RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ

ಗೋಕಾಕ:ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ 

ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ

ಗೋಕಾಕ ಎ 10 : ಕಳೆದ ಕೆಲವು ಗಂಟೆಗಳಿಂದ ಜಿಲ್ಲೆಯಾದ್ಯಂತ ಹರಡಿರುವ ಕಾಂಗ್ರೇಸ ಪಕ್ಷದ ಆಕಾಂಕ್ಷಿಗಳ ಪಟ್ಟಿಯ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಐಸಿಸಿ ಯಿಂದ ಇನ್ನೂ ಯಾವುದೇ ಅಧಿಕೃತ ಪಟ್ಟಿ ಹೊರಡಿಸಲ್ಲಾ ಎಂದು ತಿಳಿದು ಬಂದಿದೆ . ಈ ಕುರಿತು ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿಯಾಗಿರುವ ವೇಣುಗೋಪಾಲ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ ನಮ್ಮ ಬೆಳಗಾವಿ ವಾರ್ತೆಗೆ ಲಭ್ಯವಾಗಿದೆ .


ಈ ಕುರಿತು ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಅವರು ಕೂಡ ಸ್ವಷ್ಟನೆ ನೀಡಿ ಇನ್ನೂ ದೆಹಲಿಯಲ್ಲಿ ಸ್ಕ್ರಿನಿಂಗ ಸಭೆ ನಡೆದ್ದಿದು ಯಾವುದೇ ಅಧಿಕೃತ ಪ್ರಕಟಣೆ ಎಐಸಿಸಿ ಯಿಂದ ಪ್ರಕಟಣೆ ಗೊಂಡಿಲ್ಲಾ . ಜಿಲ್ಲೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ನಾನೂ ಸ್ವರ್ಧಿಸುದಿಲ್ಲಾ ಎಂದು ಹಬ್ಬಿದ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಯಮಕನಮರಡಿಗೆ ನನ್ನ ಹೆಸರೇ ಹೈಕಮಾಂಡದವರು ಅಂತಿಮ ಗೊಳಿಸಲ್ಲಿದ್ದಾರೆ . ಅಭಿಮಾನಿಗಳು, ಮತದಾರರು ಮತ್ತು ಹಿತೈಸಿಗಳು ಆತಂಕಕ್ಕೆ ಒಳಗಾಗಬೇಡಿ ಎಂದು ದೂರವಾಣಿಯಲ್ಲಿ ನಮ್ಮ ಬೆಳಗಾವಿ ಇ-ವಾರ್ತೆ ಯೊಂದಿಗೆ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ಅವರು ತಿಳಿಸಿದ್ದಾರೆ

Related posts: