ಗೋಕಾಕ:ಶೀಘ್ರದಲ್ಲೇ ಸಹೋದರ ಸತೀಶರನ್ನು ಬೇಟ್ಟಿ ಮಾಡಲಾಗುವುದು : ಸಚಿವ ರಮೇಶ
ಶೀಘ್ರದಲ್ಲೇ ಸಹೋದರ ಸತೀಶರನ್ನು ಬೇಟ್ಟಿ ಮಾಡಲಾಗುವುದು : ಸಚಿವ ರಮೇಶ
ಗೋಕಾಕ ಏ 4 : ಸಹೋದರ ಸತೀಶ ಜಾರಕಿಹೊಳಿ ಅವರೊಂದಿಗೆ ಯಾವುದೆ ಭಿನ್ನಾಭಿಪ್ರಾಯ ವಿಲ್ಲ ಶೀಘ್ರದಲ್ಲೇ ಸತೀಶ ಜಾರಕಿಹೊಳಿ ಅವರನ್ನು ಬೇಟ್ಟಿಯಾಗಿ ಜಿಲ್ಲೆಯಲ್ಲಿ ಸೂಮಾರು 12 ರಿಂದ 14 ಕ್ಷೇತ್ರದಲ್ಲಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಅವರು ನಗರದ ಸಚಿವರ ಕಾರ್ಯಾಲಯದ ಎದುರು ಬುಧವಾರದಂದು ಜರುಗಿದ ಗೋಕಾಕ ತಾಲೂಕಿನ ಗೋಕಾಕ ವಿಧಾನಸಭಾ ಮತಕ್ಷೇತ್ರದ 2018ನೇ ಸಾಲಿನ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು .
ಸಹೋದರ ಶಾಸಕ ಸತೀಶ ಜೋತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲ ಒಗ್ಗಟ್ಟಾಗಿಯೇ ಮುಂಬರುವ ಚುನಾವಣೆ ಎದುರಿಸುತ್ತೇವೆ ಈಗಾಗಲೇ ಸತೀಶ ಜೋತೆ ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಮತ್ತು ಸಿದ್ದಲಿಂಗ ದಳವಾಯಿ ಮಾತನಾಡಿದ್ದಾರೆ ಶೀಘ್ರದಲ್ಲೇ ಅವರೊಂದಿಗೆ ಚರ್ಚಿಸಿ ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯ ಎದುರಿಸಲು ತಯಾರಿ ಮಾಡಲಾಗುವುದು ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ಯಾರೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರು ಪರವಾಗಿಲ್ಲ ಆಯಾ ಅಭ್ಯರ್ಥಿಗಳನ್ನು ಗೆಲಿಸುವುದು ಒಂದೇ ನಮ್ಮ ಗುರಿಯಾಗಿದ್ದು ಈ ಭಾರಿ ಸೂಮಾರು 12 ರಿಂದ 14 ಕ್ಷೇತ್ರಗಳಲ್ಲಿ ಕಾಂಗ್ರೆಸಿನ ಅಭ್ಯರ್ಥಿಗಳು ಗೆಲುವುದು ಗ್ಯಾರಂಟಿ ಎಂದು ಸಚಿವ ರಮೇಶ ಭವಿಷ್ಯ ನುಡಿದರು