ಗೋಕಾಕ:ಬಾಬು ಜಗಜೀವನರಾಮ್ ಹಸಿರು ಕ್ರಾಂತಿ ಹರಿಕಾರರಾರು : ವಿ.ಬಿ.ಕನಿಲದಾರ
ಬಾಬು ಜಗಜೀವನರಾಮ್ ಹಸಿರು ಕ್ರಾಂತಿ ಹರಿಕಾರರಾರು : ವಿ.ಬಿ.ಕನಿಲದಾರ
ಗೋಕಾಕ ಏ, 5 ;- ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದರೊಂದಿಗೆ ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಿ ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿ ಹರಿಕಾರರಾಗಿದ್ದರೆಂದು ಇಲ್ಲಿಯ ಉಪನ್ಯಾಸಕ ವಿ.ಬಿ.ಕನಿಲದಾರ ಹೇಳಿದರು.
ಗುರುವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ ಅವರ 111 ನೇ ಜಯಂತಿ ಉತ್ಸವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.
ಡಾ. ಬಾಬು ಜಗಜೀವನರಾಮ ಅವರು ಡಾ. ಅಂಬೇಡ್ಕರ ಅವರ ಕನಸನ್ನು ನನಸಾಗಿಸಲು ಅವರ ಸಂವಿಧಾನದಲ್ಲಿ ಕಲ್ಪಿಸಿದ ಸೌಲಭ್ಯಗಳನ್ನು ಜನತೆಗೆ ಕಲ್ಪಿಸಲು ಶ್ರಮಿಸಿದ್ದರು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ಉಪಪ್ರಧಾನಿಯಾಗಿ ಕ್ರಾಂತಿಕಾರಕ ಯೋಜನೆಗಳೊಂದಿಗೆ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ ಜಿ.ಎಸ್.ಮಳಗಿ, ಗ್ರೇಡ್ 2 ತಹಶೀಲ್ದಾರ ಎಸ್.ಕೆ.ಕುಲಕರ್ಣಿ, ತಾ.ಪಂ. ಕಾರ್ಯ ನಿರ್ವಾಹಕಾಧಿಕಾರಿ ಎಫ್.ಜಿ.ಚಿನ್ನನ್ನವರ, ಸಮಾಜ ಕಲ್ಯಾಣಾಧಿಕಾರಿ ಎಸ್.ವಿ.ಕಲ್ಲಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕುಲಕರ್ಣಿ, ಪೌರಾಯುಕ್ತ ವಾಸನ್ ಆರ್. ಮುಖ್ಯಾಧಿಕಾರಿ ಎಮ್.ಎಚ್.ಅತ್ತಾರ, ದೈಹಿಕ ಶಿಕ್ಷಣಾಧಿಕಾರಿ ವಿಜಯಕುಮಾರ ಸೂಲೇಗಾಂವಿ, ದಲಿತ ಮುಖಂಡರುಗಳಾದ ಸತ್ಯಜೀತ ಕರವಾಡೆ, ಲಕ್ಷ್ಮಣ ತೆಳಗಡೆ, ಶಿವಾನಂದ ಹೊಸಮನಿ, ಅಜೀತ ಹರಿಜನ, ಬಾಳೇಶ ಸಂತವ್ವಗೋಳ ಸೇರಿದಂತೆ ಅನೇಕರು ಇದ್ದರು.