ಗೋಕಾಕ:ಇಂದಿನಿಂದ ಐಪಿಎಲ್ ಹೊಡಿ ಹನ್ನೊಂದು ಆವೃತ್ತಿ : ಗೋಕಾಕದಲ್ಲಿ ಶುರುವಾಗಲಿದೆ ಬೆಟ್ಟಿಂಗ್ ‘ಮನಿ’ಯಾಟ
ಇಂದಿನಿಂದ ಐಪಿಎಲ್ ಹೊಡಿ ಹನ್ನೊಂದು ಆವೃತ್ತಿ : ಗೋಕಾಕದಲ್ಲಿ ಶುರುವಾಗಲಿದೆ ಬೆಟ್ಟಿಂಗ್ ‘ಮನಿ’ಯಾಟ
ವಿಶೇಷ ವರದಿ :
ಗೋಕಾಕ ಎ 7: ಇಂದಿನಿಂದ ಬಹು ನಿರೀಕ್ಷಿತ ಐಪಿಎಲ್ ಟಿ- 20 ಹನ್ನೊಂದನೇಯ ಆವೃತ್ತಿ ಶುರುವಾಗಲಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಬಹು ಮುಖ್ಯವಾಗಿ ಗೋಕಾಕದಲ್ಲಿ ಐಪಿಎಲ್ ಟಿ- 20 ಯ ರಂಗಿನ ಗುಂಗು ಜೋರಾಗಲಿದೆ .
ಇಂದಿನಿಂದ ಈ ಕ್ರಿಕೆಟ್ ಮಿನಿಯಾಟ ಗೋಕಾಕ ಸೇರಿದಂತೆ ಜಿಲ್ಲೆಯಾದ್ಯಂತ ಮನಿಯಾಟವಾಗಿ ಪರಿಣಮಿಸಲ್ಲಿದೆ . ಏ 7 ರಿಂದ ಮೇ 27 ವರೆಗೆ ಸೂಮಾರು 51 ದಿನಗಳಕಾಲ ಜರಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತೆ ಸುದ್ದು ಮಾಡಲು ರೇಡಿಯಾಗಿದೆ . ಕಳೆದ ಒಂದು ದಶಕದಿಂದ ಭಾರತೀಯ ಕ್ರಿಕೆಟ್ ರಂಗಕ್ಕೆ ಹಣದ ಹೊಳೆಯನ್ನೇ ಹರಿಸಿದ ಐಪಿಎಲ್ ಟೂರ್ನಿಯ 11 ನೇ ಆವೃತಿಗೆ ಇಂದು ಚಾಲನೆ ಸಿಗುವ ಬೆನ್ನಲ್ಲೇ ಗೋಕಾಕದಲ್ಲಿ ಹಣ ಹೊಳೆಯನ್ನೇ ಹರಿಸಲು ಬುಕ್ಕಿಗಳ ಸಿದ್ದರಾಗಿದ್ದಾರೆ .
ಐಪಿಎಲ್ ಟಿ20 ಆಟಕ್ಕೆ ಗೋಕಾಕದಲ್ಲಿ ಪ್ರತಿ ದಿನ ಏನಿಲ್ಲವೆಂದರೂ ಎರೆಡಮೂರು ಕೋಟಿಗೂ ಹೆಚ್ಚು ಬೇಟ್ಟಿಂಗ ನಡೆಯಲಿದೆ ಎಂದು ಹೇಳಲಾಗುತ್ತಿದೆ .
ಹೇಳಿ, ಕೇಳಿ ಈಗ ಚುನಾವಣೆ ಕಾವು ಜೋರಾಗಿರುವಾಗ ನಮಗೆ ಯಾರ ಭಯವಿಲ್ಲಾ ಎಂದು ತಿಳಿದಿರುವ ಗೋಕಾಕ ನಗರದ ಬುಕ್ಕಿಗಳು ಭಾರಿ ಪ್ರಮಾಣದ ಬೆಟ್ಟಿಂಗ್ ನಡೆಸಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ .
ಪೊಲೀಸರ ಸಹಕಾರ : ಕಳೆದ ಸೂಮಾರು ಆರೇಳು ವರ್ಷಗಳ ಹಿಂದೆ ಅಂದಿನ ಎಸ್.ಪಿ ಸಂದೀಪ್ ಪಾಟೀಲ ಪ್ರಯತ್ನದ ಫಲದಿಂದ ಗೋಕಾಕದಲ್ಲಿ ನಡೆಯುವ ಭಾರಿ ಪ್ರಮಾಣದ ಬೆಟ್ಟಿಂಗ್ ಮಾಫಿಯಾಗೆ ಕಡಿವಾಣ ಹಾಕ್ಕಿದ್ದನ್ನು ಬಿಟ್ಟರೆ ಇಲ್ಲಿಯ ವರೆಗೆ ಪ್ರತಿ ವರ್ಷ ಭಾರಿ ಪ್ರಮಾಣದಲ್ಲಿ ನಡೆಯುವ ಬೆಟ್ಟಿಂಗ ದಂಧೆಯನ್ನು ಯಾವ ಅಧಿಕಾರಿಯಿಂದ ತಡೆಯಲು ಸಾಧ್ಯವಾಗಿಲ್ಲ ಎಂಬುವುದು ಗಮನಾರ್ಹ . ಕಳೆದ ವರ್ಷ ಈ ದಂಧೆಯಲ್ಲಿ ತೊಡಗಿದ ಕೆಲವರನ್ನು ಹಿಡಿದಿದ್ದ ಹಿಂದಿನ ಡಿಎಸಪಿ ಅವರು ಅವರಿಂದ ಭಾರಿ ಮೊತ್ತ ಪಡೆದು ಪ್ರಕರಣ ಮುಚ್ಚಿ ಹಾಕಿದರು ಎಂಬ ಚರ್ಚೆಗಳು ಆ ದಿನಗಳಲ್ಲಿ ದಟ್ಟವಾಗಿ ಹಬ್ಬಿದ್ದವು . ಇದರಿಂದ ಮತ್ತಷ್ಟು ಪ್ರಭಲವಾಗಿರುವ ಬುಕ್ಕಿಗಳು ಪೊಲೀಸರನ್ನೇ ಡಿಲ್ ಮಾಡುವ ಹಂತಕ್ಕೆ ತಲುಪಿ ಗೋಕಾಕಿನ ಮುಗ್ದ ಯುವಕರ ಭವಿಷ್ಯ ಹದಗೆಡಿಸುವ ಮಟ್ಟಕ್ಕೆ ತಲುಪಿದ್ದಾರೆ . ಈಗಾಗಲೇ ಕೆಲ ಪೊಲೀಸ ಪೇದೆಗಳು ಬುಕ್ಕಿಗಳ ಸಂರ್ಪಕದಲ್ಲಿದು ಬುಕ್ಕಿಗಳಿಗೆ ಸಾಥ ನೀಡುತ್ತಿದ್ದಾರೆ ಎಂಬ ವಂದತಿಗಳು ದಟ್ಟವಾಗಿ ಹರದಾಡುತ್ತಿವೆ . ಒಟ್ಟಾರೆಯಾಗಿ ಇಷ್ಟು ಬೃಹತ್ ಪ್ರಮಾಣದ ಬೆಟ್ಟಿಂಗ್ ಆಟ ಗೋಕಾಕ ನಗರದಲ್ಲಿ ನಡೆದರೂ ಸಹ ಪೊಲೀಸರಿಂದ ಇದನ್ನು ಮಟ್ಟಹಾಕಲು ಸಾಧ್ಯವಾಗದಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿರುವುದನಂತೂ ಅಲ್ಲಗಳೆಯುವಂತಿಲ್ಲಾ .
ಗೋವಾಕ್ಕೆ ಹಾರಿದ ಗೋಕಾಕ ಬುಕ್ಕಿಗಳು : ಇಂದಿನಿಂದ ಶುರುವಾಗಲಿರುವ ಐಪಿಎಲ್ ಟಿ20 ಆಟದಲ್ಲಿ ಭಾರಿ ಪ್ರಮಾಣದ ಬೆಟ್ಟಿಂಗ್ ನಡೆಸುವ ಬುಕ್ಕಿಗಳಲ್ಲಿ ಕೆಲವರು ನೆರೆ ರಾಜ್ಯ ಗೋವಾಕ್ಕೆ ಸೀಪ್ಟ ಆಗಿ ಇಲ್ಲಿಂದಲೇ ಭಾರಿ ಪ್ರಮಾಣದ ಬೆಟ್ಟಿಂಗ್ ನಡೆಸಲ್ಲಿದಾರೆ. ಗೋಕಾಕದಲ್ಲಿ ಹಣ ವಸೂಲಿ ಮಾಡುವ ಸಲುವಾಗಿ ಕೆಲವರನ್ನು ಬಿಟ್ಟಿದು ಅವರು ಆಟದಲ್ಲಿ ಭಾಗಿಯಾಗುವ ಜನರಿಗೆ ಹಣ ತಲುಪಿಸುವ ಕಾರ್ಯ ಮಾಡಲ್ಲಿದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಶೀಘ್ರ ಎಸ.ಪಿ .ಸುಧೀರ್ ಕುಮಾರ ರೆಡ್ಡಿ ಬೇಟ್ಟಿ :
ಕಳೆದ ಹಲವು ವರ್ಷಗಳಿಂದ ಗೋಕಾಕದಲ್ಲಿ ಅವ್ಯಾಹತವಾಗಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ . ಇದು ಯುವಕರ , ವಿದ್ಯಾರ್ಥಿಗಳ ಭವಿಷ್ಯ ಮೇಲೆ ವಿಪರಿತ ಪರಿಣಾಮ ಬೀರುತ್ತಿದೆ . ಎಸ್.ಪಿ ಸಂದೀಪ ಪಾಟೀಲ ಇದ್ದಾಗ ಇದರ ಬಗ್ಗೆ ಮನವಿ ಕೊಟ್ಟು ಈ ದಂಧೆಯನು ಕೊಂಚ ಮಟ್ಟಕ್ಕೆ ಬ್ರೇಕ್ ಹಾಕಲಾಗಿತ್ತು ಆದರೆ ಇತ್ತಿಚೆಗೆ ಈ ಬೆಟ್ಟಿಂಗದಂಧೆ ದಟ್ಟಗೊಂಡಿದು ಐಪಿಎಲ್ ನಲ್ಲಿ ಗೋಕಾಕದಲ್ಲಿ ಜೋರಾಗಿ ನಡೆಯುವ ಲಕ್ಷಣಗಳು ಇದು , ಬರುವ ಒಂದು ವಾರದೋಳಗೆ ಈ ಕುರಿತು ಸಂಪೂರ್ಣ ಮಾಹಿತಿ ರೂಪದ ಮನವಿಯನ್ನು ನೂತನ ಎಸ್.ಪಿ. ಸುಧೀರ್ ಕುಮಾರ್ ರೆಡ್ಡಿ ಅವರಿಗೆ ನೀಡಲಾಗುವುದು .
ಬಸವರಾಜ ಖಾನಪ್ಪನವರ ಅಧ್ಯಕ್ಷರು ಕರವೇ ಗೋಕಾಕ