ಬೆಳಗಾವಿ: ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ
ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ
ಬೆಳಗಾವಿ ಮೇ 24: ಬೆಳಗಾವಿಯಲ್ಲಿ ಭೂಗತ ಪಾತಕ ಛೋಟಾ ಶಕೀಲ ಮತ್ತು ರಶೀದ ಮಲಬಾರಿ ಸಹಚರರಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ ಬಂಧಿತರಿಂದ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ
ಶಾರ್ಪ್ ಶೂಟರ್‌ಗಳಾದ ಮುಂಬೈ ಮೂಲದ ಬಿಲಾಲ್ ಖಾನ್ ಮತ್ತು ಬೆಂಗಳೂರಿನ ಸಯದ್ ಅಲೀ ಎಂಬುವರನ್ನು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ.
ಛೋಟಾ ಶಕೀಲ್ ಮತ್ತು ಮಲಬಾರಿ ಗ್ಯಾಂಗಿನ ಶಾರ್ಪ್ ಶೂಟರ್ ಬಿಲಾಲ್ ಖಾನ್ ಮೇಲೆ ಸಾಕಷ್ಟು ಕೊಲೆ ಪ್ರಕರಣಗಳಿದ್ದು, ಈತ ಮುಂಬೈ ಪೊಲೀಸರ ಲಿಸ್ಟ್‌ನಲ್ಲಿ ಪ್ರಮುಖ ಆರೋಪಿಯಾಗಿದ್ದ.
ಮಲಬಾರಿ ಸಹಚರರನ್ನ ಬಂಧಿಸಲು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣ ಭಟ್ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಅದರಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ