RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು : ಸುಭಾಸ ಪಾಟೀಲ

ಮೂಡಲಗಿ:ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು : ಸುಭಾಸ ಪಾಟೀಲ 

ಮೂಡಲಗಿ ಪಟ್ಟಣದ ಹೊರವಲಯದಲ್ಲಿ ಸೋನವಾಲ್ಕರ ತೋಟದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಭಾಸ ಪಾಟೀಲ ಮಾತನಾಡಿದರು.

ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು : ಸುಭಾಸ ಪಾಟೀಲ

ಮೂಡಲಗಿ ಎ 7 : ಮೂಡಲಗಿ ಪುರಸಭೆ ವ್ಯಾಪ್ತಿಯ 23 ವಾರ್ಡಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದಲ್ಲಿಯೇ ಅತ್ಯಧಿಕ ಮತಗಳ ಅಂತರದ ಗೆಲುವಿಗೆ ನಾವೆಲ್ಲರೂ ಪಣ ತೊಟ್ಟು ಕೆಲಸ ಮಾಡಬೇಕಾಗಿದೆ ಎಂದು ಅರಭಾಂವಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ ಹೇಳಿದರು.
ಅವರು ಪಟ್ಟಣದ ಹೊರವಲಯದಲ್ಲಿರುವ ಬಿ.ವಿ ಸೋನವಾಲ್ಕರ ತೋಟದಲ್ಲಿ ಶುಕ್ರವಾರ ಜರುಗಿದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಾಗೂ ಮೂಡಲಗಿ ಪುರಸಭೆ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನೋಪಯೋಗಿ ಕಾರ್ಯಗಳು, ಹಿಂದಿನ ರಾಜ್ಯ ಸರಕಾರ ಹಾಗೂ ಈಗಿನ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಮೂಡಲಗಿ ಪಟ್ಟಣದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಜನಪರ ಯೋಜನೆಗಳನ್ನು ತಂದಿದ್ದಾರೆ. ಈ ಮೂಲಕ ಕ್ಷೇತ್ರದ ಸರ್ವತೋಮುಖ ಏಳ್ಗೆಗಾಗಿ ಕಳೆದ 14 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಮೂಡಲಗಿ ಪುರಸಭೆ, ಅರಭಾಂವಿ-ಕಳ್ಳೋಳ್ಳಿ-ನಾಗನೂರ ಪಟ್ಟಣ ಪಂಚಾಯತ ಹಾಗೂ 34 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿಯ ಕಮಲ ಅರಳಲು ಬಾಲಚಂದ್ರ ಜಾರಕಿಹೊಳಿಯವರ ಸಂಘಟನಾ ಚಾತುರ್ಯ ಹಾಗೂ ಪಕ್ಷ ನಿಷ್ಠೆ ಕಾರಣವಾಗಿದೆ. ಇಂತಹ ಜನಪ್ರೀಯ ಶಾಸಕರನ್ನು ಮೇ 12 ರಂದು ಜರುಗುವ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಅಂತರದ ಗೆಲುವು ನೀಡುವಂತೆ ಕೋರಿಕೊಂಡರು.
ಚುನಾವಣೆ ಸಮಯದಲ್ಲಿ ಕೆಲ ವಿರೋಧಿಗಳು ಜನರಿಗೆ ಪೋಳ್ಳು ಆಶ್ವಾಸನೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕೇವಲ ಭಾಷಣಗಳಿಗೆ ಮಾತ್ರ ಅಂತಹವರು ಮೀಸಲಿದ್ದಾರೆ ಅವರಿಂದ ಕ್ಷೇತ್ರದ ಅಭಿವೃದ್ಧಿ ಕನಸಿನ ಮಾತು ಅಭಿವೃದ್ಧಿ ವಿರೋಧಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯದ ಬಾಲಚಂದ್ರ ಜಾರಕಿಹೊಳಿ ಅವರಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ರೈತ ಮುಖಂಡ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯತಂತ್ರ ಹೆಣೆಯಲಾಗಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಕಮಲವ್ವ ಹಳಬರ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡರಾದ ವೀರಣ್ಣಾ ಹೊಸೂರ, ನಿಂಗಪ್ಪ ಫಿರೋಜಿ, ಡಿ.ಬಿ ಪಾಟೀಲ, ರಾಮಣ್ಣಾ ಹಂದಿಗುಂದ, ರವಿ ಸಣ್ಣಕ್ಕಿ, ರವಿ ಸೋನವಾಲ್ಕರ, ಬಸವಪ್ರಭು ನಿಡಗುಂದಿ,ನಬಿಸಾಬ ಥರಥರಿ, ಶರೀಪ್ ಪಟೇಲ್, ಇರ್ಷಾದ ಪಿರಜಾದೆ, ಲಾಲಸಾಬ ಶೇಖ, ಅಜೀಜ ಡಾಂಗೆ, ಶ್ರೀಶೈಲ ಬಳಿಗಾರ, ರಾಮಚಂದ್ರ ಬಡಗನ್ನವರ, ಫ್ರಭಾಕರ ಬಂಗೆನ್ನವರ, ಪ್ರಕಾಶ ಮಾದರ, ಪುರಸಭೆ ಸದಸ್ಯರು, ಮೂಡಲಗಿ-ಗುರ್ಲಾಪೂರ ಪಟ್ಟಣದ ಪ್ರಮುಖರು ಸೇರಿದಂತೆ ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ, ಭಾರತ ಮಾತೆ, ಡಾ. ಶ್ಯಾಮಪ್ರಸಾದ ಮುಖರ್ಜಿ ಹಾಗೂ ಪಂಡಿತ ದೀನದಯಾಳ ಉಪಾದ್ಯೆ ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು. ಅರಭಾಂವಿ ಮಂಡಲದ ವಿವಿಧ ಮೊರ್ಚಾಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Related posts: