RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ

ಗೋಕಾಕ:ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ 

ಸಮೀಪದ ಕೊಣ್ಣೂರದಲ್ಲಿ ತಾಲೂಕು ಕಾನೂನು ಸಾಕ್ಷರತಾ ರಥ ಅಭಿಯಾನದ ಕಾನೂನು ಅರಿವು ನೆರವು ಶಿಬಿರವನ್ನು ನ್ಯಾಯಾಧೀಶ ಸತೀಶ ಬಾಳಿ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು

ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ

ಗೋಕಾಕ ಎ 6 : ಪ್ರತಿ ವ್ಯಕ್ತಿಯು ಹುಟ್ಟಿನಿಂದ ಜನನ ಪ್ರಮಾಣ ಪತ್ರ ಪಡೆಯುವುದರ ಮೂಲಕ ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಗೋಕಾಕದ 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸತೀಶ ಬಾಳಿ ಹೇಳೀದರು.
ಗುರುವಾರದಂದು ಸಮೀಪದ ಕೊಣ್ಣೂರು ಪುರಸಭೆಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮೀತಿ ಗೋಕಾಕ, ನ್ಯಾಯವಾದಿಗಳ ಸಂಘ ಗೋಕಾಕ, ಮತ್ತು ತಾಲೂಕಾ ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಗೋಕಾಕ ತಾಲೂಕು ಕಾನೂನು ಸಾಕ್ಷರತಾ ರಥ ಅಭಿಯಾನದ ಕಾನೂನು ಅರಿವು ನೆರವು ಶಿಬಿರವನ್ನು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ವರಿಗೂ ನ್ಯಾಯ ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕೊಣ್ಣೂರ ಪುರಸಭೆ ಮುಖ್ಯಾಧಿಕಾರಿ ಎಸ್.ಎಂ.ಹಿರೇಮಠ ವಹಿಸಿ ಮಾತನಾಡಿ ಜನಸಾಮಾನ್ಯರು ಕಾನೂನು ಅರಿವು ಪಡೆಯುವುದರ ಮೂಲಕ ತಮ್ಮ ದೈನಂದಿನ ಜೀವನದಲ್ಲಿ ಕಾನೂನುಗಳನ್ನು ಪಾಲಿಸುವುದರ ಮೂಲಕ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು. ನಂತರ ವಿಧಾನ ಸಭೆ ಚುನಾವಣೆ 2018 ರ ಮತದಾರರ ಜಾಗೃತಿ ಕುರಿತು ಪ್ರತಿ ಮತದಾರರು ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ ಶೇ 100 ರಷ್ಟು ಮತ್ತು ನಿರ್ಭಯವಾಗಿ ಮತದಾನ ಮಾಡಬೇಕು. ಮತದಾನ ಮಾಡಿದವನೇ ಮಹಾ ಶೂರ ಎಂದು ತಿಳಿಸಿದರಲ್ಲದೇ ಚುನಾವಣೆ ಆಯೋಗದ ನಿರ್ದೇಶನದಂತೆ ಎಪ್ರೀಲ್-8 ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ಮತದಾರರ “ಮಿಂಚಿನ ನೋಂದಣಿ” ಅಭಿಯಾನವನ್ನು ಆಯೋಜಿಸಿರುತ್ತಾರೆ 18 ವಯಸ್ಸು ಮೇಲ್ಪಟ್ಟ ಮತದಾರರು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಕೊಳ್ಳುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ಎಮ್.ಬನ್ನೂರ, ಎಂ.ಡಿ.ಪಲ್ಲೇದ ಎಮ್.ಎ.ಹುದಲಿ, ಎಸ್.ಕೆ.ಕಂಗಳವರ, ಕೆ.ಎ.ಕಳಸನ್ನವರ, ಎಸ್.ಸಿ.ಪಾಟೀಲ, ಆರ್.ಬಿ.ಈರನಟ್ಟಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು ಇದ್ದರು.
ಸಮುದಾಯ ಸಂಘಟಕ ಎಮ್.ಎ.ಪೆದಣ್ಣವರ ಸ್ವಾಗತಿಸಿ,ನಿರೂಪಿಸಿದರು. ಸಮುದಾಯ ಸಂಘಟನಾಧಿಕಾರಿ ಎಸ್.ಜೆ.ಕುರಣೆ ವಂದಿಸಿದರು.

Related posts: