಆಚರಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಭಾಗೋಜಿ ಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಪಂಚಾಚಾರ್ಯರು ವೀರಶೈವ ಧರ್ಮದ ಸಂಸ್ಥಾಪಕರು, ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವೆಂದು ತಮ್ಮ ಮಕ್ಕಳಿಗೆ ತಿಳಿಸಿ ಅವರಲ್ಲಿ ಆದ್ಯಾತ್ಮ ಮನೋಭಾವ ಮೂಡಿಸಿ ವೀರಶೈವ ಧರ್ಮವನ್ನು ಬೆಳೆಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಸಂಜಯ ಹೊಸಮಠ, ಪ್ರಕಾಶ ಕಂಬಿ, ಜಿ.ಡಿ.ಹಿರೇಮಠ, ಶಿವಾನಂದ ಹಿರೇಮಠ, ಈರಣ್ಣಾ ಹಿರೇಮಠ, ಜಗದೀಶ ನಿರ್ವಾಣಿ, ಘಟವಾಳಿಮಠ, ಕುಮಾರಮಠ, ಸೇರಿದಂತೆ ಅನೇಕರು ಇದ್ದರು.
ಶ್ರೀ ಸಿದ್ಧಾಂತ ಶಿಖಾಮಣಿ, ಜ್ಞಾನಾನುಭವ ಸತ್ಸಂಗ ಸಮೀತಿ ಮಹಿಳಾ ವಿಭಾಗದ ಸಾಧಕಿಯರು ಸಿದ್ಧಾಂತ ಶಿಖಾಮಣಿಯ ಪಾರಾಯಣ ನಡೆಸಿಕೊಟ್ಟರು.
ಮಹಾಂತಯ್ಯ ಹಿರೇಮಠ ಸ್ವಾಗತಿಸಿದರು. ಎಸ್.ಕೆ.ಮಠದ ನಿರೂಪಿಸಿದರು. ಸಂಗಮೇಶ ಗುಡದೂರ ಕಲ್ಮಠ ವಂದಿಸಿದರು.

Related posts: