ಘಟಪ್ರಭಾ:ವಿವಿ ಪ್ಯಾಟ್ ಬಗ್ಗೆ ಮತದಾರರಿಗೆ ತಿಳಿವಳಿಕೆ ಕಾರ್ಯಕ್ರಮ
ವಿವಿ ಪ್ಯಾಟ್ ಬಗ್ಗೆ ಮತದಾರರಿಗೆ ತಿಳಿವಳಿಕೆ ಕಾರ್ಯಕ್ರಮ
ಘಟಪ್ರಭಾ ಋ 11 : ವಿವಿ ಪ್ಯಾಟ್‍ನಲ್ಲಿ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆಯಾದ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದೆಂದು ಮಾಸ್ಟರ್ ಪುನರ್ ಅಧಿಕಾರಿ ಶಿವಾನಂದ ಧೂಳಾಯಿ ಹೇಳಿದರು.
ಅವರು ಬುಧುವಾರದಂದು ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಮತದಾನ ಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರವನ್ನು ಬಳಸಿ ಮತ ಚಲಾವಣೆ ಮಾಡುವ ಕುರಿತು ಆಯೋಜಿಸಿದ್ದ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಮತದಾರರಿಗೆ ಮತ ಯಂತ್ರ ಹಾಗೂ ವಿವಿ ಪ್ಯಾಟ್ ಉಪಯೋಗಿಸುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಂ.ದಳವಾಯಿ, ಮುಖ್ಯಾಧಿಕಾರಿ ಕೆ.ಬಿ. ಪಾಟೀಲ, ಪ.ಪಂ ಸದಸ್ಯರಾದ ಸದಸ್ಯರಾದ ಗಂಗಾಧರ ಬಡಕುಂದ್ರಿ, ಮಲ್ಲಪ್ಪ ಕೋಳಿ, ಸಲೀಮ ಕಬ್ಬೂರ, ಪ್ರವೀಣ ಮಟಗಾರ, ಇಮ್ರಾನ ಬಟಕುರ್ಕಿ, ಈರಗೌಡ ಕಲಕುಟಗಿ, ರಾಮಪ್ಪಾ ನಾಯಿಕ, ನಾಗರಾಜ ಚಚಡಿ, ಮಾರುತಿ ಹುಕ್ಕೇರಿ, ಗ್ರಾಮಸ್ಥರಾದ ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶೇಖರ ಕುಲಗೋಡ, ಲಕ್ಷ್ಮಣ ಮೇತ್ರಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.