ಘಟಪ್ರಭಾ:ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಪಾಲಕರ ಆಧ್ಯ ಕರ್ತವ್ಯ: ವಿಠ್ಠಲ ಪಾಟೀಲ
ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಪಾಲಕರ ಆಧ್ಯ ಕರ್ತವ್ಯ: ವಿಠ್ಠಲ ಪಾಟೀಲ
ಘಟಪ್ರಭಾ ಎ 8 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಗ್ರಾಮದ ರಂಗಮಂದಿರದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯರಾದ ವಿಠ್ಠಲ ಪಾಟೀಲ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಪಾಲಕರ ಆಧ್ಯ ಕರ್ತವ್ಯವಾಗಿದೆ. ಅದಕ್ಕೆ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡುವ ಶಾಲೆಗಳಿಗೆ ದಾಖಲಿಸಿ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ರಾಜು ಬೈರುಗೋಳ ಮಾತನಾಡಿ ಪ್ರಾಥಮಿಕ ಶಿಕ್ಷಣ ಎನ್ನುವುದು ಒಂದು ಹಸಿ ಗೋಡೆ ಇದ್ದಂತೆ. ಇಲ್ಲಿ ಏನು ಕಲಿಸಿದರು ಮಕ್ಕಳು ಕಲಿಯುತ್ತಾರೆ ಅದಕ್ಕಾಗಿ ನಾವೆಲ್ಲರು ಇಂದು ಮಕ್ಕಳಿಗೆ ಒಂದು ಒಳ್ಳೆಯ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಪುತ್ರ ಲ. ಗುಂಡಪ್ಪಗೋಳ, ಮುಖಂಡರಾದ ವಿಠ್ಠಲ್ ಪಾಟೀಲ್, ಬಸವಂತ ಕಮತಿ, ರಾಜು ಬೈರುಗೋಳ, ಸಂಗೀತಾ ಯಕ್ಕುಂಡಿ, ಬೈರಪ್ಪಾ ಯಂಕ್ಕುಂಡಿ, ಸಂಗಯ್ಯ ಹೂನೂರ, ಬಸವರಾಜ ಹೊಸೂರ, ರಾಮಂಚದ್ರ ಗುಂಡಪ್ಪಗೋಳ, ಪರಸಪ್ಪ ವಗ್ಗ, ಬಸವರಾಜ ಪಂಡ್ರೋಳಿ, ಚಂದ್ರಕಾಂತ ಪತ್ತಾರ, ಮಲೀಕ್‍ಜಾನ್ ಮುಲ್ಲಾ, ಬಸವಪ್ರಭು ಗಡಹಿಂಗ್ಲಜ, ಎಸ್.ಸಿ.ದಂಡಿನ, ವಿನಯ ಪಾಟೀಲ, ಎಸ್.ಪಿ.ಗೋಸಬಾಳ ಸೆರಿದಂತೆ ಊರಿನ ಗುರು ಹಿರಿಯರು, ಪಾಲಕ ಪೋಷಕರು, ಯುವಕ ಸಂಘದ ಯುವಕರು ಉಪಸ್ಥಿತರಿದ್ದರು.
ಶಿಕ್ಷಕಿ ಎಸ್.ಬಿ.ಬಡಿಗೇರ ನಿರೂಪಿಸಿದರು, ಎನ್.ಡಿ.ಪೂಜೇರಿ ಸ್ವಾಗತಿಸಿದರು, ಎಸ್.ಬಿ.ಜಾಧವ ವಂದಿಸಿರು.