RNI NO. KARKAN/2006/27779|Sunday, September 8, 2024
You are here: Home » breaking news » ಮೂಡಲಗಿ:ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ

ಮೂಡಲಗಿ:ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ 

ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು: ಯಲ್ಲಾಲಿಂಗ

ಮೂಡಲಗಿ ಮಾ ಏ 1 : ಇದೇ ಮೇ 12 ರಂದು ಜರುಗಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಅರ್ಹ ಮತದಾರರು ತಪ್ಪದೆ ತಮ್ಮ ಹಕ್ಕನ್ನು ಚಲಾಯಿಸಬೇಕು. ಸಂವಿದಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳಿಗೆ ಆದ್ಯತೆ ನೀಡಿರುತ್ತಾರೆ ಅದರಂತೆ ಮತದಾನವು ನಮ್ಮ ಹಕ್ಕು ಹಾಗೂ ಕರ್ತವ್ಯವಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ತಾಲೂಕಾ ಸಂಚಾಲಕ ಯಲ್ಲಾಲಿಂಗ ವಾಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರು ರವಿವಾರದಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ನಗರ, ಪಟ್ಟಣ ಹಳ್ಳಿಗಳಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಜ್ಞಾವಂತ ಮತದಾರರು ತಮ್ಮ ಅಮೂಲ್ಯವಾದ ಹಕ್ಕನ್ನು ಚಲಾಯಿಸಿ ಪ್ರಬುದ್ಧ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಕೈಜೊಡಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಮ್ಮ ಹಾಗೂ ಮುಂದಿನ ಯುವ ಪೀಳಿಗೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಸುಭದ್ರ ಜೀವನ ನಡೆಸಲು ಸಹಾಯಕವಾಗುವ ಕಾರ್ಯಗಳನ್ನು ಮಾಡುವವರಿಗೆ ತಮ್ಮ ಮತದಾನ ನೀಡುವ ಮೂಲಕ ಜಾಗೃತರಾಗಬೇಕೆಂದು ಹೇಳಿದರು.
ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾನದ ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿ.ಎಲ್.ಒ ರವರಿಂದ ಶಾಲಾ, ಕಾಲೇಜು, ಜನಸಂದಣಿ ಪ್ರದೇಶ ಹಾಗೂ ಪ್ರತಿಯೊಬ್ಬ ಮತದಾರನಿಗೂ ಮತಚಲಾಯಿಸುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಅಗತ್ಯ ಕ್ರಮಕೈಗೋಳ್ಳ ಬೇಕೆಂದು ಆಗ್ರಹಿಸದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಶ್ರೀಕಾಂತ ಭಜಂತ್ರಿ, ಅರುಣ ನುಚ್ಚುಂಡಿ, ಸಿದ್ದಣ್ಣ ದುರದುಂಡಿ, ಈರಪ್ಪ ಖಾನಟ್ಟಿ, ರಮೇಶ ಮೇತ್ರಿ, ಪ್ರಶಾಂತ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.

Related posts: