ಗೋಕಾಕ:ಕಾಂಗ್ರೇಸ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಅಶೋಕ ಪೂಜಾರಿ ಆರೋಪ
ಕಾಂಗ್ರೇಸ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಅಶೋಕ ಪೂಜಾರಿ ಆರೋಪ
ಗೋಕಾಕ ಎ 4: ಇಂದು ಗೋಕಾಕ ನಗರದಲ್ಲಿ ಸಚಿವರ ಮನೆಯ ಮುಂದೆ ಜರುಗಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಸಂದರ್ಭದಲ್ಲಿ ಖುಲ್ಲಂಖುಲ್ಲಾ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ಮೂಲಕ ಕಾಂಗ್ರೇಸ್ ಪಕ್ಷ ಚುನಾವಣಾ ಆಯೋಗಕ್ಕೇ ಸವಾಲು ಎಸೆದಿದೆ ಎಂದು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಸಚಿವರ ಮನೆಯ ಪಕ್ಕದಲ್ಲಿಯೇ ಸುಮಾರು 5000 ಮೇಲ್ಪಟ್ಟು ಜನರಿಗೆ ಅಡಿಗೆ ಮಾಡಿ ಬಡಿಸುವ ವ್ಯವಸ್ಥೆ ಹಾಗೂ ಸುಮಾರು 300 ಕ್ಕಿಂತಲೂ ಹೆಚ್ಚು ವಾಹನಗಳಲ್ಲಿ ಪರವಾನಿಗೆ ಪಡೆಯದೇ ಜನರನ್ನು ಪಕ್ಷದ ಧ್ವಜ ಕಟ್ಟಿದ ಗಾಡಿಗಳಲ್ಲಿ ಕರೆದುಕೊಂಡು ಬರುವ ಮೂಲಕ ಸಾರಾಸಗಟಾಗಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದು, ಈ ವಿಷಯವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಅವರು ಈ ಕುರಿತು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಚುನಾವಣಾ ಆಯೋಗದ ಆಯುಕ್ತರುಗಳು ಮತ್ತು ಅಧಿಕಾರಿಗಳನ್ನು ಸೂಕ್ತ ಕ್ರಮಕ್ಕೆ ಕೋರಲಾಗಿದೆ ಎಂದು ಹೇಳಿದ್ದಾರೆ.