ಮೂಡಲಗಿ:ಡಾ: ರಂಗಣ್ಣಾ ಸೋನವಾಲ್ಕರ ಅವರ ಕಾರ್ಯ ಶ್ಲಾಘನೀಯ : ಶ್ರೀ ಶ್ರೀಪಾದಬೋಧ ಸ್ವಾಮಿಜಿ
ಡಾ: ರಂಗಣ್ಣಾ ಸೋನವಾಲ್ಕರ ಅವರ ಕಾರ್ಯ ಶ್ಲಾಘನೀಯ : ಶ್ರೀ ಶ್ರೀಪಾದಬೋಧ ಸ್ವಾಮಿಜಿ
ಮೂಡಲಗಿ ಎ 10 : ಹಿಂದೆಲ್ಲಾ ನಲ್ವತ್ತು ವಯಸ್ಸಿನ ಮೇಲ್ಪಟ್ಟವರು ಕನ್ನಡ ಧರಿಸುತ್ತಿದ್ದರು ಆದರೆ ಇಂದು ಆಧುನಿಕತೆಯ ಪರಿಣಾಮ ಹಾಗೂ ತಂದೆ-ತಾಯಿಗಳ ನಿರ್ಲಕ್ಷದಿಂದ ಪುಟ್ಟ ಪುಟ್ಟ ಮಕ್ಕಳಿಗೂ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುವದು ವಿಷಾಧನೀಯ ಎಂದು ಸ್ಥಳಿಯ ಸಿದ್ದಸಂಸ್ಥಾಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋಧ ಸ್ವಾಮಿಜಿ ಹೇಳಿದರು.
ಅವರು ಇಲ್ಲಿಯ ದಿ.ನಿಂಗಪ್ಪ ರಂ.ಸೋನವಾಲ್ಕರ ಇವರ ಸ್ಮರಣಾರ್ಥ ನಗರದ ಶಿವಾಪೂರ(ಹ) ರಸ್ತೆಯಲ್ಲಿರುವ ಶ್ರೀ ಶ್ರೀನಿವಾಸ ಶಾಲೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಹಾಗೂ ಹುಬ್ಬಳ್ಳಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಎಂ.ಎಂ.ಜೋಶಿ ಇವರ ಸಂಯುಕ್ರಾಶ್ರಯದಲ್ಲಿ ಶ್ರೀನಿವಾಸ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂದು ಶಸ್ತ್ರ ಚಿಕಿತ್ಸ್ಸೆ ದುಬಾರಿಯಾಗಿದು ಅಂತಹದರಲ್ಲಿ ಡಾ: ರಂಗಣ್ಣಾ ಸೋನವಾಲ್ಕರ ಅವರು ತಮ್ಮ ತಂದೆಯವರ ಸ್ಮರಣಾರ್ಥ ಸಮಾಜ ಕಾರ್ಯ ನಡೆಸುತ್ತಿರುವು ಅವರ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ರಂಗಣ್ಣ ಸೋನವಾಲ್ಕರ ಮಾತನಾಡಿ, ನಮ್ಮ ತಂದೆಯವರ ಆಶೀರ್ವಾದದಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದು, ತಂದೆ ಹೆಸರಿನಲ್ಲಿ ಉತ್ತಮ ಕಾರ್ಯಗಳನ್ನು ನಡೆಸುವುದು ನನ್ನ ಬಹುದಿನದ ಕನಸು, ಆ ಕನಸಿಗೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ಈ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಮುಂದೆಯು ಸಹ ಕೈಗೊಳ್ಳಲಾಗುತ್ತಿರುವ ವಿವಿಧ ಸಮಾಜ ಕಾರ್ಯಗಳನ್ನು ಮೂಡಲಗಿ ಭಾಗದ ಜನತೆ ಸದುಪಯೋಗ ಪಡೆದುಕೊಳ್ಳ ಬೇಕೆಂದರು.
ಹುಬ್ಬಳ್ಳಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಎಂ.ಎಂ.ಜೋಶಿ ಆಸ್ಪತ್ರೆಯ ನೇತ್ರ ತಜ್ಞೆ ಡಾ: ಲಕ್ಷ್ಮೀ ಪ್ರೀಯಾ, ವ್ಹಿ.ಜಿ.ಕಟ್ಟಿ, ಚಂದ್ರು, ಶಾಲೆಯ ಮುಖ್ಯೋಪಾಧ್ಯಾಯ ಸುದೀರ ಟಿ.ಜಿ, ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ಹನಮಂತ ಸೋರಗಾವಿ ಮತ್ತಿತರು ಇದ್ದರು.
ಈ ಶಿಬಿರದಲ್ಲಿ ಸುಮಾರು 200 ಹೆಚ್ಚು ಜನರ ನೇತ್ರ ಚಿಕಿತ್ಸೆ ತಪಾಸಣೆ ಗೈಯಲ್ಲಾಯಿತು. 60 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಶಿಕ್ಷಕ ನಿಶ್ಚಿತ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ರೇಣುಕಾ ಅಂಬಿಗ ವಂದಿಸಿದರು.