ಬೆಳಗಾವಿ:ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ
ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ
ಬೆಳಗಾವಿ ಮೇ 24 : ಬೆಳಗಾವಿಯಲ್ಲಿ ನಾಡವಿರೋಧಿ ಎಂಇಎಸ್ ನಾಯಕರು ಮತ್ತೆ ಉದ್ದಟತನ ಮುಂದುವರೆಸಿದ್ದಾರೆ ಇಲ್ಲಿಯ ತಾಲೂಕಾ ಪಂಚಾಯತ್ ಸಭೆಯಲ್ಲಿ ಜೈ ಮಹಾರಾಷ್ಟ್ರ ಎನ್ನುವ ಘೋಷಣೆ ಕೂಗಿ ನಾಡದ್ರೋಹ ಎಸಗಿದ್ದಾರೆ
ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎಂಇಎಸ್ ಸದಸ್ಯರು ಮತ್ತೆ ಹಳೆ ರಾಗ ತೆಗೆದಿದ್ದಾರೆ.
ಮರಾಠಿಯಲ್ಲೇ ದಾಖಲೆ ನೀಡುವಂತೆ ಕೇಳಿದ ಎಂಇಎಸ್ ಸದಸ್ಯರು, ತಾಲೂಕು ಪಂಚಾಯತ್ ಸಭೆಯಲ್ಲಿ ಜೈ ಮಹಾರಾಷ್ಟ್ರ ಎನ್ನುವುದು ತಪ್ಪೆ ಎಂದ ಪ್ರಶ್ನಿಸುವ ಮೂಲಕ ಸರಕಾರಕ್ಕೆ ಸವಾಲು ಹಾಕಿದ್ದಾರೆ