RNI NO. KARKAN/2006/27779|Saturday, December 14, 2024
You are here: Home » breaking news » ಬೆಳಗಾವಿ:ಯವ ಉತ್ಸಾಹಿ ಯುವಕ ವಿಸ್ವಾಸ ವೈದ್ಯಗೆ ಸವದತ್ತಿ “ಕೈ” ಟಿಕೆಟ್ ಪಕ್ಕಾ ಅಂತೆ

ಬೆಳಗಾವಿ:ಯವ ಉತ್ಸಾಹಿ ಯುವಕ ವಿಸ್ವಾಸ ವೈದ್ಯಗೆ ಸವದತ್ತಿ “ಕೈ” ಟಿಕೆಟ್ ಪಕ್ಕಾ ಅಂತೆ 

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿಸ್ವಾಸ ವೈದ್ಯ

ಯವ ಉತ್ಸಾಹಿ ಯುವಕ ವಿಸ್ವಾಸ ವೈದ್ಯಗೆ ಸವದತ್ತಿ “ಕೈ” ಟಿಕೆಟ್ ಪಕ್ಕಾ ಅಂತೆ
ಬೆಳಗಾವಿ ಎ 12 : ಬಹು ನಿರೀಕ್ಷಿತ ಸವದತ್ತಿ ಕ್ಷೇತ್ರದ ಕೈ ಟಿಕೆಟ್ ಪೈಪೋಟಿಯಲ್ಲಿ ಕೊನೆಗೂ ಯುವ ಉತ್ಸಾಹಿ ಯುವಕ ವಿಸ್ವಾಸ ವೈದ್ಯ ಕೈ ಮೇಲಾಗಿದೆ .

ಬೆಳಗಾವಿ ಜಿಲ್ಲಾ ಟಿಕೆಟ್ ಹಂಚಿಕೆ ಉಸ್ತುವಾರಿ ಹೊತ್ತು ಕೊಂಡಿದ ಜಾರಕಿಹೊಳಿ ಸಹೋದರರಲ್ಲಿ ಕಿರಿಯ ಸಹೋದರ ಸತೀಶ ಜಾರಕಿಹೊಳಿ ಅವರ ಅಪಟ್ಟ ಬೆಂಬಲಿಗ ವಿಸ್ವಾಸ ವೈದ್ಯ ಅವರಿಗೆ ಹೈಕಮಾಂಡ್ ಅಸ್ತು ಎನ್ನುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎಂದು ತಿಳಿದು ಬಂದಿದೆ ಇಂದು ತಡರಾತ್ರಿ ಅಥವಾ ನಾಳೆ ಕೈ ಪಾಳೆಯದ ಮೊದಲನೇ ಪಟ್ಟಿ ಹೊರಬೀಳುವ ಸಾದ್ಯತೆ ಇದೆ ಎನ್ನಲಾಗುತ್ತಿದೆ .

ಬುಹು ದಿನಗಳಿಂದ ಸವದತ್ತಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಲವು ಕ್ರೀಯಾತ್ಮಕ ಕಾರ್ಯಗಳನ್ನು ಮಾಡಿ ಈ ಬಾರಿ ಕೈ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದ ಆನಂದ ಚೋಪ್ರಾ ಗೆ ಮತ್ತೋಮ್ಮೆ ಕೈ ಟಿಕೆಟ್ ಕೈ ತಪ್ಪುವ ಸಾದ್ಯತೆ ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ . ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೈಕಮಾಂಡ್ ಮುಂದೆ ಚೋಪ್ರಾ ಪರ ಒಲವು ತೋರಿದರು ಆದರೆ ಇದರಲ್ಲಿ ಮಾಜಿ ಸಚಿವ ಎಐಸಿಸಿ ಕಾರ್ಯದರ್ಶಿ ಸತೀಶ ಅವರ ಮಾತಿಗೆ ಮಣೆಹಾಕಿದೆ ಎನ್ನಲಾಗುತ್ತಿದೆ . ಅಧಿಕೃತವಾಗಿ ಕೈ ಪಟ್ಟಿ ಬಿಡುಗಡೆಗೊಂಡ ಮೇಲಷ್ಟೇ ಎಲ್ಲ ಗೊಂದಲಗಳಿಗೆ ತೆರೆ ಬಿಳಲ್ಲಿದೆ

Related posts: